ಇಂಧನ ಸೋರಿಕೆ: ಕೊಲ್ಕತ್ತದಲ್ಲಿ ಸ್ಪೈಸ್‌ಜೆಟ್ ವಿಮಾನ ತುರ್ತು ಲ್ಯಾಂಡಿಂಗ್
ನವದೆಹಲಿ, ಫೆಬ್ರವರಿ 26: 180 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ಕೊಲ್ಕತ್ತದ ಸುಭಾಷ್ ಚಂದ್ರ ಭೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.
ಪೈಲಟ್‌ಗೆ ವಿಮಾನದಲ್ಲಿ ಇಂಧನ ಸೋರಿಕೆಯಾಗುತ್ತಿರುವುದರ ಬಗ್ಗೆ ಅನುಮಾನ ಬಂದ ಕಾರಣ ತುರ್ತು ಲ್ಯಾಂಡಿಂಗ್ ಮಾಡಸಲಾಯಿತು. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪರಿಶೀಲನೆ ನಡೆಯುತ್ತಿದ್ದು ಕೆಲವೇ ನಿಮಿಷಗಳಲ್ಲಿ ವಿಮಾನ ಮತ್ತೆ ಹಾರಾಟ ನಡೆಸಲಿದೆ.

ವಿಮಾನವು ಮುಂಬೈನಿಂದ ಗುವಾಹಟಿಗೆ ತೆರಳುತ್ತಿತ್ತು. ಬೆಳಗ್ಗೆ 8.45ರ ಸುಮಾರಿಗೆ ಕೊಲ್ಕತ್ತ ಎಟಿಸಿಗೆ ಕರೆ ಮಾಡಿ ಇಂಧನ ಸೋರಿಕೆಯಾಗುತ್ತಿರುವ ಬಗ್ಗೆ ಪೈಲಟ್ ಅನುಮಾನ ವ್ಯಕ್ತಪಡಿಸಿದ್ದರು. ಬೆಳಗ್ಗೆ 8.58ರ ಸುಮಾರಿಗೆ ಕೊಲ್ಕತ್ತ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ವಿಮಾನವು ಇನ್ನೇನು ಕೆಲವೇ ನಿಮಿಷಗಳಲ್ಲಿ ಮತ್ತೆ ಹಾರಾಟ ನಡೆಸಲಿದೆ.












Click it and Unblock the Notifications