ವೈದ್ಯರ ನಂತರ ದೀದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಶಿಕ್ಷಕರು

ಕೊಲ್ಕತ್ತ, ಜೂನ್ 17: ದೇಶವೇ ಗಮನಿಸುವಂತೆ ಪಶ್ಚಿಮ ಬಂಗಾಳದ ವೈದ್ಯರು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು, ಅದೇನು ಇನ್ನು ಅಂತ್ಯವಾಯಿತು ಎನ್ನುವ ಹೊತ್ತಿಗೆ ಶಿಕ್ಷಕರು ಮಮತಾ ಬ್ಯಾನರ್ಜಿ ವಿರುದ್ಧ ಬೀದಿಗೆ ಇಳಿದಿದ್ದಾರೆ.

ಕಳೆದ ಆರು ದಿನಗಳಿಂದಲೂ ಶಿಕ್ಷಕರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರು, ಇಂದು ಶಿಕ್ಷಣ ಮಂತ್ರಿ ಅವರನ್ನು ಭೇಟಿ ಆಗಲು ಶಿಕ್ಷಕರು ಸಮಯ ಕೇಳಿದ್ದರು, ಆದರೆ ಅವರು ಸಮಯ ನೀಡಲಿಲ್ಲ ಇದರಿಂದ ರೊಚ್ಚಿಗೆದ್ದ ಶಿಕ್ಷಕರು ಬಿಕಾಶ ಭವನ್ ಒಳಕ್ಕೆ ನುಗ್ಗುವ ಯತ್ನ ಮಾಡಿದರು.

ಸಂಬಳ ಹೆಚ್ಚಳ ಸೇರಿದಂತೆ ಇನ್ನೂ ಒತ್ತಾಯಗಳ ಈಡೇರಿಕೆಗೆಂದು ಶಿಕ್ಷಕರು ಕಳೆದ ಒಂದು ವಾರದಿಂದಲೂ ಸರ್ಕಾರದ ವಿರುದ್ಧ ಶಾಂತಿ ರೀತಿಯಿಂದ ಪ್ರತಿಭಟನೆ ಮಾಡುತ್ತಿದ್ದರು, ಆದರೆ ಇಂದು ಪ್ರತಿಭಟನೆ ಉಗ್ರ ರೂಪ ಪಡೆಯಿತು.

Teachers protesting against West Bengal government

ಶಿಕ್ಷಕರು ಬ್ಯಾರಿಕೆಡ್‌ಗಳನ್ನು ಮುರಿದು ಬಿಕಾಶ ಭವನ್ ಒಳನುಗ್ಗಲು ಯತ್ನಿಸಿದರು, ಈ ಸಮಯ ಪೊಲೀಸರು ಶಿಕ್ಷಕರನ್ನು ತಡೆದರು.

ಮತ್ತೊಂದು ಕಡೆ ಕಳೆದ ವಾರದಿಂದಲೂ ವೈದ್ಯರು ದೀದಿ ಸರ್ಕಾರದ ವಿರುದ್ಧ ಮಾಡುತ್ತಿದ್ದ ಪ್ರತಿಭಟನೆಯನ್ನು ಸಂಧಾನದ ಮೂಲಕ ಮುರಿಯುವಲ್ಲಿ ಇಂದು ದೀದಿ ಯಶಸ್ವಿಯಾಗಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಇಂದು ವೈದ್ಯರೊಂದಿಗೆ ಮಾತನಾಡಿದ್ದು, ಕಿರಿಯ ವೈದ್ಯರು ಪ್ರತಿಭಟನೆಯನ್ನು ಹಿಂಪಡೆದು ಸೇವೆಗೆ ಮರಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+