ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಹಿರಿಯ ಹುಲಿ 'ರಾಜ' ಇನ್ನು ನೆನಪು ಮಾತ್ರ

|
Google Oneindia Kannada News

ಕೊಲ್ಕತ್ತಾ ಜು.11: ಭಾರತದ ಅತ್ಯಂತ ಹಿರಿಯ ವಯಸ್ಸಿನ ಹುಲಿಗಳಲ್ಲಿ ಒಂದಾಗಿದ್ದ 'ರಾಜ' ಪಶ್ಚಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯ ಜಲ್ದಪುರ್ ದಲ್ಲಿರುವ ಖೈರಿಬರಿ ಹುಲಿ ಹಾಗೂ ಚಿರತೆ ರಕ್ಷಣಾ ಕೇಂದ್ರದಲ್ಲಿ ಸೋಮವಾರ ಮೃತಪಟ್ಟಿದೆ.

ರಾಯಲ್ ಬೆಂಗಾಲ್ ಹುಲಿಯಾಗಿದ್ದ 'ರಾಜ' ಗೆ 25ವರ್ಷ 10 ತಿಂಗಳು ವಯಸ್ಸಾಗಿತ್ತು. 2018ರಲ್ಲಿ ಸುಂದರಬನ್ ಅರಣ್ಯ ಪ್ರದೇಶದಲ್ಲಿ ಮೊಸಳೆ ದಾಳಿಯಿಂದ 'ರಾಜ'ನ ಕಾಲು ಸಂಪೂರ್ಣವಾಗಿ ಗಾಯಗೊಂಡಿತ್ತು. ನಂತರ ಕೃತಕ ಕಾಲು ಜೋಡಣೆ ಮಾಡಲಾಗಿತ್ತು. ಅಂದಿನಿಂದಲೂ ದಕ್ಷಿಣ ಖೈರಿಬರಿ ಯಲ್ಲಿನ ರಾಯಲ್ ಬೆಂಗಾಲ್ ಹುಲಿ ಪುನರ್ವಸತಿ ಕೇಂದ್ರದಲ್ಲಿ ವಾಸವಾಗಿತ್ತು.

ಚಾಮರಾಜನಗರ: ಹಸು ಕೊಂದು, ರೈತರ ಮೇಲೆ ದಾಳಿ ಮಾಡಿದ್ದ ಹುಲಿ ಸೆರೆ ಚಾಮರಾಜನಗರ: ಹಸು ಕೊಂದು, ರೈತರ ಮೇಲೆ ದಾಳಿ ಮಾಡಿದ್ದ ಹುಲಿ ಸೆರೆ

11 ವರ್ಷದ ಹುಲಿ ಖರೀದಿ; ಸೋಮವಾರ ಬೆಳಗ್ಗೆ ಜಲ್ದಪುರ್ ಅರಣ್ಯ ಪ್ರದೇಶದಲ್ಲಿ ಈ ಹುಲಿ ಸಾವನ್ನಪ್ಪಿದೆ ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಈ 'ರಾಜ' ಹುಲಿಗೆ 25 ನೇ ವರ್ಷದ ಹುಟ್ಟುವನ್ನು ಸಂಭ್ರಮದಿಂದ ಆಚರಿಸಲಾಗಿತ್ತು.

ವಿಶೇಷ: ಹುಲಿ ಮುಟ್ಟಿದರೆ ಆಪತ್ತು! ಕಾಪು ಪಿಲಿಕೋಲದ ವೈಭವ ವಿಶೇಷ: ಹುಲಿ ಮುಟ್ಟಿದರೆ ಆಪತ್ತು! ಕಾಪು ಪಿಲಿಕೋಲದ ವೈಭವ

Tiger

ಇತ್ತೀಚೆಗೆ ಹುಲಿಗೆ ಯಾವುದೇ ರೀತಿಯಲ್ಲಿ ಗಂಭೀರ ಸಮಸ್ಯೆಗಳು ಕಂಡು ಬಂದಿರಲಿಲ್ಲ. ಖೈರಿ ಬರಿ ಹುಲಿ ಮತ್ತು ಚಿರತೆ ಸಂರಕ್ಷಣಾ ಕೇಂದ್ರವು ಈ ಹುಲಿ ಖರೀದಿಸಿದಾಗ ಅದಕ್ಕೆ 11 ವರ್ಷ ವಯಸ್ಸಾಗಿತ್ತು. ಅತ್ಯಂತ ಉದ್ದನೆಯ ಈ 'ರಾಜ' ಸಾವಿನ ದಿನದಂದು 140 ಕೆಜಿ ಇದೆ ಎಂದು ತಿಳಿದು ಬಂದಿದೆ.

