ಬಂಗಾಳದಲ್ಲಿ ರಥಯಾತ್ರೆ ಆದೇಶಕ್ಕೆ ತಡೆ: ಬಿಜೆಪಿಗೆ ಹಿನ್ನಡೆ

ಕೋಲ್ಕತಾ, ಡಿಸೆಂಬರ್ 20: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪೂರ್ವ ಪ್ರಚಾರಕ್ಕಾಗಿ ರಥ ಯಾತ್ರೆ ನಡೆಸುವ ಬಿಜೆಪಿಯ ಬಯಕೆಗೆ ಹಿನ್ನಡೆಯಾಗಿದೆ.

ಮೂರು ದಿನ ರಥಯಾತ್ರೆ ನಡೆಸಲು ಬಿಜೆಪಿಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ಅನುಮತಿ ನೀಡಿತ್ತು. ಆದರೆ, ಮಮತಾ ಬ್ಯಾನರ್ಜಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಶುಕ್ರವಾರ ಪರಿಗಣಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಕೋರ್ಟ್‌ನ ಹಿಂದಿನ ಆದೇಶವನ್ನು ಪಕ್ಕಕ್ಕಿರಿಸಿದೆ.

ಪಶ್ಚಿಮ ಬಂಗಾಳ ಸರ್ಕಾರದ ಮೇಲ್ಮನವಿ ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇಬಶಿಶ್ ಕರಗುಪ್ತ ಮತ್ತು ನ್ಯಾಯಮೂರ್ತಿ ಶಂಪಾ ಸರ್ಕಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶವನ್ನು ತಿರಸ್ಕರಿಸಿತು.

setback for bjp rath yatra in west bengal mamata banerjee culcutta high court

ಹಿಂದಿನ ಆದೇಶದಲ್ಲಿ ವಾಸ್ತವಾಂಶಗಳನ್ನು ಆಧರಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಹೈಕೋರ್ಟ್‌ನ ಏಕಸದಸ್ಯ ಪೀಠ ಗುರುವಾರ, ರಥಯಾತ್ರೆಯಿಂದ ರಾಜ್ಯದಲ್ಲಿ ಕೋಮುಗಲಭೆ ಉಂಟಾಗಬಹುದು ಎಂಬ ಮಮತಾ ಬ್ಯಾನರ್ಜಿ ಸರ್ಕಾರದ ಅಹವಾಲನ್ನು ತಳ್ಳಿ ಹಾಕಿ, ಯಾತ್ರೆ ನಡೆಸಲು ಬಿಜೆಪಿಗೆ ಅನುಮತಿ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+