ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪ್ರಮುಖ ಮೆಟ್ರೋ ನಗರಗಳಿಂದ ಕೋಲ್ಕತ್ತಾಗೆ ವಾರಕ್ಕೆ 2 ಬಾರಿ ಮಾತ್ರ ವಿಮಾನ ಹಾರಾಟ

|
Google Oneindia Kannada News

ಕೋಲ್ಕತ್ತಾ, ಜನವರಿ 02: ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಕೋಲ್ಕತ್ತಾದಲ್ಲಿ ಕೊರೊನಾವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳ ಸರ್ಕಾರವು ನಿರ್ಬಂಧವನ್ನು ಹೆಚ್ಚಳ ಮಾಡಿದೆ. ಪಶ್ಚಿಮ ಬಂಗಾಳ ಸರ್ಕಾರವು ಹೊಸ ವಿಮಾನ ನಿಲ್ದಾಣ ಸಂಬಂಧಿತ ನಿರ್ಬಂಧಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಪ್ರಮುಖ ಮಹಾನಗರಗಳಿಂದ ವಿಮಾನ ಸಂಚಾರವನ್ನು ನಿರ್ಬಂಧ ಮಾಡಲಾಗಿದೆ.

ಮುಂಬೈ ಮತ್ತು ದೆಹಲಿಯಿಂದ ವಾರಕ್ಕೆ ಎರಡು ಬಾರಿ ಮಾತ್ರ ವಿಮಾನ ಹಾರಾಟಕ್ಕೆ ಅನುಮತಿ ನೀಡಿ ನಿರ್ದೇಶನ ನೀಡಲಾಗಿದೆ. ಪ್ರಮುಖ ಮಹಾನಗರಗಳಿಂದ ಕೋಲ್ಕತ್ತಾಗೆ ವಿಮಾನಗಳು ಜನವರಿ 5 ರಿಂದ ಸೋಮವಾರ ಮತ್ತು ಶುಕ್ರವಾರ ಮಾತ್ರ ಕಾರ್ಯನಿರ್ವಹಿಸುತ್ತವೆ. ಇನ್ನು ನಾಳೆಯಿಂದ ಅಂದರೆ ಜನವರಿ 3, 2022 ರಿಂದ ಯುಕೆಯ ವಿಮಾನವನ್ನು ಕೋಲ್ಕತ್ತಾಗೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಇನ್ನು ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ನಾಳೆಯಿಂದ ಕಡ್ಡಾಯವಾಗಿ ರ್‍ಯಾಪಿಡ್‌ ಆಂಟೆಜನ್‌ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ದೇಶದಲ್ಲಿ 1,525 ಓಮಿಕ್ರಾನ್ ಕೇಸ್: ಮಹಾರಾಷ್ಟ್ರದಲ್ಲೇ ಹೆಚ್ಚು ಪ್ರಕರಣದೇಶದಲ್ಲಿ 1,525 ಓಮಿಕ್ರಾನ್ ಕೇಸ್: ಮಹಾರಾಷ್ಟ್ರದಲ್ಲೇ ಹೆಚ್ಚು ಪ್ರಕರಣ

ಇನ್ನು ಈ ನಿರ್ಬಂಧಗಳ ನಡುವೆ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ವೈಯಕ್ತಿಕ ಮತ್ತು ಸಾರಿಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಂದರೆ ನೈಟ್‌ ಕರ್ಫ್ಯೂ ವಿಧಿಸಲಾಗಿದೆ. ರೆಸ್ಟೋರೆಂಟ್ ಮತ್ತು ಬಾರ್‌ಗಳು ಶೇಕಡ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ರಾತ್ರಿ 10 ಗಂಟೆಗೆ ಎಲ್ಲಾ ರೆಸ್ಟೋರೆಂಟ್‌, ಬಾರ್‌ಗಳು ಬಂದ್‌ ಆಗಲಿದೆ.

