• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ಯಾಂಡೇಜ್ ಸುತ್ತಿದ ಕಾಲಿನಲ್ಲೇ ರಾಷ್ಟ್ರಗೀತೆಗೆ ಎದ್ದುನಿಂತ ಮಮತಾ ಬ್ಯಾನರ್ಜಿ

|

ಕೋಲ್ಕತಾ, ಮಾರ್ಚ್ 30: ನಂದಿಗ್ರಾಮ ವಿಧಾನಸಭೆಗೆ ಮಾರ್ಚ್ 11ರಂದು ಉಮೇದುವಾರಿಕೆ ಸಲ್ಲಿಸಿದ ಬಳಿಕ ಗಾಯಗೊಂಡು, ಬ್ಯಾಂಡೇಜ್ ಸುತ್ತಿದ ಕಾಲಿನಲ್ಲಿಯೇ ಚುನಾವಣೆ ಪ್ರಚಾರ ನಡೆಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ರಾಷ್ಟ್ರಗೀತೆಗೆ ಕಷ್ಟಪಟ್ಟು ಎದ್ದು ನಿಂತು ಚುನಾವಣಾ ಪ್ರಚಾರವನ್ನು ಅಂತ್ಯಗೊಳಿಸಿದರು.

ಎರಡು ದಿನದ ಆಸ್ಪತ್ರೆ ವಾಸದ ಬಳಿಕ ಗಾಲಿ ಕುರ್ಚಿಯಲ್ಲಿಯೇ ಸಾಗಿ ಸತತವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಮತಾ ಬ್ಯಾನರ್ಜಿ, ನಂದಿಗ್ರಾಮದಲ್ಲಿ ತಮ್ಮ ಪ್ರಚಾರ ಮುಗಿದ ನಂತರ ರಾಷ್ಟ್ರಗೀತೆಗೆ ಎದ್ದುನಿಲ್ಲಲು ಪ್ರಯತ್ನಿಸಿದರು. ಅವರ ಪಕ್ಕದಲ್ಲಿದ್ದ ಟಿಎಂಸಿ ನಾಯಕರಾದ ಸುಬ್ರತಾ ಬಕ್ಷಿ ಮತ್ತು ದೋಲಾ ಸೇನ್ ಗಾಲಿಕುರ್ಚಿಯಿಂದ ಎದ್ದು ನಿಲ್ಲಲು ಸಹಾಯ ಮಾಡಿದರು. ರಾಷ್ಟ್ರಗೀತೆ ಮುಗಿಯುವವರೆಗೂ ಅವರು ಒಂದೇ ಕಾಲಿನಲ್ಲಿ ನಿಂತಿದ್ದರು.

ಬಿಜೆಪಿ ನಂದಿಗ್ರಾಮದ ಮತದಾರರಲ್ಲಿ ಭಯ ಹುಟ್ಟಿಸುತ್ತಿದೆ: ಮಮತಾ ಬ್ಯಾನರ್ಜಿ

ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿ ತೆರಳುವಾಗ ಬಿಜೆಪಿಯ ಕಾರ್ಯಕರ್ತರು ಹಲ್ಲೆ ನಡೆಸಿದ್ದರು ಎಂದು ಮಮತಾ ಆರೋಪಿಸಿದ್ದರು. ಕಾಲು ಮತ್ತು ಕುತ್ತಿಗೆಗೆ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರ ಮೇಲೆ ಯಾರೂ ಹಲ್ಲೆ ನಡೆಸಿರಲಿಲ್ಲ. ಕಾರಿನ ಬಾಗಿಲು ತಾಗಿ ಗಾಯವಾಗಿತ್ತು ಎಂದು ಚುನಾವಣಾ ಆಯೋಗ ವರದಿ ನೀಡಿತ್ತು. ಪ್ರತ್ಯಕ್ಷದರ್ಶಿಗಳೂ ಇದೇ ಹೇಳಿಕೆ ನೀಡಿದ್ದರು.

ಹತ್ರಾಸ್ ಅತ್ಯಾಚಾರದ ಬಗ್ಗೆ ಏಕೆ ಮಾತನಾಡಲಿಲ್ಲ ಅಮಿತ್ ಶಾ: ಮಮತಾ

ಮಮತಾ ಬ್ಯಾನರ್ಜಿ
Know all about
ಮಮತಾ ಬ್ಯಾನರ್ಜಿ

ನಂದಿಗ್ರಾಮ ವಿಧಾನಸಭೆ ಚುನಾವಣೆಯು ತೀವ್ರ ಕುತೂಹಲ ಮೂಡಿಸಿದೆ. ತೃಣಮೂಲ ಕಾಂಗ್ರೆಸ್‌ನಿಂದ ಬಂಡಾಯವೆದ್ದು ಬಿಜೆಪಿ ಸೇರ್ಪಡೆಯಾಗಿದ್ದ ಸುವೇಂದು ಅಧಿಕಾರಿಯನ್ನು ಸೋಲಿಸುವುದಾಗಿ ಪ್ರತಿಜ್ಞೆ ಮಾಡಿರುವ ಮಮತಾ ಬ್ಯಾನರ್ಜಿ, ವ್ಯಾಪಕ ಪ್ರಚಾರ ನಡೆಸಿದ್ದಾರೆ.

English summary
West Bengal assembly election 2021: TMC chief Mamata Banerjee ended her political campaign for the seat by standing up with her fractured leg for national anthem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X