ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾದ ಸಲಿಂಗಕಾಮಿ ದಂಪತಿಗಳ ವಿವಾಹ: ಫೋಟೋ ಮತ್ತು ವಿಡಿಯೊಗಳು ವೈರಲ್

|
Google Oneindia Kannada News

ಕೋಲ್ಕತ್ತಾ ಜುಲೈ 5: ಇತ್ತೀಚೆಗೆ ವಿವಾಹ ಪದ್ಧತಿಯೇ ಬದಲಾಗಿ ಹೋಗಿದೆ. ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಒಂಟಿ ಹೆಣ್ಣು ಮದುವೆಯಾಗುವುದು, ಗಂಡು ಗಂಡು ಮದುವೆಯಾಗುವ ಘಟನೆಗಳು ಬೆಳಕಿಗೆ ಬರಲಾರಂಭಿಸಿವೆ. ಇಂತಹದ್ದೇ ಒಂದು ಘಟನೆ ಕೋಲ್ಕತ್ತಾದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಇಬ್ಬರು ಗಂಡಸರು ಪರಸ್ಪರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜುಲೈ 3 ರ ಭಾನುವಾರದಂದು ಈ ಸಲಿಂಗಕಾಮಿ ಮದುವೆ ಸಮಾರಂಭ ನಡೆದಿದ್ದು ಅದ್ದೂರಿ ಮದುವೆಯ ಫೋಟೋಗಳು ವೈರಲ್ ಆಗಿವೆ. ಅಭಿಷೇಕ್ ರೇ ಮತ್ತು ಚೈತನ್ಯ ಶರ್ಮಾ ಎಂಬ ಪುರುಷರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು. ಅವರ ಕನಸಿನ ಮದುವೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಮದುವೆಯಲ್ಲಿ ರೇ ಸಾಂಪ್ರದಾಯಿಕ ಬಂಗಾಳಿ ವರನಂತೆ ಧೋತಿ-ಕುರ್ತಾವನ್ನು ಧರಿಸಿದ್ದರು ಮತ್ತು ಚೈತನ್ಯ ಅವರು ಶೆರ್ವಾನಿ ಧರಿಸಿದ್ದರು. ಅಭಿಷೇಕ್ ರೇ ಫ್ಯಾಷನ್ ಡಿಸೈನರ್ ಆಗಿದ್ದರೆ, ಚೈತನ್ಯ ಶರ್ಮಾ ಗುರುಗ್ರಾಮ್‌ನಲ್ಲಿ ಡಿಜಿಟಲ್ ಮಾರ್ಕೆಟರ್ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರ ಹಳದಿ ಸಮಾರಂಭದ ಫೋಟೋಗಳು ಮತ್ತು ವಿಡಿಯೊಗಳನ್ನು ಸಹ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ.

ಈ ವಿಶೇಷ ವಿವಾಹಕ್ಕೆ ನೆಟ್ಟಿಗರ ಪ್ರತಿಕ್ರಿಯೆ

"ಈ ಸುಂದರವಾದ ಜೋಡಿ ತುಂಬಾ ಮುದ್ದಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಮದುವೆಯನ್ನು ಲವ್ ಈಸ್ ಲವ್ ಈಸ್ ಲವ್'' ಎಂಬ ಪೋಸ್ಟ್‌ನ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬರು, "ವಾವ್ ವಿವಾಹಿತ ದಂಪತಿಗಳಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು" ಎಂದು ಬರೆದಿದ್ದಾರೆ.

ಮತ್ತೊಬ್ಬರು ಬರೆದುಕೊಂಡಿದ್ದಾರೆ, "ಈ ಪ್ರತಿ ಕ್ಷಣವನ್ನು ಸುಂದರವಾಗಿ ಮತ್ತು ಕಣ್ಣಿಗೆ ಆಹ್ಲಾದಕರವಾಗಿ ಸೆರೆಹಿಡಿಯಲಾಗಿದೆ. ಇದು ಎಂತಹ ಅಸಾಧಾರಣ ಮತ್ತು ಮಹೋನ್ನತ ಕೆಲಸ. ಈ ನವವಿವಾಹಿತ ದಂಪತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಒಟ್ಟಿಗೆ ಪ್ರೀತಿಯಿಂದ ಇರಿ" ಎಂದು ಬರೆದಿದ್ದಾರೆ.

