ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನದ ಮೇಲಿನ ತೆರಿಗೆ ಇಳಿಸಿ ಎಂದ ಮೋದಿ, ಮೊದಲು ದುಡ್ಡು ಕೊಡಿ ಎಂದ ದೀದಿ

|
Google Oneindia Kannada News

ಕೋಲ್ಕತಾ, ಏ. 28: ಈಗಿನ ಕೋವಿಡ್-19 ಪರಿಸ್ಥಿತಿಯನ್ನು ಚರ್ಚಿಸಲು ನಿನ್ನೆ ನಡೆಸಲಾದ ವಿವಿಧ ರಾಜ್ಯಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್ ವಿಚಾರವನ್ನು ಪ್ರಸ್ತಾಪಿಸಿ, ವ್ಯಾಟ್ ತೆರಿಗೆಯನ್ನ ಕಡಿತ ಮಾಡುವಂತೆ ಕೆಲ ರಾಜ್ಯಗಳಿಗೆ (ಬಿಜೆಪಿಯೇತರ) ತಿಳಿಹೇಳಿದ್ದರು. ಪ್ರಧಾನಿಯವರ ಈ ಹೇಳಿಕೆಗೆ ಕೆಲ ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿವೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿಯನ್ನ ತರಾಟೆಗೆ ತೆಗೆದುಕೊಂಡಿದ್ದು, ಕೇಂದ್ರದಿಂದ ಬಂಗಾಳಕ್ಕೆ ಬರಬೇಕಾದ ಹಣವನ್ನು ಮೊದಲು ಕೊಡಿ ಎಂದು ಒತ್ತಾಯಿಸಿದ್ದಾರೆ.

ನಮ್ಮ ರಾಜ್ಯಕ್ಕೆ ಕೇಂದ್ರ ಸರಕಾರ ಬಾಕಿ ಉಳಿಸಿಕೊಂಡಿರುವ ಹಣವನ್ನ ಕೊಟ್ಟರೆ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಪೆಟ್ರೋಲ್ ದರ ಕಡಿತ ಮಾಡುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪೆಟ್ರೋಲ್-ಡೀಸೆಲ್ ತೆರಿಗೆ ಕಡಿತಗೊಳಿಸಲು ರಾಜ್ಯಗಳಿಗೆ ಪ್ರಧಾನಿ ಕರೆ ಪೆಟ್ರೋಲ್-ಡೀಸೆಲ್ ತೆರಿಗೆ ಕಡಿತಗೊಳಿಸಲು ರಾಜ್ಯಗಳಿಗೆ ಪ್ರಧಾನಿ ಕರೆ

"ಪಶ್ಚಿಮ ಬಂಗಾಳಕ್ಕೆ ಕೇಂದ್ರದಿಂದ 97 ಸಾವಿರ ರೂ ನಷ್ಟು ಹಣ ಬರುವುದು ಬಾಕಿ ಇದೆ. ಇದರಲ್ಲಿ ಅರ್ಧದಷ್ಟು ಹಣವನ್ನಾದರೂ ಪ್ರಧಾನಿಗಳು ನಮ್ಮ ರಾಜ್ಯಕ್ಕೆ ಹಿಂದಿರುಗಿಸಿದರೆ ಬಿಜೆಪಿ ಆಡಳಿತದ ರಾಜ್ಯಗಳು ಪೆಟ್ರೋಲ್ ಡೀಸೆಲ್ ಮೇಲೆ ಕೊಟ್ಟಿರುವುದಕ್ಕಿಂತ ಹೆಚ್ಚು ಸಬ್ಸಿಡಿಯನ್ನ ಒದಗಿಸುತ್ತೇವೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Mamata Banerjee, Uddhav Slams PM Narendra Modi on Fuel Subsidy

ಮೂರು ವರ್ಷಗಳಿಂದ ಸಬ್ಸಿಡಿ ಕೊಡುತ್ತಿದ್ದೇವೆ:
"ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಬ್ಸಿಡಿ ನೀಡಲು ರಾಜ್ಯ ಸರಕಾರ ಕಳೆದ ಮೂರು ವರ್ಷಗಳಲ್ಲಿ 1500 ರೂ ವ್ಯಯಿಸಿದೆ. ಪ್ರತೀ ಲೀಟರ್ ಪೆಟ್ರೋಲ್‌ಗೂ ನಾವು ಒಂದು ರೂ ಸಬ್ಸಿಡಿ ಕೊಡುತ್ತಾ ಬಂದಿದ್ದೇವೆ" ಎಂದು ಮಮತಾ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.

