ಮತದಾರರ ಗುರುತಿನ ಚೀಟಿಯಲ್ಲಿ ಮನುಷ್ಯನ ಬದಲು ನಾಯಿ ಫೋಟೋ

ಪಶ್ವಿಮ ಬಂಗಾಳ, ಮಾರ್ಚ್ 5: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ರಾಮನಗರ ಗ್ರಾಮದಲ್ಲಿ ಎಡವಟ್ಟೊಂದು ನಡೆದಿದೆ. ಮತದಾರರ ಗುರುತಿನ ಚೀಟಿಯಲ್ಲಿ ಮನುಷ್ಯನ ಭಾವಚಿತ್ರದ ಬದಲು ನಾಯಿ ಫೋಟೋ ಹಾಕಿಕೊಡಲಾಗಿದೆ.

ಸುನೀಲ್ ಕರ್ಮಕರ್ ಎಂಬ ವ್ಯಕ್ತಿಯ ಗುರುತಿನ ಚೀಟಿಯಲ್ಲಿ ನಾಯಿ ಫೋಟೋ ಹಾಕಲಾಗಿದ್ದು, ಬದಲಿ ಐಡಿ ಕಾರ್ಡ್‌ಗಾಗಿ ಮನವಿ ಸಲ್ಲಿಸಿ ಮತ್ತೆ ಹೊಸ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ.

''ನಿನ್ನೆ ದುಲಾಲ್ ಸ್ಮೃತಿ ಶಾಲೆಗೆ ನನ್ನನ್ನು ಕರೆಸಿ ಈ ವೋಟರ್ ಐಡಿ ಕಾರ್ಡ್ ಕೊಟ್ಟರು. ನಾನು ಫೋಟೋ ನೋಡಿದೆ, ನನ್ನ ಫೋಟೋ ಬದಲು ನಾಯಿ ಫೋಟೋ ಇತ್ತು. ಆಫೀಸರ್ ಸಹಿ ಕೂಡ ಹಾಕಿದ್ದರು. ಇದು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ. ನಾನು ಬಿಡಿಓ ಅಧಿಕಾರಿ ಬಳಿ ಹೋಗುತ್ತೇನೆ, ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸಬಾರದು'' ಎಂದು ಸುನೀಲ್ ತಿಳಿಸಿದ್ದರು.

Sunil Karmakar Got Voter ID Card With Dog Photov

ಗುರುತಿನ ಚೀಟಿಯಲ್ಲಿ ನಾಯಿ ಫೋಟೋ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಡಿಓ (ಬ್ಲಾಕ್ ಅಭಿವೃದ್ಧಿ ಅಧಿಕಾರಿ) ಅಧಿಕಾರಿ ಪ್ರತಿಕ್ರಿಯಿಸಿದ್ದು, ''ಫೋಟೋವನ್ನು ಸರಿಪಡಿಸಲಾಗಿದೆ, ಸರಿಯಾದ ಮತ್ತು ಉತ್ತಮವಾದ ಗುರುತಿನ ಚೀಟಿ ಅವರಿಗೆ ನೀಡಲಾಗುತ್ತೆ'' ಎಂದಿದ್ದಾರೆ.

''ಇದು ಅಂತಿಮ ಗುರುತಿನ ಚೀಟಿ ಅಲ್ಲ, ಇದರಲ್ಲಿ ಏನಾದರೂ ತಪ್ಪಿದ್ದಲ್ಲಿ ಅದನ್ನು ಮತ್ತೆ ಸರಿಪಡಿಸಲಾಗುವುದು. ಇನ್ನು ಈ ಫೋಟೋ ವಿಚಾರಕ್ಕೆ ಹೇಳುವುದಾದರೇ, ಆನ್ ಲೈನ್ ಅರ್ಜಿ ಸಲ್ಲಿಸುವ ವೇಳೆ ಯಾರೋ ತಪ್ಪಾಗಿ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಸರಿಪಡಿಸಲಾಗಿದೆ'' ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+