ಬೌದ್ಧ, ಹಿಂದೂ ಬಿಟ್ಟು ಎಲ್ಲ ನುಸುಳುಕೋರರನ್ನು ಹೊರಗಟ್ಟುತ್ತೇವೆ: ಶಾ
ಡಾರ್ಜಲಿಂಗ್, ಏಪ್ರಿಲ್ 11: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂ ಮತ್ತು ಬೌದ್ಧರನ್ನು ಹೊರತುಪಡಿಸಿ ಇನ್ನೆಲ್ಲಾ ನುಸುಳುಕೋರರನ್ನು ದೇಶದಿಂದ ಹೊರಗಟ್ಟುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೊಂದಣಿ) ಅನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಗುವುದು ಎಂದಿದ್ದಾರೆ.
ಹಿಂದೂ ಮತ್ತು ಬೌದ್ಧ ನುಸುಳುಕೋರರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡಿ ಭಾರತೀಯ ಪ್ರಜೆಗಳಾಗುವಂತೆ ಮಾಡಲಾಗುವುದು, ಉಳಿದ ನುಸುಳುಕೋರರನ್ನು ಗುರುತಿಸಿ ಹೊರಗಟ್ಟಲಾಗುವುದು ಎಂದಿರುವ ಅಮಿತ್ ಶಾ, ನಿರಾಶ್ರಿತರರು ದೇಶಕ್ಕೆ ಹಿಡಿದ ಗೆದ್ದಲದಂತೆ ಎಂದು ಕರೆದಿದ್ದಾರೆ.

ಮಮತಾ ಬ್ಯಾನರ್ಜಿಯ ಮೇಲೂ ಹರಿಹಾಯ್ದಿರುವ ಅಮಿತ್ ಶಾ, ಟಿಎಂಸಿ ಎಂದರೆ ತುಷ್ಟೀಕರಣ, ಮಾಫಿಯಾ ಮತ್ತು ಚಿಟ್‌ಫಂಡ್ ಎಂದು ಹೇಳಿದ್ದಾರೆ. ಮಮತಾ ಅವರು ಎನ್‌ಆರ್‌ಸಿ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್‌ಗೆ ಮೋದಿ ಸರ್ಕಾರವು ಪಾಕಿಸ್ತಾನದ ವಿರುದ್ಧ ಕೈಗೊಂಡ ಕ್ರಮ ಇಷ್ಟವಾಗಲಿಲ್ಲ, ಅವರ ಮೇಲೆ ನಡೆದ ದಾಳಿ ಇವರಿಗೆ ಬೇಸರ ತಂದಿದೆ ಎಂದು ಹೆಳಿದ ಶಾ, ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 23 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.












Click it and Unblock the Notifications