ನಿನ್ನೆ ಮೋದಿ ಅವರ ವಿಡಿಯೋ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಮತಾ ಬ್ಯಾನರ್ಜಿ ಮಾತನಾಡುತ್ತಾ ಪ್ರಧಾನಿ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್ ಪರಿಸ್ಥಿತಿಯನ್ನ ಅವಲೋಕಿಸಲು ಕರೆದಿದ್ದ ಸಭೆಯಲ್ಲಿ ಪ್ರಧಾನಿಯವರು ಪೆಟ್ರೋಲ್ ಡೀಸೆಲ್ ಸಬ್ಸಿಡಿ ವಿಚಾರ ಪ್ರಸ್ತಾಪಿಸಿದ್ದು ಅಚ್ಚರಿ ಮೂಡಿಸಿತ್ತು. "ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಸಿತ್ತು. ರಾಜ್ಯಗಳೂ ತಮ್ಮ ತೆರಿಗೆಯಲ್ಲಿ ಕಡಿತ ಮಾಡುವಂತೆ ಕೇಳಿದ್ದೆವು. ಕರ್ನಾಟಕ, ಗುಜರಾತ್ ಮೊದಲಾದ ಕೆಲ ರಾಜ್ಯಗಳು ತೆರಿಗೆ ಕಡಿತ ಮಾಡಿದ್ದವು. ಬೇರೆ ಕೆಲ ರಾಜ್ಯಗಳು ತೆರಿಗೆ ಕಡಿತ ಮಾಡಲಿಲ್ಲ. ಈ ಮೂಲಕ ಈ ರಾಜ್ಯಗಳು ಜನರಿಗೆ ಅನ್ಯಾಯ ಮಾಡಿವೆ" ಎಂದು ಪ್ರಧಾನಿಗಳು ಕುಟುಕಿದ್ದರು.

Mamata Banerjee, Uddhav Slams PM Narendra Modi on Fuel Subsidy

"ಕೋವಿಡ್ ಸಭೆಯಲ್ಲಿ ಪ್ರಧಾನಿಗಳು ಇಂಧನ ದರ ಏರಿಕೆ ವಿಚಾರ ಯಾಕೆ ಮಾತನಾಡಬೇಕಿತ್ತು? ಅದೇ ಅವರ ಅಜೆಂಡಾ ಇದ್ದಂತಿತ್ತು" ಎಂದು ಮಮತಾ ಬ್ಯಾನರ್ಜಿ ಸಿಡಿಗುಟ್ಟಿದ್ದಾರೆ. ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ಬೇರೆ ರಾಜ್ಯಗಳೂ ಬೇಸರ ವ್ಯಕ್ತಪಡಿಸಿವೆ.

ಮಹಾರಾಷ್ಟ್ರ ಕೂಡ ಗರಂ:
ಕೇಂದ್ರ ಸರಕಾರದಿಂದ ಕೆಲ ರಾಜ್ಯಗಳಿಗೆ ಬರಬೇಕಿರುವ ಜಿಎಸ್‌ಟಿ ಹಣ ಮರಳಿಸುವಂತೆ ಮಮತಾ ಬ್ಯಾನರ್ಜಿ ಮಾಡಿರುವ ಆಗ್ರಹಕ್ಕೆ ಬಿಜೆಪಿಯೇತರ ಪಕ್ಷಗಳ ಆಡಳಿತದ ರಾಜ್ಯಗಳು ಧ್ವನಿಗೂಡಿಸಿವೆ. "ದೇಶದಲ್ಲಿ ಡೈರೆಕ್ಟ್ ಟ್ಯಾಕ್ಸ್‌ನಿಂದ ಬರುವ ಆದಾಯದಲ್ಲಿ ಮಹಾರಾಷ್ಟ್ರದಿಂದ ಶೇ. 38.3 ಹೋಗುತ್ತದೆ. ಜಿಎಸ್‌ಟಿಯಲ್ಲಿ ಮಹಾರಾಷ್ಟ್ರದ ಪಾಲು ಶೇ. 15ರಷ್ಟಿದೆ ಆದರೆ, ಕೇಂದ್ರ ಸರಕಾರ ಮಹಾರಾಷ್ಟ್ರಕ್ಕೆ ನೀಡುವುದು ಕೇವಲ ಶೇ. 5.5 ಮಾತ್ರ. ಜಿಎಸ್ಟಿ ಪರಿಹಾರದಲ್ಲಿ ಕೇಂದ್ರದಿಂದ ಮಹಾರಾಷ್ಟ್ರಕ್ಕೆ ಬರಬೇಕಿರುವ ಬಾಕಿ ಹಣ 26,500 ಕೋಟಿ ರೂ ಇದೆ. ಪ್ರಧಾನಿ ಮೊದಲು ಅದನ್ನ ನೀಡಲಿ" ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಒತ್ತಾಯಿಸಿದ್ದಾರೆ.

