ಕಾಲೇಜಿನ ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಟಾಪರ್!

ಕೋಲ್ಕತಾ, ಆಗಸ್ಟ್ 29: ನಟಿ ಸನ್ನಿ ಲಿಯೋನ್ ಮತ್ತೆ ಕಾಲೇಜಿಗೆ ಸೇರಲಿದ್ದಾರೆ. ಬಿಎ ಪದವಿಗೆ ಸನ್ನಿ ಲಿಯೋನ್ ಪ್ರವೇಶ ಪಡೆದಿದ್ದಾರೆ. ಮುಂದಿನ ಸೆಮೆಸ್ಟರ್‌ನಲ್ಲಿ ಕಾಲೇಜಲ್ಲಿ ಭೇಟಿಯಾಗೋಣ ಎಂದು ಅವರು ಹೇಳಿದ್ದಾರೆ!- ಈ ಕಾಲದಲ್ಲಿ ಸನ್ನಿಗೇಕೆ ಓದುವ ಆಸೆ ಎಂಬ ಅಚ್ಚರಿಯೇ? ಸನ್ನಿ ಲಿಯನ್ ಹೆಸರು ಕಾಲೇಜಿನಲ್ಲಿ ಕಾಣಿಸಿಕೊಂಡಿರುವುದು ಹೊಸತೇನಲ್ಲ. ಹಿಂದೆಯೂ ಇಂತಹದ್ದೊಂದು ತಮಾಷೆಯ ಘಟನೆ ಸುದ್ದಿಯಾಗಿತ್ತು.

ಕೋಲ್ಕತಾದ ಅಶುತೋಷ್ ಕಾಲೇಜ್‌ ಬಿಎ (ಆನರ್ಸ್) ಇಂಗ್ಲಿಷ್ ವಿಭಾಗಕ್ಕೆ ಪ್ರವೇಶ ಪಡೆದವರ ಮೊದಲ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅದರ ಮೊದಲ ಹೆಸರು ಸನ್ನಿ ಲಿಯೋನ್ ಅವರದ್ದು. 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಸರಿಯಾಗಿ 400 ಅಂಕಗಳನ್ನು ಪಡೆದ ಸಾಧನೆ ಮಾಡಿರುವ ಸನ್ನಿ ಲಿಯೋನ್ ಹೆಸರಿನ ಜತೆಗೆ ಅಪ್ಲಿಕೇಷನ್ ಐಡಿ ಮತ್ತು ಪ್ರವೇಶ ಸಂಖ್ಯೆಯನ್ನು ಪ್ರಕಟಿಸಲಾಗಿದೆ.

ಈ ಸುದ್ದಿಯನ್ನು ತಿಳಿದ ಸನ್ನಿ ಲಿಯೋನ್ ಖುಷಿಯಾಗಿದ್ದಾರೆ! 'ಕಾಲೇಜ್‌ನ ಮುಂದಿನ ಸೆಮೆಸ್ಟರ್‌ನಲ್ಲಿ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ. ನೀವು ನನ್ನ ತರಗತಿಯಲ್ಲಿದ್ದೀರಿ ಎಂದು ಭಾವಿಸುತ್ತೇನೆ' ಎಂದು ಸನ್ನಿ ಲಿಯೋನ್ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

Sunny Leones Name In The Top Of The Kolkata College Merit List

ಕಾಲೇಜ್ ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರು ಇರುವುದು ಕಿಡಿಗೇಡಿಗಳ ಕೃತ್ಯ ಎಂದು ಆಡಳಿತ ಮಂಡಳಿ ಆರೋಪಿಸಿದೆ. ಯಾರೋ ಉದ್ದೇಶಪೂರ್ವಕವಾಗಿಯೇ ಸನ್ನಿ ಲಿಯೋನ್ ಹೆಸರನ್ನು ನಮೂದಿಸಿ ಸುಳ್ಳು ಅರ್ಜಿ ನೀಡಿದ್ದಾರೆ. ಅದನ್ನು ಸರಿಪಡಿಸುವಂತೆ ಪ್ರವೇಶಾತ ವಿಭಾಗಕ್ಕೆ ಸೂಚನೆ ನೀಡಿದ್ದೇವೆ. ಈ ಘಟನೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ತಿಳಿಸಿದೆ.

ಅಂದಹಾಗೆ, ಸನ್ನಿ ಲಿಯೋನ್ ಹೆಸರು ಮೆರಿಟ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದು ಮೊದಲ ಸಲವೇನಲ್ಲ. ಕಳೆದ ವರ್ಷ ಬಿಹಾರ ಪಬ್ಲಿಕ್ ಹೆಲ್ತ್ ಎಂಜಿನಿಯರಿಂಗ್ ಇಲಾಖೆಯ ಜೂನಿಯರ್ ಎಂಜಿನಿಯರ್ ಹುದ್ದೆಗೆ ಮಾಡಲಾಗಿದ್ದ ಕರಡು ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರು ಮೊದಲ ಸ್ಥಾನದಲ್ಲಿತ್ತು. ಎಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಅಭ್ಯರ್ಥಿಯು ಶೇ 98.5 ಅಂಕ ಗಳಿಸಿದ್ದರು ಎಂದು ನಮೂದಿಸಲಾಗಿತ್ತು. ಇದನ್ನು ಕೂಡ ಸನ್ನಿ ಲಿಯೋನ್ ತಮಾಷೆಯಾಗಿ ಪರಿಗಣಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+