ನಾನು ಬೀದಿ ಹೋರಾಟಗಾರ್ತಿ, ಎಚ್ಚರ; ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ್ತಾ,

ಜನವರಿ
29:
"ಕೇಂದ್ರ
ಸರ್ಕಾರ
ಎರಡರಲ್ಲಿ
ಒಂದು
ಕೆಲಸವನ್ನು
ಮಾಡಲೇಬೇಕು.
ಒಂದು,
ಮೂರು
ಕೃಷಿ
ಕಾಯ್ದೆಗಳನ್ನು
ಹಿಂಪಡೆಯಬೇಕು,
ಇಲ್ಲವೇ
ಪ್ರಧಾನಿ
ನರೇಂದ್ರ
ಮೋದಿ
ಹಾಗೂ
ಗೃಹ
ಸಚಿವ
ಅಮಿತ್
ಶಾ
ರಾಜೀನಾಮೆ
ನೀಡಬೇಕು"
ಎಂದು
ಪಶ್ಚಿಮ
ಬಂಗಾಳ
ಸಿಎಂ
ಮಮತಾ
ಬ್ಯಾನರ್ಜಿ
ಆಗ್ರಹಿಸಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ದೆಹಲಿಯಲ್ಲಿ

ಗಣರಾಜ್ಯೋತ್ಸವದಂದು
ರೈತರ
ಟ್ರ್ಯಾಕ್ಟರ್
ಜಾಥಾ
ವೇಳೆ
ನಡೆದ
ಗಲಭೆಗೆ
ಸಂಬಂಧಿಸಿದಂತೆ
ಪ್ರತಿಕ್ರಿಯಿಸಿದ
ಅವರು,
"ಗಣರಾಜ್ಯೋತ್ಸವದಂದು
ದೆಹಲಿಯ
ಕೆಂಪು
ಕೋಟೆ
ಮೇಲೆ
ಧ್ವಜ
ಹಾರಿಸಿದ
ವ್ಯಕ್ತಿ
ಬಿಜೆಪಿ
ಚಮಚಾ.
ಆತ
ಅಮಿತ್
ಶಾ,
ನರೇಂದ್ರ
ಮೋದಿ
ಜೊತಿಗಿದ್ದ
ಫೋಟೊಗಳು
ಇವೆ.
ಇದು
ಬಿಜೆಪಿ
ಷಡ್ಯಂತ್ರ.
ಇವರಿಬ್ಬರೂ
ರಾಜೀನಾಮೆ
ನೀಡಬೇಕು"
ಎಂದು
ವಾಗ್ದಾಳಿ
ನಡೆಸಿದ್ದಾರೆ.
ಮುಂದೆ
ಓದಿ...

id='are-slot-2'
class='oiad
oi-axt
oiadv'>

"ಕೇಂದ್ರದ್ದೇ ತಪ್ಪು ಎಂದು ಧೈರ್ಯವಾಗಿ ಹೇಳುತ್ತೇನೆ"

ಆದರೆ ದುಃಖಕರ ಸಂಗತಿ ಎಂದರೆ, ರೈತರ ಜೊತೆ ನಿಲ್ಲಲು ಯಾರೂ ಇಲ್ಲ. ಹೀಗಾಗಿ ನಾನು ರೈತರ ಪರ ನಿಲ್ಲಲು ನಿರ್ಧರಿಸಿದ್ದೇನೆ. ಎಲ್ಲರೂ ಕೇಂದ್ರ ಸರ್ಕಾರದ ಬಗ್ಗೆ ಭಯಪಡುತ್ತಿದ್ದಾರೆ. ಆದರೆ ಈ ಘಟನೆ ಕೇಂದ್ರ ಸರ್ಕಾರದ ತಪ್ಪು ಎಂದು ನಾನು ಧೈರ್ಯವಾಗಿ ಹೇಳುತ್ತಿದ್ದೇನೆ. ರೈತರ ಹೋರಾಟವನ್ನು ಹೇಗೆ ನೋಡಲಾಗುತ್ತಿದೆ? ಅವರನ್ನು ಭಯೋತ್ಪಾದಕರಂತೆ ಬಿಂಬಿಸುವುದು ಸರಿಯೇ? ದೆಹಲಿಗೆ ಬರಲು ಅನುಮತಿ ನೀಡಿ ನಂತರ ಹೀಗೆ ರೈತರನ್ನು ನಡೆಸಿಕೊಳ್ಳಲಾಗಿದೆ ಎಂದು ದೂರಿದರು.

