ಈಶ್ವರ ಚಂದ್ರ ವಿದ್ಯಾಸಾಗರ ಪ್ರತಿಮೆ ಅನಾವರಣಗೊಳಿಸಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಜೂನ್ 11: ಸಮಾಜ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಅನಾವರಣಗೊಳಿಸಿದರು.

ಮೇ 14 ರಂದು ಲೋಕಸಭೆ ಚುನಾವನೆಗೂ ಮುನ್ನ ಕೋಲ್ಕತ್ತದಲ್ಲಿ ನಡೆಯುತ್ತಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸಮಾವೇಶದ ಸಮಯದಲ್ಲಿ ಈಶ್ವರ ಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ಇದನ್ನು ಬಿಜೆಪಿ ಕಾರ್ಯಕರ್ತರೇ ಮಾಡಿದ್ದು ಎಂದು ಮಮತಾ ಟಿಎಂಸಿ ಕಾರ್ಯಕರ್ತರು ದೂರಿದರೆ, ಪ್ರತಿಮೆ ಬಳಿ ಹೋಗುವುದಕ್ಕೆ ದಾರಿಯೇ ಇರಲಿಲ್ಲ, ಪ್ರತಿಮೆ ಇದ್ದ ಸ್ಥಳಕ್ಕೆ ತೆರಳಲು ಅಗತ್ಯವಿದ್ದ ಕೀಲಿಯೂ ನಮ್ಮೊಂದಿಗಿರಲಿಲ್ಲ. ಅಂದಮೇಲೆ ಈ ಕೆಲಸವನ್ನು ಮಾಡಿದ್ದು ಟಿಎಂಸಿ ಕಾರ್ಯಕರ್ತರೇ ಎಂದು ಬಿಜೆಪಿ ದೂರಿತ್ತು.

Mamata unveils Vidyasagars statue at the college where it was vandalised

ನಂತರ ಪ್ರತಿಮೆಯನ್ನು ಮರುಸ್ಥಾಪಿಸಲು ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತಾದರೂ, ನಿಮ್ಮ ಹಣ ಬೇಕಾಗಿಲ್ಲ ಎಂದು ಮಮತಾ ಬ್ಯಾನರ್ಜಿ ಖಡಕ್ಕಾಗಿ ಹೇಳಿದ್ದರು. ಈ ಘಟನೆ ನಡೆದ ತಿಂಗಳೊಳಗೆ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದ್ದು, ಇಂದು ಸಂಜೆ ವಿದ್ಯಾಸಾಗರ ಕಾಲೇಜಿನಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+