• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿವರ ಮಗಳನ್ನು ಸರ್ಕಾರಿ ಕೆಲಸದಿಂದ ವಜಾಗೊಳಿಸಿದ ಹೈಕೋರ್ಟ್

|
Google Oneindia Kannada News

ಕೋಲ್ಕತ್ತಾ, ಮೇ 20: ಮಹತ್ವದ ಪ್ರಕರಣವೊಂದರಲ್ಲಿ ಸಚಿವರ ಮಗಳ ಸರ್ಕಾರಿ ಅನುದಾನಿತ ಶಾಲೆಯ ಉದ್ಯೋಗವನ್ನು ವಜಾಗೊಳಿಸಿ ಆದೇಶ ನೀಡಿರುವ ಕೋಲ್ಕತ್ತಾ ಹೈಕೋರ್ಟ್‌ 41 ತಿಂಗಳು ಶಿಕ್ಷಕಿಯಾಗಿ ಪಡೆದ ವೇತನವನ್ನು ಹಿಂದಿರುಗಿಸುವಂತೆ ಸೂಚನೆ ನೀಡಿದೆ.

ಪಶ್ಚಿಮ ಬಂಗಾಳದ ತೃಣ ಮೂಲ ಕಾಂಗ್ರೆಸ್‌ ಪಕ್ಷದ ನಾಯಕ, ಶಿಕ್ಷಣ ಖಾತೆ ರಾಜ್ಯ ಸಚಿವ ಪರೇಶ್‌ಚಂದ್ರ ಅಧಿಕಾರಿ ಪುತ್ರಿ ಅಂಕಿತಾ ವಿರುದ್ಧ ಬಬಿತಾ ಸರ್ಕಾರ್ ಸಲ್ಲಿಸಿದ್ದಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಈ ತೀರ್ಪು ನೀಡಿದೆ.

2016ರಲ್ಲಿ ನಡೆದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆಯಲ್ಲಿ ಬಬಿತಾ ಸರ್ಕಾರ್ 77 ಅಂಕ ಗಳಿಸಿದ್ದರು. ಆದರೆ 61 ಅಂಕಗಳಿಸಿದ್ದ ಸಚಿವರ ಪುತ್ರಿ ಅಂಕಿತಾಗೆ ಉದ್ಯೋಗ ನೀಡಲು ನನ್ನನ್ನು ಆಯ್ಕೆ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಬಬಿತಾ ಸರ್ಕಾರ್ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಭಿಜಿಜ್ ಗಂಗೋಪಾಧ್ಯಾಯ ಅವರ ಏಕಪೀಠವು ತೀರ್ಪು ನೀಡಿದೆ. ಎರಡು ಕಂತುಗಳಲ್ಲಿ ವೇತನವನ್ನು ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್‌ ಅವರಿಗೆ ಠೇವಣಿ ಮಾಡುವಂತೆ ಸೂಚನೆ ನೀಡಿದೆ.

ಮುಂದಿನ ಆದೇಶದವರೆಗೆ ಶಾಲೆಯ ಆವರಣ ಪ್ರವೇಶಿಸದಂತೆ ಅಂಕಿತಾ ಅವರಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ವೇತನದ ಮೊದಲ ಕಂತನ್ನು ಜೂನ್ 7ರೊಳಗೆ ಮತ್ತು ಎರಡನೇ ಕಂತನ್ನು ಜುಲೈ 7ರೊಳಗೆ ಪಾವತಿಸಲು ಗಡುವು ನೀಡಿದೆ. ಅಂಕಿತಾರನ್ನು ಉದ್ಯೋಗದಿಂದ ವಜಾಗೊಳಿಸಲಾಗಿದ್ದು, ಆ ಹುದ್ದೆಯನ್ನು ಅರ್ಜಿದಾರರಿಗೆ ಮೀಸಲಿಡಲಾಗುವುದು ಎಂದು ಹೈಕೋರ್ಟ್‌ ಹೇಳಿದೆ.

ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದ ಬಬಿತಾ; 2016ರಲ್ಲಿ ನಡೆದ ರಾಜ್ಯಮಟ್ಟದ ಆಯ್ಕೆ ಪರೀಕ್ಷೆಯಲ್ಲಿ 77 ಅಂಕಗಳನ್ನು ಗಳಿಸಿದ್ದರೂ 61 ಅಂಕ ಗಳಿಸಿದ್ದ ಸಚಿವರ ಪುತ್ರಿ ಅಂಕಿತಾ . ಕೂಚ್ ಬೆಹಾರ್ ಜಿಲ್ಲೆಯ ಸರ್ಕಾರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದರು. ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಬಬಿತಾ ಸರ್ಕಾರ್ ನ್ಯಾಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದರು.