 ಆಂಧ್ರ; ನಲ್ಲಮಲ ಅರಣ್ಯದಲ್ಲಿ 6 ತಿಂಗಳಿನಲ್ಲಿ ಮೂರು ಹುಲಿ ಸಾವು ಆಂಧ್ರ; ನಲ್ಲಮಲ ಅರಣ್ಯದಲ್ಲಿ 6 ತಿಂಗಳಿನಲ್ಲಿ ಮೂರು ಹುಲಿ ಸಾವು

ಆದರೆ ಕಳೆದ ಕೆಲವು ದಿನಗಳಿಂದ ಹುಲಿ ಆರೋಗ್ಯದಲ್ಲಿ ತುಸು ಬದಲಾವಣೆಗಳು ಕಂಡು ಬಂದಿತ್ತು. ಹಿರಿಯ ಹುಲಿ ವಯೋಸಹಜ ಸಂಬಂಧಿತ ಸಮಸ್ಯೆಯಿಂದ ಮೃತಪಟ್ಟಿದೆ ಎಂದು ಪಶುಸಂಗೋಪನೆ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಹುಲಿ ದಾಳಿಯ ವೇಳೆ ಗಂಭೀರವಾಗಿ ಗಾಯಗೊಂಡಿದ್ದ 'ರಾಜ'ನಿಗೆ ಇದೇ ವೈದ್ಯರು ಕೃತಕ ಕಾಲು ಜೋಡಣೆ ಮಾಡಿದ್ದರು.

Recommended Video

Dinesh Karthik ಇನ್ಮುಂದೆ ಬೆಂಚ್ ಕಾಯೋದು ಕನ್ಫರ್ಮ್ | *Cricket | OneIndia Kannada

ಹುಲಿ ಸ್ಮಾರಕ ನಿರ್ಮಿಸುವ ಚಿಂತನೆ; ಸುದ್ದಿ ತಿಳಿದು ಖೈರಿಬರಿ ಹುಲಿ ಮತ್ತು ಚಿರತೆ ಸಂರಕ್ಷಣಾ ಕೇಂದ್ರಕ್ಕೆ ಆಗಮಿಸಿದ ಅಲಿಪುರ್ದಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುರೇಂದ್ರ ಕುಮಾರ್ ಅವರು ಅಗಲಿದ ಹಿರಿಯ ಹುಲಿ 'ರಾಜ' ಗೆ ಅಂತಿಮ ನಮನ ಸಲ್ಲಿಸಿದರು. ರಾಜ ಸ್ಮರಣಾರ್ಥ ಖೈರಿ ಬರಿ ಹುಲಿ ಮತ್ತು ಚಿರತೆ ಸಂರಕ್ಷಣಾ ಕೇಂದ್ರದಲ್ಲಿ ಸ್ಮಾರಕ ನಿರ್ಮಿಸುವ ಚಿಂತನೆಯು ಇದೆ ಎಂದು ತಿಳಿದು ಬಂದಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ 26 ವರ್ಷದ 'ಗುಡ್ಡು' ಅತ್ಯಂತ ಹಿರಿಯ ಹುಲಿ 2014 ರ ಜನವರಿಯಲ್ಲಿ ಮೃತಪಟ್ಟಿತ್ತು. ಅದಾದ ನಂತರ ಇದೀಗ ಮತ್ತೊಂದು ಹಿರಿಯ ಹುಲಿ 'ರಾಜ' ಅಸುನೀಗಿರುವುದು ಅರಣ್ಯ ಸಿಬ್ಬಂದಿಯಲ್ಲಿ ಅತೀವ ದುಃಖ ತರಿಸಿದೆ.

English summary
The 25 year old Tiger was named Raja passed away on Monday at Khairibari Tiger Rescue Center in West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X