Omicron: Flights from these major metros to Kolkata restricted to twice weekly

ಓಮಿಕ್ರಾನ್‌ ನಡುವೆ ಪಶ್ಚಿಮ ಬಂಗಾಳದಲ್ಲಿ ನಿರ್ಬಂಧ

ಎಲ್ಲಾ ಮನರಂಜನಾ ಉದ್ಯಾನವನಗಳು, ಮೃಗಾಲಯ, ಪ್ರವಾಸಿ ಸ್ಥಳಗಳನ್ನು ಮುಚ್ಚಲಾಗುತ್ತದೆ. ಈಜುಕೊಳಗಳು, ಸ್ಪಾ, ಬ್ಯೂಟಿ ಪಾರ್ಲರ್‌ಗಳು, ಜಿಮ್‌ಗಳು ಮತ್ತು ಕ್ಷೇಮ ಕೇಂದ್ರಗಳು ನಾಳೆಯಿಂದ ಮುಚ್ಚಲ್ಪಡುತ್ತವೆ. ಹಾಗೆಯೇ ನಾಳೆಯಿಂದ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಮುಚ್ಚಲಾಗುತ್ತದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಶೇಕಡ 50 ಹಾಜರಾತಿಯೊಂದಿಗೆ ಕಾರ್ಯನಿರ್ವಹಣೆ ಮಾಡಲು ಮಾತ್ರ ಅವಕಾಶವಿದೆ. ಸ್ಥಳೀಯ ರೈಲುಗಳು ಸಹ ಶೇಕಡ 50 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ. ಹಾಗೆಯೇ ಸಂಜೆ 7 ಗಂಟೆಯ ನಂತರ ಯಾವುದೇ ಸ್ಥಳೀಯ ರೈಲು ಸಂಚಾರವೂ ಕೂಡಾ ಇರುವುದಿಲ್ಲ.

ಓಮಿಕ್ರಾನ್: 4 ದಿನಗಳಲ್ಲಿ ಕೊರೊನಾ ಪ್ರಕರಣಗಳು 2.5 ಪಟ್ಟು ಹೆಚ್ಚಳಓಮಿಕ್ರಾನ್: 4 ದಿನಗಳಲ್ಲಿ ಕೊರೊನಾ ಪ್ರಕರಣಗಳು 2.5 ಪಟ್ಟು ಹೆಚ್ಚಳ

ಕೋಲ್ಕತ್ತಾದಲ್ಲಿ ಮೂರು ದಿನದಲ್ಲಿ ಕೋವಿಡ್‌ ಪ್ರಕರಣ ಮೂರು ಪಟ್ಟು ಹೆಚ್ಚಳ

ಕೋಲ್ಕತ್ತಾದಲ್ಲಿ ಕಳೆದ ಮೂರು ದಿನಗಳಲ್ಲಿ ಮೂರು ಪಟ್ಟು ಅಧಿಕ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಿಂದಾಗಿ ಹೊಸ ಮಾರ್ಗಸೂಚಿಯನ್ನು ಜಾರಿಗೆ ತರಲಾಗಿದೆ. ನಗರದಲ್ಲಿ ಕೋವಿಡ್‌ ಪಾಸಿಟಿ‌ವ್‌ ದರವು ಶೇಕಡ 12.5ಕ್ಕೆ ಏರಿಕೆ ಕಂಡಿದೆ. ಇಡೀ ರಾಜ್ಯದ ಕೋವಿಡ್‌ ಪಾಸಿಟಿ‌ವ್‌ ದರವು ಶೇಕಡ 5.47ಕ್ಕೆ ಏರಿದೆ. ಶುಕ್ರವಾರ (ಡಿಸೆಂಬರ್ 31) ಪಶ್ಚಿಮ ಬಂಗಾಳದಲ್ಲಿ 3,451 ಮತ್ತು ಕೋಲ್ಕತ್ತಾದಲ್ಲಿ 1,954 ಹೊಸ ಕೊರೊನಾ ವೈರಸ್‌ ಪ್ರಕರಣಗಳು ಕಾಣಿಸಿಕೊಂಡಿದೆ. ಈ ನಡುವೆ ದೇಶದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು ಅಧಿಕವಾಗುತ್ತಿದೆ.

ಭಾರತದಲ್ಲಿ ಈವರೆಗೆ ಸುಮಾರು 1,525 ಜನರಲ್ಲಿ ಓಮಿಕ್ರಾನ್ ರೂಪಾಂತರ ಪತ್ತೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲೇ ಅಧಿಕ ಪ್ರಕರಣಗಳು ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು 460 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಇದು ಅತೀ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಜ್ಯವಾಗಿದೆ. ಇಂದು ದೇಶದಲ್ಲಿ 27,553 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸುಮಾರು 284 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಡೇಟಾ ತೋರಿಸಿದೆ. ಮಹಾರಾಷ್ಟ್ರದಲ್ಲಿ 9,170 ಹೊಸ ಕೊರೊನವೈರಸ್ ಪ್ರಕರಣಗಳು ವರದಿಯಾಗಿವೆ, ಹಿಂದಿನ ದಿನಕ್ಕಿಂತ ಹೋಲಿಸಿದರೆ 1,103 ಪ್ರಕರಣಗಳು ಹೆಚ್ಚಾಗಿವೆ. (ಒನ್‌ಇಂಡಿಯಾ ಸುದ್ದಿ)

Recommended Video

Team Indiaಗೆ Champion ಆಗಲು 2022ರಲ್ಲಿ ದೊಡ್ಡ ಅವಕಾಶ | Oneindia Kannada

English summary
Omicron: Flights from these major metros to Kolkata restricted to twice weekly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X