• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೀದಿ ವಿರುದ್ಧ ಮೋದಿ, ಶಾ ವ್ಯವಸ್ಥಿತ ಷಡ್ಯಂತ್ರ : ಮಾಯಾವತಿ ಆಕ್ರೋಶ

|

ನವದೆಹಲಿ, ಮೇ 16 : ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಆ ಪಕ್ಷದ ನಾಯಕರು ಅತ್ಯಂತ ವ್ಯವಸ್ಥಿತವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಕುಮಾರಿ ಮಾಯಾವತಿ ಕಿಡಿಕಾರಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಬಿಜೆಪಿ ನಾಯಕರೊಂದಿಗೆ ದುರಾದೃಷ್ಟವಶಾತ್ ಕೇಂದ್ರ ಚುನಾವಣಾ ಆಯೋಗ ಕೂಡ ಒತ್ತಡಕ್ಕೊಳಗಾಗಿ ಕೈಜೋಡಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಮೇ 16ರ ರಾತ್ರಿ 10 ಗಂಟೆಯಿಂದ ಪ್ರಚಾರಕ್ಕೆ ನಿಷೇಧ ಹೇರಿದೆ. ಇದು ಡೇಂಜರಸ್ ಮಾತ್ರವಲ್ಲ ಅನ್ಯಾಯ ಕೂಡ. ಇದು ದೇಶದ ಪ್ರಧಾನಿಗೆ ಒಪ್ಪುವಂಥದ್ದಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಸಂಜೆ ನರೇಂದ್ರ ಮೋದಿಯವರ ಎರಡು ಸಾರ್ವಜನಿಕ ಸಭೆಗಳಿವೆ. ಅವುಗಳು ಮುಗಿದ ನಂತರವೇ ಪ್ರಚಾರಕ್ಕೆ ನಿಷೇಧ ಹೇರಲಾಗಿದೆ. ನಿಷೇಧ ಹೇರುವುದೇ ಆಗಿದ್ದರೆ ರಾತ್ರಿ 10 ಗಂಟೆಯಿಂದೇಕೆ, ಇಂದು ಬೆಳಗಿನಿಂದಲೇ ನಿಷೇಧ ಹೇರಬಹುದಿತ್ತಲ್ಲವೆ. ಇದು ಬಿಜೆಪಿ ನಾಯಕರು ಮಾಡುತ್ತಿರುವ ವ್ಯವಸ್ಥಿತ ಷಡ್ಯಂತ್ರ ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.

ಪ್ರಚಾರ ಅವಧಿ ಮೊಟಕುಮಾಡಿದ ಆಯೋಗದ ಮೇಲೆ ದೀದಿ ಕೆಂಡಾಮಂಡಲ

ಪಶ್ಚಿಮ ಬಂಗಾಳದಲ್ಲಿ ಪ್ರಚಾರದ ಸಂದರ್ಭದಲ್ಲಿ ತೀವ್ರ ಘರ್ಷಣೆಗಳು, ಹಿಂಸಾಚಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರದ ಅವಧಿಯನ್ನು ಒಂದು ದಿನ ಮೊದಲೇ ಚುನಾವಣಾ ಆಯೋಗ ಮೊಟಕುಗೊಳಿಸಿದೆ. ಅಮಿತ್ ಶಾ ಅವರ ಸಾರ್ವಜನಿಕ ಸಭೆ ನಡೆಯುತ್ತಿದ್ದಾಗ ಪಶ್ಚಿಮ ಬಂಗಾಳದಲ್ಲಿ ಭಾರೀ ಘರ್ಷಣೆ ನಡೆದಿತ್ತು. ಇದಕ್ಕೆ ಕಾರಣ ತೃಷ್ಣಮೂಲ ಕಾಂಗ್ರೆಸ್ ಎಂದು ಬಿಜೆಪಿ ದೂರುತ್ತಿದ್ದರೆ, ಬಿಜೆಪಿಯೇ ದಂಗೆ ಸೃಷ್ಟಿಸಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪ ಮಾಡಿದೆ. ಒಟ್ಟಿನಲ್ಲಿ ಪಶ್ಚಿಮ ಬಂಗಾಳ ರಣರಂಗವಾಗಿ ಮಾರ್ಪಟ್ಟಿದೆ.

ಎರಡು ಕಡೆಗಳಲ್ಲಿ ಮೋದಿ ಪ್ರಚಾರ ಸಭೆ

ಎರಡು ಕಡೆಗಳಲ್ಲಿ ಮೋದಿ ಪ್ರಚಾರ ಸಭೆ

ಗುರುವಾರ ಸಂಜೆ 4.30ಕ್ಕೆ ಪಶ್ಚಿಮ ಬಂಗಾಳದ ಮಯೂರಾಪುರ ಎಂಬಲ್ಲಿ ಬಹಿರಂಗ ಪ್ರಚಾರ ನಡೆಸುತ್ತಿದ್ದಾರೆ. ನಂತರ 6.10ಕ್ಕೆ ದಮ್ ದಮ್ ನಲ್ಲಿರುವ ಸೆಂಟ್ರಲ್ ಜೈನ್ ಮೈದಾನದಲ್ಲಿ ಮತ್ತೊಂದು ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೇ ಮಮತಾ ಬ್ಯಾನರ್ಜಿ ಮತ್ತು ಮಾಯಾವತಿ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಇವೆರಡು ಬಹಿರಂಗ ಸಭೆಗಳೆರಡನ್ನು ಗಮನದಲ್ಲಿಟ್ಟುಕೊಂಡೇ ಚುನಾವಣಾ ಆಯೋಗ ರಾತ್ರಿ 10 ಗಂಟೆಯಿಂದ ಬಹಿರಂಗ ಸಭೆಗೆ ನಿಷೇಧ ಹೇರಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಪಶ್ಚಿಮ ಬಂಗಾಳ: ಅವಧಿಗೆ ಮುನ್ನಾ ಪ್ರಚಾರ ಅಂತ್ಯಕ್ಕೆ ಆಯೋಗ ಆದೇಶ