"ಇದು ಸಣ್ಣ ಘಟನೆ; ಬಿಜೆಪಿ ಬೆಂಕಿ ಹೊತ್ತಿಸುತ್ತಿದೆ"

ರಾಜಧಾನಿಯಲ್ಲಿ ಗಣರಾಜ್ಯೋತ್ಸವದಂದು ನಡೆದದ್ದನ್ನು ಸಣ್ಣ ಘಟನೆ ಎಂದಿರುವ ಮಮತಾ ಬ್ಯಾನರ್ಜಿ, ಈ ಘಟನೆಯಿಂದ ಏನಾದರೂ ತೊಂದರೆಯಾಗಿದೆಯೇ? ಇಲ್ಲ. ಆದರೆ ಬಿಜೆಪಿ ದೇಶವನ್ನೇ ಹೊತ್ತು ಉರಿಯುವಂತೆ ಮಾಡುತ್ತಿದೆ. ಬಿಜೆಪಿ ಆ ಬೆಂಕಿಯಲ್ಲಿ ಸಿಲುಕುವುದಿಲ್ಲ. ಎಲ್ಲವನ್ನೂ ಸುಡುವಂತೆ ಮಾಡುತ್ತದೆ. ಇದಕ್ಕೆ ಉದಾಹರಣೆ, ಈಚೆಗೆ ರಾಜಸ್ಥಾನದಲ್ಲಿ ಅಮಿತ್ ಶಾ ನೀಡಿದ ಒಂದು ಹೇಳಿಕೆ. ತಮ್ಮ ಬಳಿ 50 ಲಕ್ಷ ವಾಟ್ಸಪ್ ಗ್ರೂಪ್ ಗಳಿವೆ. ನಾವು ಇದರಿಂದ ಸುಳ್ಳು ಮಾಹಿತಿ ಹರಡಬಹುದಲ್ಲವೇ ಎಂದಿದ್ದರು. ಈಗ ಅದೇ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

"ರೈತರ ಚಳವಳಿಯನ್ನು ಒಡೆಯಲು ನೋಡುತ್ತಿದ್ದಾರೆ"

ದೇಶದ ಗೃಹ ಸಚಿವರಾದವರೇ ಹೀಗೆ ಹೇಳುತ್ತಾರೆ ಎಂದರೆ, ದೆಹಲಿಯಲ್ಲಿ ಏನಾಯಿತು, ಅದಕ್ಕೆ ಕಾರಣ ಏನು ಎಂಬುದನ್ನು ನೀವೇ ಊಹಿಸಿಕೊಳ್ಳಿ. ರೈತರು ಮುಗ್ಧರು. ಆದರೆ ಅವರನ್ನು ಭಯೋತ್ಪಾಕರು ಎನ್ನುತ್ತಿದ್ದಾರೆ. ಅವರ ಶಾಂತಿಯುತ ಚಳವಳಿಯನ್ನು ಸುಳ್ಳಿನಿಂದ ಒಡೆಯಲು ನೋಡುತ್ತಿದ್ದಾರೆ. ನಾವು ರೈತರ ಪರ ನಿಲ್ಲುತ್ತೇವೆ ಎಂದು ಹೇಳಿದರು.

"ನಾನು ಬೀದಿ ಹೋರಾಟಗಾರ್ತಿ; ಎಚ್ಚರ"

ದೇಶಕ್ಕೆ ಪ್ರತಿ ರಾಜ್ಯವೂ ಪ್ರಧಾನಿ ಹಾಗೂ ರಾಷ್ಟ್ರಪತಿಯನ್ನು ನೀಡಿದೆ. ಆದರೆ ಜನರನ್ನು ಹತ್ತಿಕ್ಕುವ ಇಂಥ ಸರ್ಕಾರವನ್ನು ನಾನು ಈವರೆಗೂ ನೋಡಿರಲಿಲ್ಲ. ನಿಮಗೆ ಇಷ್ಟವಿಲ್ಲವೆಂದರೆ ಕೊಂದು ಬಿಡಿ ಎನ್ನುತ್ತಿದೆ ಈ ಸರ್ಕಾರ. ಬಿಜೆಪಿ ನನ್ನ ವಿರುದ್ಧ ಗೋಲಿ ಮಾರೋ ಘೋಷಣೆ ಕೂಗುತ್ತಿದೆ. ಇದು ನಿಮ್ಮ ಘೋಷಣೆಯಾದರೆ, ಇಲ್ಲಿಂದ ತೊಲಗಿ ಎಂಬುದು ನನ್ನ ಘೋಷಣೆ. ಬಿಜೆಪಿಗೆ ನನ್ನ ಬಗ್ಗೆ ಇನ್ನೂ ಗೊತ್ತಿಲ್ಲ. ನಾನು ಬೀದಿ ಹೋರಾಟಗಾರ್ತಿ, ಇದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+