High Court Dismisses Minister Daughter From Government Job

ಬಬಿತಾ ಸರ್ಕಾರ್ ಪ್ರಾಥಮಿಕ ಆಯ್ಕೆ ಪಟ್ಟಿಯಲ್ಲಿ 20ನೇ ರ್‍ಯಾಂಕ್ ಪಡೆದಿದ್ದರು ಆದರೆ ಪಟ್ಟಿಯಲ್ಲಿ ಅಂಕಿತಾ ಹೆಸರು ಇರಲಿಲ್ಲ. ಎರಡನೇ ಸುತ್ತಿನ ಕೌನ್ಸಿಲಿಂಗ್ ಸಮಯದಲ್ಲಿ ಬಿಬಿತಾ 21ನೇ ರ್‍ಯಾಂಕ್‌ನಲ್ಲಿರುವುದು ಕಂಡುಬಂದಿದೆ. ಆಯ್ಕೆ ಪಟ್ಟಿಯನ್ನು ಗಮನಿಸಿದಾಗ ಸಚಿವರ ಪುತ್ರಿ ಅಂಕಿತಾ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅರಿವಾಗಿದೆ. ಅಂದಿನಿಂದ ಈ ಬಗ್ಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಬರೆದಿದ್ದಾರೆ.

ಪಶ್ಚಿಮ ಬಂಗಾಳದ ಶಾಲಾ ಸೇವಾ ಆಯೋಗದ ಶಿಫಾರಸ್ಸಿನ ಮೇರೆಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಶಾಲೆಯಲ್ಲಿ ಅಕ್ರಮವಾಗಿ ನೇಮಕ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ಹೈಕೋರ್ಟ್‌ನ ಆದೇಶದ ನಂತರ ಅಕ್ರಮ ನೇಮಕಾತಿ ಹಗರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸುತ್ತಿದೆ.

ಶಿಕ್ಷಣ ಸಚಿವ ಪರೇಶ್‌ಚಂದ್ರ ಅಧಿಕಾರಿ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ್ದಾರೆ. ಕೋರ್ಟ್‌ ಮುಂದೆ ಹಾಜರಾಗುವಂತೆ ನೀಡಿದ್ದ ಗಡುವಿನಲ್ಲಿ ಸಚಿವ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಸಚಿವ ಮತ್ತು ಪುತ್ರಿ ವಿರದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420, ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಚಿವ ಪರೇಶ್ ಚಂದ್ರ 2018ರಲ್ಲಿ ಆಲ್‌ ಇಂಡಿಯಾ ಫಾರ್ವರ್ಡ್ ಬ್ಲಾಕ್‌ ಪಕ್ಷವನ್ನು ತೊರೆದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅದೇ ವರ್ಷದಲ್ಲಿ ಅವರ ಪುತ್ರಿ ಉದ್ಯೋಗ ಪಡೆಯುವಲ್ಲಿ ಸಫಲರಾಗಿದ್ದರು. ಪ್ರಕರಣ ಸಂಬಂಧ ರಾಜ್ಯ ಶಿಕ್ಷಣ ಮಾಜಿ ಸಚಿವರಿಗೂ ಸಮನ್ಸ್ ನೀಡಿದೆ.

   ನಮ್ಮ ಲೆಕ್ಕಾಚಾರವನ್ನು ಮ್ಯಾಕ್ಸ್ವೆಲ್ ಹೇಗೆ ಉಲ್ಟಾ ಮಾಡಿದ್ರು ಅಂತ ಹೇಳಿದ ಹಾರ್ದಿಕ್ | OneIndia Kannada

   ಅಧಿಕಾರಿಯ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಉಚ್ಚ ನ್ಯಾಯಾಲಯವು ನಿಗದಿಪಡಿಸಿದ 3 ಗಂಟೆಯ ಗಡುವನ್ನು ಪೂರೈಸಲು ವಿಫಲವಾದ ನಂತರ.

   English summary
   The Calcutta high court on Friday dismissed the employee of a state minister daughter in a government-aided school and asked her to return the salary she had received during her 41-month tenure as a teacher.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X