ಟಿಎಂಸಿ ಕಾರ್ಯಕರ್ತರಿಂದ ಸುವೇಂದು ಅಧಿಕಾರಿ ಕಚೇರಿ ಧ್ವಂಸ: ಆರೋಪ
ಕೋಲ್ಕತ್ತ, ಜನವರಿ 10: ಇತ್ತೀಚೆಗಷ್ಟೇ ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಗೊಂಡಿರುವ ಸುವೇಂದು ಅಧಿಕಾರಿ ಕಚೇರಿಯನ್ನು ಟಿಎಂಸಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಟಿಎಂಸಿ ಸರ್ಕಾರದ ಮಾಜಿ ಸಚಿವ ಸುವೇಂದು ಅಧಿಕಾರಿ ಸೇರಿದಂತೆ ಅನೇಕ ಮುಖಂಡರು ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಕೃತ್ಯದ ಹಿಂದಿರುವ ವ್ಯಕ್ತಿಗಳನ್ನು ಬಂಧಿಸುವಂತೆ ಬಿಜೆಪಿ ಒತ್ತಾಯಿಸಿದೆ.
ಟಿಎಂಸಿ ಕಾರ್ಯಕರ್ತರಿಂದ ಆಗಿರುವ ಘಟನೆ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಆಡಳಿತ ಅವರ ಕೈಯಲ್ಲಿರುವುದರಿಂದ ತೋಳ್ಬಲ ಬಳಸಿ ಈ ರೀತಿಯ ಕೃತ್ಯವೆಸಗಲಾಗಿದೆ ಎಂದು ಬಿಜೆಪಿ ಮುಖಂಡ ಕಾನಿಷ್ಕ ಪಾಂಡೆ ಹೇಳಿದ್ದಾರೆ.

ಆರೋಪಿಗಳನ್ನು ಬಂಧಿಸಿದಿದ್ದರೆ, ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಸಂಭವಿಸುವ ಘಟನೆಗಳಿಗೆ ನೀವೆ ಹೊಣೆ ವಹಿಸಿಕೊಳ್ಳಬೇಕಾಗುತ್ತದೆ ಎಂದು ಆಡಳಿತಕ್ಕೆ ಹೇಳಿರುವುದಾಗಿ ತಿಳಿಸಿದ ಪಾಂಡೆ, ಸರ್ಕಾರದ ವಿರುದ್ಧದ ಹೋರಾಟವನ್ನು ಮುಂದುವರೆಸುವುದಾಗಿ ಸವಾಲು ಹಾಕಿದರು.
ಬಿಜೆಪಿಯವರು ಯಾವಾಗಲೂ ಸುಳ್ಳು ಹೇಳುತ್ತಾ, ಅದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಟಿಎಂಸಿ ಧ್ವಜ ಮತ್ತು ಮಮತಾ ಬ್ಯಾನರ್ಜಿ ಭಾವಚಿತ್ರವನ್ನು ಹರಿದು ಬೆಂಕಿ ಹಚ್ಚಿದ್ದಾರೆ. ಮೊದಲು ತಮ್ಮ ಮನೆಯವರನ್ನು ಹದ್ದುಬಸ್ತಿನಲ್ಲಿಟ್ಟು ನಂತರ ಟಿಎಂಸಿಯನ್ನು ದೂಷಿಸಲಿ ಎಂದು ಅವರು ಹೇಳಿದರು.
ಈ ಘಟನೆಗೆ ಬಿಜೆಪಿಯ ಹಳೆಯ ಕಾರ್ಯಕರ್ತರು ಕಾರಣ ಎಂದು ಟಿಎಂಸಿ ಪೂರ್ವ ಮಿಡ್ನಾಪುರ ಜಿಲ್ಲೆಯ ಉಪಾಧ್ಯಕ್ಷ ಎಸ್ ಕೆ ಸೂಫಿಯಾನ್ ಹೇಳಿದ್ದಾರೆ.












Click it and Unblock the Notifications