ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ವೇದಿಕೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬಾಲಿವುಡ್ ಗಾಯಕ ಕೆಕೆ

|
Google Oneindia Kannada News

ಕೋಲ್ಕತ್ತಾ, ಜೂನ್ 1: ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್ ಕೋಲ್ಕತ್ತಾದಲ್ಲಿ ಕಾರ್ಯಕ್ರಮ ನೀಡುವ ವೇಳೆ ಕುಸಿದು ಬಿದ್ದಿದ್ದು, ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Recommended Video

ಸಂಗೀತ ಪ್ರಿಯರಿಗೆ ಆಘಾತ: ಖ್ಯಾತ ಗಾಯಕ KK ಇನ್ನಿಲ್ಲ;ಮೋದಿ‌ ಸಂತಾಪ | #Health | OneIndia Kannada

ಅಭಿಮಾನಿಗಳಿಗೆ ಕೆಕೆ ಎಂದೇ ಚಿರಪರಿಚತಾರಿದ್ದ ಕೃಷ್ಣಕುನಾರ್ ಕುನ್ನತ್ (53) ಕೋಲ್ಕತ್ತಾದಲ್ಲಿ ಕೋಲ್ಕತಾದಲ್ಲಿ ನಜ್ರುಲ್ ಮಂಜ್‌ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ನೀಡುವಾಗಲೇ ವೇದಿಕೆ ಮೇಲೆಯೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕೆಕೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋಲ್ಕತಾದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕಾಗಿ ಕೆಕೆ ತಂಡ ಮೇ.30ರಿಂದ ನಗರಕ್ಕೆ ಬಂದಿತ್ತು. ಸಂಗೀತ ಕಾರ್ಯಕ್ರಮದ ಕುರಿತು ಗಾಯಕ ಕೃಷ್ಣಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಕೆ ಸಂಗೀತ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. ಬದುಕು ಕಟ್ಟಿಕೊಂಡ ಸಂಗೀತದ ವೇದಿಕೆಯಲ್ಲಿ ಹಾಡುತ್ತಲೇ ತನ್ನ ಜೀವನವನ್ನು ಕೊನೆಗೊಳಿಸದ್ದಾರೆ ಖ್ಯಾತ ಗಾಯಕ.

ವೇದಿಕೆಯಲ್ಲಿ ಕುಸಿದ ಕೆಕೆಗೆ ತಕ್ಷಣ ವೈದ್ಯಕೀಯ ನೆರವು ನೀಡಲಾಯಿತು. ಅಷ್ಟೇ ವೇಗದಲ್ಲಿ ಕೋಲ್ಕತ್ತಾದ ಸಿಎಂಆರ್‌ಐ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಕೆಕೆ ಸಾವನ್ನಪ್ಪಿದ್ದರು.

ವೈರಲ್ ಆದ ಕೊನೆ ಕ್ಷಣದ ವಿಡಿಯೋ

ವೈರಲ್ ಆದ ಕೊನೆ ಕ್ಷಣದ ವಿಡಿಯೋ

ಕೆಕೆ ಕೊನೆಯ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಂಗೀತ ಕಾರ್ಯಕ್ರಮದಿಂದ ಅವಸರವಾಗಿ ಹೊರಗಡೆ ಹೋಗುತ್ತಿರುವ ದೃಶ್ಯಗಳನ್ನು ಕೆಲವರು ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದು ವೈರಲ್ ಆಗಿದೆ. ಇವುಗಳನ್ನು ಕೆಕೆ ಸಾವಿಗೂ ಮುನ್ನದ ವಿಡಿಯೋ ಎಂದು ಹೇಳಲಾಗುತ್ತಿದೆ.

