ಐವರನ್ನು ಕೊಂದ ಆರೋಪ ಇರುವ ಈ ಸರಣಿ ಹಂತಕನ ಗುರಿ ಮಧ್ಯವಯಸ್ಸಿನ ಮಹಿಳೆಯರು
ಕಾಲ್ನಾ (ಪಶ್ಚಿಮ ಬಂಗಾಲ), ಜೂನ್ 4: ಮನೆಯಲ್ಲಿ ಒಂಟಿಯಾಗಿ ಇರುತ್ತಿದ್ದ ಮಧ್ಯವಯಸ್ಸಿನ ಮಹಿಳೆಯರನ್ನು ಗುರಿ ಮಾಡಿಕೊಳ್ಳುತ್ತಿದ್ದ ಆರೋಪ ಹೊತ್ತಿರುವ ಸರಣಿ ಹಂತಕನನ್ನು ಬಂಗಾಲದ ಪೂರ್ವ ಬುರ್ದ್ವಾನ್ ನಲ್ಲಿ ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಮರುಝಮಾನ್ ಸರಕಾರ್ ಸಣ್ಣ ಪ್ರಮಾಣದ ವರ್ತಕ. ನಿರುಪಯುಕ್ತ ವಸ್ತುಗಳ ಖರೀದಿಸಿ, ವಿಲೇವಾರಿ ಮಾಡುತ್ತಿದ್ದವನು. ಐವರು ಮಹಿಳೆಯರನ್ನು ಕೊಲೆ ಮಾಡಿದ ಹಾಗೂ ಹಲವರಿಗೆ ಗಾಯ ಮಾಡಿದ ಬಗ್ಗೆ ಆತನ ಮೇಲೆ ಗುಮಾನಿ ಇದೆ. ನೆರೆಯ ಹೂಗ್ಲಿ ಜಿಲ್ಲೆಯಲ್ಲಿ ಆತ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಮುಂದೆ ಶೌಚ ಮಾಡಬೇಡಿ ಎಂದಿದ್ದಕ್ಕೆ ಮಾಲೀಕನ ಕೊಲೆ
ನಲವತ್ತೆರಡು ವರ್ಷದ ಸರಕಾರ್ ಹೊಸ ದಿರಿಸುಗಳ ಬಗ್ಗೆ ವಿಪರೀತ ಆಸಕ್ತಿ. ಆತ ಮಧ್ಯಾಹ್ನದ ವೇಳೆ ವಿದ್ಯುತ್ ಮೀಟರ್ ರೀಡರ್ ಎಂದು ಮನೆಯನ್ನು ಪ್ರವೇಶಿಸುತ್ತಿದ್ದ. ಆ ನಂತರ ಮಹಿಳೆಯರ ಮೇಲೆ ಸೈಕಲ್ ಚೈನ್ ಹಾಗೂ ಕಬ್ಬಿಣದ ರಾಡ್ ನಿಂದ ದಾಳಿ ನಡೆಸುತ್ತಿದ್ದ. ಜಿಲ್ಲಾ ಕೋರ್ಟ್ ನಿಂದ ಸರಕಾರ್ ನನ್ನು ಹನ್ನೆರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಮೇ ಇಪ್ಪತ್ತೊಂದನೇ ತಾರೀಕಿನಂದು ಗೋವಾರ ಹಳ್ಳಿಯಲ್ಲಿ ಪುತುಲ್ ಮಜಿ ಕೊಲೆ ಪ್ರಕರಣಕ್ಕೆ ಸಂಬಂಧಕ್ಕೆ ಪೊಲೀಸರ ವಶಕ್ಕೆ ನೀಡಲಾಗಿದೆ. ಇದೇ ಮಾದರಿ ನಡೆದ ಇತರ ನಾಲ್ಕು ಕೊಲೆ ಪ್ರಕರಣಗಳಲ್ಲಿ ಸರಕಾರ್ ಪಾತ್ರದ ಬಗ್ಗೆ ತನಿಖೆ ನಡೆಸಲು ವಶಕ್ಕೆ ನೀಡಲಾಗಿದೆ. ಕೆಲವು ಮಹಿಳೆಯರು ಈತನಿಂದ ತಪ್ಪಿಸಿಕೊಳ್ಳಲು ಸಫಲರಾಗಿದ್ದಾರೆ.
