• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲ್ಕತ್ತಾ: ಅಪಾರ್ಟ್‌ಮೆಂಟ್‌ನಲ್ಲಿ ಮಾಡೆಲ್ ಶವ ಪತ್ತೆ

|
Google Oneindia Kannada News

ಕೋಲ್ಕತ್ತಾ, ಮೇ 27: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ರೂಪದರ್ಶಿ ಬಿದಿಶಾ ಡೇ ಮಜುಂದಾರ್ ಶವ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಆಕೆಯ ಸ್ನೇಹಿತೆ ಸಹ ಸಾವನ್ನಪ್ಪಿದ್ದರು.

ಮೃತ ರೂಪದರ್ಶಿಯನ್ನು ಮಂಜುಷಾ ನಿಯೋಗಿ ಎಂದು ಗುರುತಿಸಲಾಗಿದೆ. ಇವರು ಬಿದಿಶಾ ಡೇ ಮಜುಂದಾರ್ ಸ್ನೇಹಿತೆಯಾಗಿದ್ದರು. ಅವರ ಶವ ಎರಡು ದಿನದ ಹಿಂದೆ ಪತ್ತೆಯಾಗಿತ್ತು.

ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ

ಮಂಜುಷಾ ಕೋಲ್ಕತ್ತಾ ನಗರದ ಪಟೌಲಿ ಪ್ರದೇಶದ ಅಪಾರ್ಟ್‌ಮೆಂಟ್ ಒಂದರಲ್ಲಿ ಬಾಡಿಗೆಗೆ ನೆಲೆಸಿದ್ದರು. ಬ್ರೈಡಲ್ ಮೇಕಪ್ ಫೋಟೋ ಶೂಟ್‌ಗಳಲ್ಲಿ ಮಂಜುಷಾ ಜನಪ್ರಿಯ ಮಾಡೆಲ್ ಆಗಿದ್ದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಖಿನ್ನತೆಗೆ ಒಳಗಾಗಿದ್ದ ಮಂಜುಷಾ; ಮಂಜುಷಾ ಸಾವಿನ ಬಗ್ಗೆ ಆಕೆಯ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. "ಗೆಳತಿ ಬಿದಿಶಾ ಸಾವಿನ ನಂತರ ಮಂಜುಷಾ ಖಿನ್ನತೆಗೆ ಒಳಗಾಗಿದ್ದಳು. ಸ್ನೇಹಿತೆಯ ಮರಣದಿಂದ ತುಂಬ ನೊಂದಿದ್ದ ಆಕೆ, ಸದಾ ಬಿದಿಶಾ ಬಗ್ಗೆ ಮಾತನಾಡುತ್ತಿದ್ದಳು,'' ಎಂದು ತಿಳಿಸಿದ್ದಾರೆ.

ಕಿರುತೆರೆ ನಟಿ ಸಾವು, ಲಿವ್ ಇನ್ ಸಂಗಾತಿ ಬಂಧನಕಿರುತೆರೆ ನಟಿ ಸಾವು, ಲಿವ್ ಇನ್ ಸಂಗಾತಿ ಬಂಧನ

Model Found Dead At Home Kolkata

ಮಾಡೆಲ್‌ಗಳ ಸರಣಿ ಸಾವು: ಕೋಲ್ಕತ್ತಾದ ಡಮ್ ಡಮ್ ಪ್ರದೇಶದ ಫ್ಲ್ಯಾಟ್ ಒಂದರಲ್ಲಿ ಬುಧವಾರ ಬಿದಿಶಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಮಂಜುಷಾ ಮೃತದೇಹ ಕೂಡ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹದಿನೈದು ದಿನಗಳ ಹಿಂದೆ ಜನಪ್ರಿಯ ಕಿರುತೆರೆ ನಟಿ ಪಲ್ಲವಿ ಡೇ ಶವ ಕೋಲ್ಕತ್ತಾದ ಗಾರ್ಫಾ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು.

ಆಪ್ತಸಮಾಲೋಚನೆಗಾಗಿ ಸಹಾಯವಾಣಿಗಾಗಿ ಸಂಪರ್ಕಿಸಿ

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ SAHAIHELPLINE@GMAIL.COM

English summary
Kolkata model found dead at home two days after her friend death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X