ಕಾರ್ಯಕ್ರಮ ನೀಡುವ ವೇಳೆಯೇ ಕೆಕೆ ಅಸ್ವಸ್ಥರಾಗಿದ್ದರು ಎನ್ನಲಾಗಿದೆ. ಅವರು ತಕ್ಷಣ ಹೋಟೆಲ್‌ಗೆ ತಂಗಿದ್ದ ಹೋಟೆಲ್‌ಗೆ ವಾಪಸ್ ಹೋಗಿದ್ದಾರೆ. ಹೋಟೆಲ್‌ನಲ್ಲಿ ಕೆಕೆ ತೀವ್ರ ಅಸ್ವಸ್ಥರಾಗಿದ್ದು ಅಲ್ಲಿಂದ ಆಸ್ಪತ್ರೆಗೆ ಹೋಗಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಗೆ ಸೇರಿಸುವಾಗ ಮಾರ್ಗ ಮಧ್ಯೆ ಸಾವು

ಆಸ್ಪತ್ರೆಗೆ ಸೇರಿಸುವಾಗ ಮಾರ್ಗ ಮಧ್ಯೆ ಸಾವು

ಅಸ್ವಸ್ಥಗೊಂಡ ಕೆಕೆ ಅವರನ್ನು ಸಿಎಂಆರ್‌ಐ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗಮಧ್ಯೆದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಎದೆನೋವು ಜೊತೆಗೆ ಪಾರ್ಶ್ವವಾಯು ಸಹ ಕೆಕೆ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಕೆಕೆ ತಲೆಯ ಮೇಲೆ ಕೆಲ ಗಾಯದ ಗುರುತುಗಳು ಸಹ ಕಂಡುಬಂದಿವೆ ಎನ್ನಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಂತಿಮ ನಮನ ಸಲ್ಲಿಸಿದ ಗಣ್ಯರು

ಅಂತಿಮ ನಮನ ಸಲ್ಲಿಸಿದ ಗಣ್ಯರು

ಎಸ್​ಎಸ್​ಎಂಕೆ ಆಸ್ಪತ್ರೆಯಲ್ಲಿ ಕೆಕೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಂತರ ಆಸ್ಪತ್ರೆಯಿಂದ ರವೀಂದ್ರ ಸದನಕ್ಕೆ ಪಾರ್ಥಿವ ಶರೀರ ಸ್ಥಳಾತರಿಸಲಾಗಿದ್ದು, ಇಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಪಶ್ಚಿಮ ಬಂಗಾಳ ಸರ್ಕಾರದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕೆಕೆ ಕುಟುಂಬ ಸದಸ್ಯರು ಹಾಗೂ ಪ್ರಮುಖರು ಅಂತಿಮ ಗೌರವ ಸಲ್ಲಿಸಿದರು.

ಮೋದಿ ಸೇರಿದಂತೆ ಹಲವರ ಸಂತಾಪ

ಮೋದಿ ಸೇರಿದಂತೆ ಹಲವರ ಸಂತಾಪ

ಕೆಕೆ ಹಠಾತ್ ನಿಧನಕ್ಕೆ ರಾಜಕಾರಣಿಗಳು, ಕ್ರಿಕೆಟ್ ಆಟಗಾರರು, ಬಾಲಿವುಡ್ ನಟರು, ಗಾಯಕರು ಸೇರಿದಂತೆ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ.

ಇದೇ ವರ್ಷದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಸಾವು, ಪಂಜಾಬ್ ಹಾಡುಗಾರ ಸಿಧು ಮೂಸೆವಾಲ ಹತ್ಯೆ ಗಾಯನ ಸಂಗೀತ ಪ್ರಿಯರನ್ನು ಕಾಡುತ್ತಿತ್ತು, ಆ ನೋವು ಮಾಸುವ ಮುನ್ನವೇ ಬಾಲಿವುಡ್ ಮತ್ತೋರ್ವ ಪ್ರಖ್ಯಾತ ಗಾಯಕನನ್ನು ಕಳೆದುಕೊಂಡಿದೆ.

English summary
Popular Singer Krishnakumar Kunnath While Performing Live in Kolkata he fell ill, Was declared dead at the hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X