ಈತ ಮೊದಲಿಗೆ ಕತ್ತಿಗೆ ಚೈನಿನಿಂದ ಬಿಗಿದು, ಆ ನಂತರ ರಾಡ್ ನಿಂದ ತಲೆಗೆ ಬಡಿದು, ಸತ್ತಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದ. ಕೆಲವು ಬೆಲೆ ಬಾಳುವ ವಸ್ತುಗಳನ್ನು ಮನೆಗಳಿಂದ ಕದ್ದುಕೊಂಡು ಹೋಗುತ್ತಿದ್ದರೂ ಅತನ ಉದ್ದೇಶ ಕಳುವಲ್ಲ. ಮಹಿಳೆಯರನ್ನು ಕೊಲೆ ಮಾಡುವುದೇ ಆತನ ಮುಖ್ಯ ಉದ್ದೇಶ ಎಂದಿದ್ದಾರೆ ಪೊಲೀಸ್ ಅಧಿಕಾರಿ.
ಹಿಂಸಿಸುತ್ತಿದ್ದ ಗಂಡನ ರುಂಡ ಕಡಿದು ಪೊಲೀಸರಿಗೆ ಶರಣಾದ ಅಸ್ಸಾಂ ಮಹಿಳೆ
ಕೆಲವು ಕಡೆ ಮಹಿಳೆಯರನ್ನು ಕೊಂದ ನಂತರ ಆರೋಪಿಯು ಅವರ ಗುಪ್ತಾಂಗದಲ್ಲಿ ಚೂಪಾದ ವಸ್ತುಗಳನ್ನು ತುರುಕಿದ್ದಾನೆ. "ಅವನು ಯಾವ ಕಾರಣಕ್ಕಾಗಿ ಮಧ್ಯ ವಯಸ್ಸಿನ ಮಹಿಳೆಯರನ್ನೇ ಗುರಿ ಮಾಡಿಕೊಂಡು ಕೊಲೆ ಮಾಡುತ್ತಿದ್ದ" ಎಂಬ ಬಗ್ಗೆ ತಿಳಿದುಕೊಳ್ಳಬೇಕಿದೆ. ಅಂದ ಹಾಗೆ ಸರಕಾರ್ ವಿವಾಹಿತನಾಗಿದ್ದು, ಮೂವರು ಮಕ್ಕಳಿದ್ದಾರೆ. ನಿರ್ದಿಷ್ಟ ವಯಸ್ಸಿನ ಮಹಿಳೆಯರ ಬಗ್ಗೆ ಆತನಿಗೆ ಏಕೆ ಸಿಟ್ಟು ಎಂದು ತಿಳಿಯಬೇಕು ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಕೆಂಪು ಮೋಟಾರ್ ಬೈಕ್ ನಲ್ಲಿ, ಕೆಂಪು ಹೆಲ್ಮೆಟ್ ಧರಿಸಿ ಹೋಗುತ್ತಿದ್ದಾಗ ಕಾಲ್ನಾದಲ್ಲಿ ಬಂಧಿಸಲಾಗಿದೆ. ಈ ತನಕ ಕೆಲವು ಮಹಿಳೆಯರು ಅದೇ ಮಾದರಿಯಲ್ಲಿ ಕೊಲೆಯಾಗಿದ್ದಾರೆ. ಆ ಬಗ್ಗೆ ವಿಚಾರಣೆ ನಡೆಸಬೇಕಿದೆ.