ತೆಲಂಗಾಣದಲ್ಲಿ ಮೊದಲ ಸಲಿಂಗಕಾಮಿ ಮದುವೆ

ಈ ಹಿಂದೆ ಹೈದರಾಬಾದ್‌ನ ಸಲಿಂಗಕಾಮಿ ಜೋಡಿಯೊಂದು ಇದೇ ರೀತಿ ಮದುವೆಯಾಗಿತ್ತು. ಇದು ತೆಲಂಗಾಣದಲ್ಲಿ ಮೊದಲ ಸಲಿಂಗಕಾಮಿ ಮದುವೆಯಾಗಿದೆ. 34 ವರ್ಷದ ಅಭಯ್ ಡಾಂಗೆ ಮತ್ತು 31 ವರ್ಷದ ಸುಪ್ರಿಯೋ ಚಕ್ರವರ್ತಿ ಎಂಟು ವರ್ಷಗಳ ಹಿಂದೆ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ತಮ್ಮ ವಿವಾಹವನ್ನು ನೆರವೇರಿಸಿದರು.

ಭಾರತದ ಮೊದಲ Sologamy ಮದುವೆ

ಭಾರತದ ಮೊದಲ Sologamy ಮದುವೆ

ಗುಜರಾತ್‌ನ ವಡೋದರಾ ನಗರದ 24 ವರ್ಷದ ಕ್ಷಮಾ ಬಿಂದು ಜೂನ್ 11 ರಂದು ತನ್ನ ಸ್ವಯಂ ಮದುವೆಯನ್ನು ಘೋಷಿಸುವ ಮೂಲಕ ದೇಶಾದ್ಯಂತ ಸುದ್ದಿ ಮಾಡಿದ್ದರು. ಆದರೆ ಕ್ಷಮಾ ಬಿಂದು ಈ ಕಾರ್ಯಕ್ರಮವನ್ನು ನಿಗದಿತ ದಿನಾಂಕಕ್ಕಿಂತ ಮೂರು ದಿನಗಳ ಮೊದಲು ಜೂನ್ 08 ರಂದು ಏಕಾಂಗಿ ವಿವಾಹ (ಸ್ವಯಂವಿವಾಹ) ಮಾಡಿಕೊಂಡರು. ಕ್ಷಮಾ ಬಿಂದು ಸ್ವಯಂ ವಿವಾಹ (Sologamy) ಮಾಡಿಕೊಂಡ ಮೊದಲ ಭಾರತೀಯರು.

ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಮದುವೆ

ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಮದುವೆ

ಕ್ಷಮಾ ಬಿಂದು ಜೂನ್ 11 ರಂದು ತನ್ನನ್ನು ತಾನು ಮದುವೆಯಾಗಲು ನಿರ್ಧರಿಸಿದ್ದಳು. ಅದಕ್ಕಾಗಿಯೇ ಪಂಡಿತ್, ದೇವಸ್ಥಾನ ಸೇರಿದಂತೆ ಪಾರ್ಲರ್ ಕೂಡ ಬುಕ್ ಮಾಡಿದ್ದರು. ಆದರೆ ಅವರ ನಿರ್ಧಾರವನ್ನು ಬಿಜೆಪಿ ನಾಯಕರು ಹಾಗೂ ಹಿಂದೂ ದಾವೆದಾರರು ವಿರೋಧಿಸಿದ್ದರು. ಹಾಗಾಗಿ ನಿಗದಿತ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿ ಕ್ಷಮಾ ಬಿಂದು ವಿವಾಹವಾದರು. ಕ್ಷಮಾಳ ಮದುವೆಯ ಎಲ್ಲಾ ವಿಧಿವಿಧಾನಗಳನ್ನು ವಡೋದರದ ಗೋತ್ರಿಯಲ್ಲಿರುವ ಆಕೆಯ ಮನೆಯಲ್ಲಿ ನೆರವೇರಿಸಲಾಯಿತು. ಕ್ಷಮಾ ಜೂನ್ 11 ರಂದು ಯಾರಾದರೂ ತಮ್ಮ ಮನೆಗೆ ಬಂದು ವಿವಾದ ಸೃಷ್ಟಿಸಬಹುದೆಂದು ಬಿಂದು ಹೆದರಿದ್ದರು. ಹೀಗಾಗಿ ತಮ್ಮ ವಿಶೇಷ ದಿನ ಹಾಳಾಗಬಾರದೆಂದು ಜೂನ್ 08 ರ ಬುಧವಾರದಂದು ಮದುವೆಯಾದರು.

English summary
Two men named Abhishek Ray and Chaitanya Sharma are married in Kolkata. Wedding photos and videos have gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X