ಮಣ್ಣಿನ ಲಾಡು ಮಾಡಿ ಮೋದಿ ಹಲ್ಲು ಮುರಿಯಲು ಕಲ್ಲು ಇಡುತ್ತೇನೆಂದ ದೀದಿ ಮಮತಾ
ಕೋಲ್ಕತ್ತಾ, ಏಪ್ರಿಲ್ 26 : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಂದಿನ ಬಾರಿ ಮಣ್ಣಿನಿಂದ ತಯಾರಿಸಿದ ಸ್ವೀಟ್ ಕಳಿಸುತ್ತೇನೆ ಎನ್ನುವ ಮೂಲಕ ತಮ್ಮ ರಾಜಕೀಯ ವೈಮನಸ್ಯವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಪಶ್ಚಿಮ ಬಂಗಾಳದ ಅಸಾನೋಲ್ ಎಂಬಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಮಣ್ಣಿನ ಲಾಡು ತಯಾರಿಸಿ ಮೋದಿ ಅವರ ಹಲ್ಲು ಮುರಿಯಲು ಗೋಡಂಬಿ ಬದಲು ಕಲ್ಲು ಇಡುತ್ತೇನೆ ಎಂದು ಕೆಂಡ ಕಾರಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ಮಾಡುವ ಸಂದರ್ಭದಲ್ಲಿ, "ಮಮತಾ ಬ್ಯಾನರ್ಜಿ ಅವರು ನನಗೆ ಪ್ರತಿ ವರ್ಷವೂ ಸ್ವೀಟ್ ಕಳಿಸುತ್ತಾರೆ" ಎಂದು ಮೋದಿ ಹೇಳಿದ್ದರು.

ಲೋಕಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡಿದ ದೀದಿ, "ಈ ಬಾರಿ ಮೋದಿಯವರಿಗೆ ಸ್ವೀಟು ಕಳಿಸುವಾಗ ಅವರಿಗೆ ಮಣ್ಣಿನ ಸ್ವೀಟು ನೀಡುತ್ತೇನೆ" ಎಂದ ವಿಷ ಕಾರಿದ್ದಾರೆ.
ಮಮತಾ ಬ್ಯಾನರ್ಜಿ ಅವರು ತಮಗೆ ವರ್ಷಕ್ಕೆರಡು ಕುರ್ತಾ ಸಹ ಕಳಿಸುತ್ತಾರೆ ಎಂದೂ ನರೇಂದ್ರ ಮೋದಿ ಅವರು ಸಂದರ್ಶನದಲ್ಲಿ ಹೇಳಿದ್ದರು. ಪ್ರತಿವರ್ಷ ಕಳುಹಿಸುತ್ತಿದ್ದ ಉಡುಗೊರೆಯನ್ನು ಪ್ರೀತಿಯಿಂದ ನೆನಪಿಸಿಕೊಂಡಿದ್ದಕ್ಕೆ ಪ್ರಧಾನಿಗೆ ಈ ರೀತಿ ದೀದಿ ಹೇಳಿರುವುದು ಸರಿಯಾ? ಇಷ್ಟೊಂದು ವಿಷ ಕಾರುವ ಅಗತ್ಯವಿತ್ತೆ?












Click it and Unblock the Notifications