Mamata Banerjee, Uddhav Slams PM Narendra Modi on Fuel Subsidy

ಕಾಂಗ್ರೆಸ್ ಟೀಕೆ:
"ಯುಪಿಎ ಸರಕಾರದ ಆಡಳಿತ ಇದ್ದಾಗ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 9.48 ಮತ್ತು 3.56 ರೂ ಅಬಕಾರಿ ಸುಂಕ ಇತ್ತು. ನರೇಂದ್ರ ಮೋದಿ ನೇತೃತ್ವದ ಸರಕಾರ ಪೆಟ್ರೋಲ್ ಮೇಲೆ 27.90 ರೂ ಹಾಗು ಡೀಸೆಲ್ ಮೇಲೆ 21.80 ರೂ ಎಕ್ಸೈಸ್ ಟ್ಯಾಕ್ ಹೇರುತ್ತಿದೆ. ಮೋದಿ ಆಡಳಿತಕ್ಕೆ ಬಂದ ಬಳಿಕ ಎಕ್ಸೈಸ್ ಸುಂಕ 18 ರೂಪಾಯಿಗೂ ಹೆಚ್ಚು ಮೊತ್ತದಷ್ಟು ಏರಿದೆ. ಇಷ್ಟು ಏರಿಕೆಯನ್ನ ವಾಪಸ್ ಪಡೆಯಿರಿ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ಸವಾಲು ಹಾಕಿದ್ದಾರೆ.

ಕೊರೊನಾವೈರಸ್ ನಿಯಂತ್ರಣಕ್ಕಾಗಿ ಲಸಿಕೆ ವಿತರಣೆಗೆ ವೇಗ ನೀಡಲು ಪ್ರಧಾನಿ ಕರೆ ಕೊರೊನಾವೈರಸ್ ನಿಯಂತ್ರಣಕ್ಕಾಗಿ ಲಸಿಕೆ ವಿತರಣೆಗೆ ವೇಗ ನೀಡಲು ಪ್ರಧಾನಿ ಕರೆ

ಇನ್ನಷ್ಟು ತೆರಿಗೆ ಕಡಿತ ಮಾಡುತ್ತಾರಾ ಬೊಮ್ಮಾಯಿ?
ಪ್ರಧಾನಿ ಮೋದಿ ನಿನ್ನೆ ಕೋವಿಡ್ ಪರಿಶೀಲನಾ ಸಭೆಯಲ್ಲಿ ಪೆಟ್ರೋಲ್ ಸಬ್ಸಿಡಿ ವಿಚಾರ ಮಾತನಾಡಿದ್ದನ್ನು ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿಗಳು ಹೇಳಿದ್ದರಲ್ಲಿ ತಪ್ಪೇನಿದೆ? ಸಾಮಾನ್ಯ ಜನರ ಹಿತದೃಷ್ಟಿಯಿಂದ ಅವರು ಮಾತನಾಡಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳು ತೆರಿಗೆ ಕಡಿತ ಮಾಡಿವೆ. ಬೇರೆ ರಾಜ್ಯಗಳೂ ಕಡಿತ ಮಾಡಿದ್ದರೆ ಆ ರಾಜ್ಯಗಳ ಜನರಿಗೆ ಅನುಕೂಲವಾಗುತ್ತಿತ್ತು ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಜನರ ಅನುಕೂಲಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಇನ್ನಷ್ಟು ವ್ಯಾಟ್ ತೆರಿಗೆ ಕಡಿತ ಮಾಡುವ ಯೋಜನೆ ಇದೆಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, "ಅಂಥ ಯೋಚನೆ ಸದ್ಯ ಇಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನೂ ನೋಡಬೇಕಲ್ಲ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
The Centre owes West Bengal Rs 97,000 crore, I request the PM to pay us half of that amount and we will provide higher subsidy on petrol and diesel than the BJP-ruled states said West Bengal CM Mamata Banerjee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X