ಪಶ್ಚಿಮ ಬಂಗಾಳ ಉಳಿಸಿ ಆಂದೋಲನ

ಪಶ್ಚಿಮ ಬಂಗಾಳ ಉಳಿಸಿ ಆಂದೋಲನ

ಇದರ ಜೊತೆಯೇ, ಪಶ್ಚಿಮ ಬಂಗಾಳವನ್ನು ಉಳಿಸಿ, ಪ್ರಜಾತಂತ್ರವನ್ನು ಉಳಿಸಿ ಎಂಬ ಆಂದೋಲನವನ್ನು ಭಾರತೀಯ ಜನತಾ ಪಕ್ಷ ಆರಂಭಿಸಿದೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಬಾಯಿಯ ಮೇಲೆ ಬೆರಳು ಇಟ್ಟು ಆಕ್ರೋಶ ವ್ಯಕ್ತಪಡಿಸಲಾಗಿದೆ. ಮತ್ತೆ ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದರೆ ತಮ್ಮ ಆಟ ನಡೆಯುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಅವರು ಬೆದರಿದ್ದಾರೆ. ಹೀಗಾಗಿಯೇ ತಮ್ಮ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರ ವಿರುದ್ಧ ದಂಗೆಯೇಳುವಂತೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೂ ಆರೋಪಿಸುತ್ತಿದ್ದಾರೆ.

ಪ. ಬಂಗಾಳ ಹಿಂಸಾಚಾರ: ಬಿಜೆಪಿ-ಟಿಎಂಸಿಯಲ್ಲಿ ಹೊಣೆಗಾರರು ಯಾರು?

ಅಮಿತ್ ಶಾ ವಿರುದ್ಧವೇ ಎಫ್ಐಆರ್

ಅಮಿತ್ ಶಾ ವಿರುದ್ಧವೇ ಎಫ್ಐಆರ್

ಪಶ್ಚಿಮ ಬಂಗಾಳದಲ್ಲಿ ನಡೆದ ದಂಗೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷರೇ ಕಾರಣ ಎಂದು ರಾಜ್ಯದ ಪೊಲೀಸರು ಅಮಿತ್ ಶಾ ವಿರುದ್ಧವೇ ಎಫ್ಐಆರ್ ದಾಖಲಿಸಿದ್ದಾರೆ. ಇದಕ್ಕಿಂತ ಶಾಕಿಂಗ್ ಸುದ್ದಿಯೇನಿದೆ? ಇದು ಪ್ರಜಾತಂತ್ರದ ಅಣಕವಲ್ಲದೆ ಮತ್ತೇನು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಸ್ಥಳೀಯರು ಕೂಡ ಈ ವಿಷಯದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಕೇರಳದಲ್ಲಿ ಕೂಡ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ.

ಅಮಿತ್ ಶಾ ಏನು ದೇವರಾ? ಕಿಡಿಕಾರಿದ ಮಮತಾ ಬ್ಯಾನರ್ಜಿ

ತೇಜಿಂದರ್ ಬಗ್ಗಾ ಬಂಧನ ಬಿಡುಗಡೆ

ತೇಜಿಂದರ್ ಬಗ್ಗಾ ಬಂಧನ ಬಿಡುಗಡೆ

ಆ ಘಟನೆಗೆ ಬಿಜೆಪಿಯ ವಕ್ತಾರ ಮತ್ತು ಭಗತ್ ಸಿಂಗ್ ಕ್ರಾಂತಿ ಸೇನಾದ ಸಂಸ್ಥಾಪಕ ತೇಜಿಂದರ್ ಬಗ್ಗಾನೇ ಕಾರಣ ಎಂದು ಅವರನ್ನು ರಾತ್ರೋರಾತ್ರಿ 2 ಗಂಟೆಗೆ ಅವರಿದ್ದ ಹೋಟೆಲಿಗೆ ನುಗ್ಗಿ, ಕೋಣೆಯ ಕದವನ್ನು ಮುರಿದು ಬಂಧಿಸಲಾಗಿತ್ತು. ಅವರ ವಿರುದ್ಧ ಯಾವುದೇ ಪುರಾವೆ ಸಿಗದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆ ದಂಗೆ ನಡೆದ 500 ಮೀಟರ್ ಸುತ್ತಳತೆಯಲ್ಲಿ ನಾನು ಇರಲೇ ಇಲ್ಲ ಎಂದು ತೇಜಿಂದರ್ ಅವರು ವಾದಿಸಿದ್ದರು. ಇಡೀ ರಾತ್ರಿ ಅವರಿದ್ದ ಕೋಣೆ, ಸಿಸಿಟಿವಿ ಪರಿಶೀಲಿಸಲಾಗಿದ್ದರೂ ಅವರ ವಿರುದ್ಧ ಯಾವುದೇ ಸಾಕ್ಷ್ಯ ಸಿಕ್ಕಿರಲಿಲ್ಲ. ಇದರಿಂದ ಮಮತಾ ಬ್ಯಾನರ್ಜಿ ಮುಖಭಂಗ ಅನುಭವಿಸುವಂತಾಗಿತ್ತು.

English summary
Narendra Modi and Amit Shah are targeting Mamata Benerjee and it is planned target, says BSP leader Mayawati. If Election Commission wanted to put ban on campaigning it should have done it today morning itself, why from 10 pm? asked Mayawati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X