ಅಂಫಾನ್ ಚಂಡಮಾರುತ 2.0:ಕೊಲ್ಕತ್ತದಲ್ಲಿ ಮತ್ತೆ ವರುಣನ ಆರ್ಭಟ

ಕೊಲ್ಕತ್ತ, ಮೇ 28: ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತದ ಎರಡನೇ ಅಧ್ಯಾಯ ಆರಂಭವಾಗಿದೆ.

Recommended Video

      ಚೀನಾ ಭಾರತ ಗಡಿ ವಿವಾದ ಬಗೆಹರಿಸಲು ಮುಂದಾದ ಅಮೇರಿಕಾ | Oneindia Kannada

      ಕಳೆದ ಒಂದು ವಾರದ ಹಿಂದಷ್ಟೇ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳ, ಬಾಂಗ್ಲಾದೇಶದ ಜನರಿಗೆ ನರಕವನ್ನೇ ಸೃಷ್ಟಿ ಮಾಡಿತ್ತು. ಸಾವಿರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದವು. ಬಹಳಷ್ಟು ಮನೆಗಳು ಜಲಾವೃತವಾಗಿತ್ತು.

      ಇದೀಗ ಅಂಫಾನ್ ಚಂಡಮಾರುತದ ಎರಡನೇ ಅಧ್ಯಾಯ ಆರಂಭವಾಗಿದೆ. ಕೊಲ್ಕತ್ತದಲ್ಲಿ ವರುಣನ ಆರ್ಭಟ ಮರುಕಳಿಸಿದೆ. ಗಾಳಿಯು ಪ್ರತಿ ಗಂಟೆಗೆ 96 ಕಿ.ಮೀ ವೇಗದಲ್ಲಿ ಬೀಸಿದೆ. ಸಂಜೆ 6.23ರ ಸುಮಾರಿಗೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ.

      Thunderstorm Rips Through Kolkata At 96 kmph Week After Cyclone Amphan

      ಕಳೆದ ಬುಧವಾರ ಅಂಫಾನ್ ಚಂಡಮಾರುತ ಸಂಜೆ ಸುಮಾರು 6.47ರ ಸುಮಾರಿಗೆ ಆಗಮಿಸಿತ್ತು. ಗಾಳಿಯು 114 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. 7.20ರ ಸುಮಾರಿಗೆ 133 ಕಿ.ಮೀ ವೇಗದಲ್ಲಿ ಗಾಳಿ ಚಲಿಸಿತ್ತು.

      ಅಂಫಾನ್ ಚಂಡಮಾರುತ ಆರಂಭವಾದ ದಿನ ಸತತ ನಾಲ್ಕು ಗಂಟೆಗಳ ಕಾಲ ಮಳೆಯಾಗಿತ್ತು. ಆದರೆ ಅದೃಷ್ಟವಶಾತ್ ಮೇ 27 ರಂದು ಸುರಿದ ಮಳೆ ಅರ್ಧಗಂಟೆಗೆ ನಿಂತಿತ್ತು.
      ಇಷ್ಟು ದಿನಗಳ ಕಾಲ ಕೊರೊನಾ ಲಾಕ್‌ಡೌನ್‌ನಿಂದಾಗಿ ವ್ಯಾಪಾರ ವಹಿವಾಟುಗಳು ಬಂದ್ ಆಗಿದ್ದವು ಆದರೆ ಈಗ ಚಂಡಮಾರುತದಿಂದಾಗಿ ಅನಿವಾರ್ಯವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.

      ಕೇವಲ ಕೊಲ್ಕತ್ತ ಮಾತ್ರವಲ್ಲದೆ ಮಿಡ್ನಾಪುರ, ಬಂಕುರ, ಪುರುಲಿಯಾ, ಹೌರಾದಲ್ಲೂ ಮಳೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+