ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ಎರಡಂಕಿಗೆ ಬಿಜೆಪಿ, ಮಮತಾ ಗರ್ವಭಂಗ?

|
Google Oneindia Kannada News

Recommended Video

Exit Poll 2019: 2014ರ ಸೋಲಿಗೆ ತಕ್ಕ ಉತ್ತರ ಕೊಟ್ಟ ಮೋದಿ

ಕೋಲ್ಕತ್ತಾ, ಮೇ 20: ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಎರಡಂಕಿಯನ್ನು ದಾಟಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಸತ್ಯವೇ ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಮುಖಭಂಗವಾಗಲಿದೆ.

2014 ರಲ್ಲಿ ಕೇವಲ 1 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಸರಾಸರಿ 12 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿವೆ ಎಂಬುದು ಚುನಾವಣೋತ್ತರ ಸಮೀಕ್ಷೆ ಫಲಿತಾಂಶದ ಅಂದಾಜು. ಇದು ಸತ್ಯವೇ ಆದರೆ, ಟಿಎಂಸಿ ಭದ್ರಕೋಟೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಭಾರೀ ನಷ್ಟ ಅನುಭವಿಸಬೇಕಾಗಬಹುದು. ಟಿಎಂಸಿ ಮತ್ತು ಎಡಪಕ್ಷಗಳ ಬೆಂಬಲಿಗರೇ ಹೆಚ್ಚಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹತ್ತಕ್ಕೂ ಹೆಚ್ಚು ಸ್ಥಾನ ಗೆದ್ದರೆ ಅದು ಸಾರ್ವಕಾಲಿಕ ದಾಖಲೆಯಾಗುತ್ತದೆ.

ಎಕ್ಸಿಟ್ ಪೋಲ್, ಇಂಡಿಯಾ ಟುಡೇ: ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗಎಕ್ಸಿಟ್ ಪೋಲ್, ಇಂಡಿಯಾ ಟುಡೇ: ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗ

ದೀದಿ ಗರ್ವಭಂಗಕ್ಕೆ ಪಣತೊಟ್ಟಿರುವ ಬಿಜೆಪಿ ಈ ಸಾರಿ ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಒತ್ತುಕೊಟ್ತು ಪ್ರಚಾರ ನಡೆಸಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಡುವಿನ ವಾಕ್ಸಮರವಂತೂ ತಾರಕಕ್ಕೇರಿತ್ತು.

LS Polls: BJP will cross double digit in West Bengal

ಆದರೆ ಮಮತಾ ಬ್ಯಾನರ್ಜಿ ಅವರು ನಋಣಾತ್ಮಕ ರಾಜಕಾರಣಕ್ಕೇ ಹೆಚ್ಚು ಒತ್ತು ಕೊಟ್ಟಿದ್ದರಿಂದ ಮತ್ತು ಪ್ರಧಾನಿ ಹುದ್ದೆಗೆ ಅವಮಾನ ಮಾಡುವಂಥ ಹೇಳಿಕೆಗಳನ್ನು ನೀಡಿದ್ದರಿಂದ ಅದು ಅವರಿಗೆ ಭಾರೀ ಹಿನ್ನಡೆ ತರಬಹುದು ಎಂದು ಲೆಕ್ಕಾಚಾರ ಮಾಡಲಾಗಿದೆ.

ಎಕ್ಸಿಟ್ ಪೋಲ್‌ಗೆ ಪ್ರತಿಪಕ್ಷಗಳ ಆಕ್ರೋಶ ಹಾಗೂ ನೆಪಎಕ್ಸಿಟ್ ಪೋಲ್‌ಗೆ ಪ್ರತಿಪಕ್ಷಗಳ ಆಕ್ರೋಶ ಹಾಗೂ ನೆಪ

ಅದೂ ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳೂ ಬಿಜೆಪಿಯನ್ನು ಪರೋಕ್ಷವಾಗಿ ಬೆಂಬಲಿಸಿವೆ ಎಂಬ ಮಾತುಗಳಿದ್ದು, ಅದರಿಂದಾಗಿ ಬಿಜೆಪಿ ಲಾಭಗಳಿಸಲಿದೆ ಎನ್ನಲಾಗುತ್ತಿದೆ.

English summary
Lok Sabha Elections 2019: According to exit poll results which has released on May 19th, BJP in West Bengal will cross double digit for the first time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X