ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎನ್‌ಯು ಗಲಭೆ; ಮಗಳು ಹೋರಾಟದಿಂದ ಹಿಂದೆ ಸರಿಯಲ್ಲ

|
Google Oneindia Kannada News

ಕೋಲ್ಕತ್ತಾ, ಜನವರಿ 06 : "ನನ್ನ ಮಗಳ ಮೇಲೆ ಹಲ್ಲೆಯಾಗಿದೆ. ನಾಳೆ ಮತ್ತೊಬ್ಬರ ಮೇಲೆ ಆಗಬಹುದು. ಯಾರಿಗೆ ಗೊತ್ತು ನನ್ನ ಮೇಲೆಯೂ ಆಗಬಹುದು. ನಮಗೆ ಭಯವಾಗುತ್ತಿದೆ" ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷ್ ಘೋಷ್ ತಂದೆ ಹೇಳಿದ್ದಾರೆ.

ಭಾನುವಾರ ರಾತ್ರಿ ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಐಷ್ ಘೋಷ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೆಎನ್‌ಯು ಗಲಭೆ; ಅರವಿಂದ್ ಕೇಜ್ರಿವಾಲ್ ಹೇಳುವುದೇನು?ಜೆಎನ್‌ಯು ಗಲಭೆ; ಅರವಿಂದ್ ಕೇಜ್ರಿವಾಲ್ ಹೇಳುವುದೇನು?

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಐಷ್ ಘೋಷ್ ತಂದೆ ಮತ್ತು ತಾಯಿ ಹಲ್ಲೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ದೇಶದ ಪರಿಸ್ಥಿತಿ ಯಾವುದೇ ಕ್ಷಣದಲ್ಲಿಯೂ ಬದಲಾಗಬಹುದು. ಹೋರಾಟದಿಂದ ಹಿಂದೆ ಸರಿಯುವಂತೆ ಮಗಳಿಗೆ ಸಲಹೆ ನೀಡುವುದಿಲ್ಲ" ಎಂದು ಐಷ್ ಘೋಷ್ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ವಾರಾಂತ್ಯದಲ್ಲಿ ಭುಗಿಲೆದ್ದ JNU, ಕ್ಯಾಂಪಸಿನಲ್ಲಿ ನಡೆದಿದ್ದೇನು?ವಾರಾಂತ್ಯದಲ್ಲಿ ಭುಗಿಲೆದ್ದ JNU, ಕ್ಯಾಂಪಸಿನಲ್ಲಿ ನಡೆದಿದ್ದೇನು?

We Never Ask Her To Back Out Of Protests Aishe Ghosh Parents

"ವಿಶ್ವವಿದ್ಯಾಲಯ ಆವರಣದಲ್ಲಿಯೇ ಮಗಳ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯ ಬಳಿಕ ಆಕೆಯ ಜೊತೆ ನಾವು ಮಾತನಾಡಿಲ್ಲ. ಆಕೆಯ ತಲೆಗೆ ಗಾಯಗಳಾಗಿದ್ದು, 5 ಹೊಲಿಗೆ ಹಾಕಲಾಗಿದೆ" ಎಂಬ ಮಾಹಿತಿ ಸಿಕ್ಕಿದೆ ಎಂದು ಪೋಷಕರು ಹೇಳಿದ್ದಾರೆ.

ಜೆಎನ್‌ಯು ಆವರಣದಲ್ಲಿ ಗಲಭೆ; ವರದಿ ಕೇಳಿದ ಅಮಿತ್ ಶಾಜೆಎನ್‌ಯು ಆವರಣದಲ್ಲಿ ಗಲಭೆ; ವರದಿ ಕೇಳಿದ ಅಮಿತ್ ಶಾ

"ಮಗಳ ಮೇಲೆ ವಿವಿ ಆವರಣದಲ್ಲಿ ಹಲ್ಲೆ ನಡೆದಿದೆ. ವಿವಿಯ ಕುಲಪತಿಗಳು ರಾಜೀನಾಮೆ ನೀಡಬೇಕು. ಪುತ್ರಿ ಮೊದಲಿನಿಂದಲೇ ಎಡಪಂಥೀಯ ಸಂಘಟನೆಗಳ ಜೊತೆ ಇದ್ದಾಳೆ. ಎಡಪಂಥೀಯ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದೆ" ಎಂದು ಆರೋಪಿಸಿದ್ದಾರೆ.

"ನನ್ನ ಮಗಳ ಹೋರಾಟದ ಜೊತೆಗೆ ಹಲವು ವಿದ್ಯಾರ್ಥಿಗಳಿದ್ದಾರೆ. ಎಲ್ಲರಿಗೂ ಗಾಯಗಳಾಗಿವೆ. ಕೆಲವರಿಗೆ ಹೆಚ್ಚು ಪೆಟ್ಟಾಗಿದೆ. ಹೋರಾಟದಿಂದ ಹಿಂದೆ ಸರಿಯುವಂತೆ ಪುತ್ರಿಗೆ ಸಲಹೆ ನೀಡುವುದಿಲ್ಲ" ಎಂದು ಐಷ್ ಘೋಷ್ ತಾಯಿ ತಿಳಿಸಿದರು.

English summary
There are so many boys and girls with her in this movement. We will never ask her to back out of the protests said JNUSU president Aishe Ghosh parents. Aishe Ghosh injured in violence at JNU campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X