ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವಿರುದ್ಧ ತೊಡೆತಟ್ಟಲು ಕೊಲ್ಕತ್ತಕ್ಕೆ ತೆರಳಿದ ಕುಮಾರಸ್ವಾಮಿ

|
Google Oneindia Kannada News

ಕೊಲ್ಕತ್ತ, ಜನವರಿ 18: ವಿರೋಧ ಪಕ್ಷಗಳ ಮಹಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಕೊಲ್ಕತ್ತಕ್ಕೆ ತೆರಳಿದ್ದಾರೆ.

ಅವರು ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಏಕಕಾಲಕ್ಕೆ ಕೊಲ್ಕತ್ತಕ್ಕೆ ಬಂದಿಳಿದಿದ್ದು, ನಾಳೆ ಇಲ್ಲಿ ನಡೆಯುವ 'ಯುನಿಟಿ ಆಫ್ ಇಂಡಿಯಾ' ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಕೊಲ್ಕತ್ತದ ಪ್ರತಿಪಕ್ಷಗಳ ಬೃಹತ್ ಸಮಾವೇಶದಲ್ಲಿ ದೇವೇಗೌಡ ಭಾಗಿ ಕೊಲ್ಕತ್ತದ ಪ್ರತಿಪಕ್ಷಗಳ ಬೃಹತ್ ಸಮಾವೇಶದಲ್ಲಿ ದೇವೇಗೌಡ ಭಾಗಿ

ಕೊಲ್ಕತ್ತ ವಿಮಾನ ನಿಲ್ದಾಣದಲ್ಲಿ ಎದುರಾದ ಸುದ್ದಿಗಾರರೊಂದಿಗೆ ರಾಜ್ಯ ರಾಜಕಾರಣದ ಕುರಿತು ಮಾತನಾಡಿರುವ ಕುಮಾರಸ್ವಾಮಿ, ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದಿದ್ದಾರೆ.

CM Kumaraswamy reached Kolkatta to participate in Unity of India mega rally

ಸಿಎಲ್‌ಪಿ ಸಭೆಗೆ ಗೈರಾಗಿರುವ ನಾಲ್ಕು ಶಾಸಕರು ವಾಪಸ್ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಆ ನಾಲ್ಕು ಶಾಸಕರೂ ಸಹ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಜ. 19ರ ವಿರೋಧ ಪಕ್ಷಗಳ ಮಹಾ ಸಭೆ ಬಿಜೆಪಿ ಪಾಲಿನ ಮರಣ ಮೃದಂಗ: ಮಮತಾ ಜ. 19ರ ವಿರೋಧ ಪಕ್ಷಗಳ ಮಹಾ ಸಭೆ ಬಿಜೆಪಿ ಪಾಲಿನ ಮರಣ ಮೃದಂಗ: ಮಮತಾ

ನಾಳೆ ಬಿಜೆಪಿಯ ವಿರೋಧಪಕ್ಷಗಳೆಲ್ಲವೂ ಒಟ್ಟಾಗಿ ಸೇರಿ ಭಾರಿ ದೊಡ್ಡ ಮಟ್ಟದ ಯುನಿಟಿ ಆಫ್ ಇಂಡಿಯಾ ಹೆಸರಿನ ಸಮಾವೇಶವನ್ನು ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆಸಲಿದೆ. ಇದಕ್ಕೆ ಬಹುತೇಕ ಎಲ್ಲ ರಾಜ್ಯಗಳಿಂದಲೂ ನಾಯಕರು ಆಗಮಿಸಿದ್ದಾರೆ.

ಮಹಾಘಟಬಂಧನದ ವಿರಾಟರೂಪ ದರ್ಶನಕ್ಕೆ ದೀದಿ ರೆಡಿ! ಯಾರೆಲ್ಲ ಹಾಜರು? ಮಹಾಘಟಬಂಧನದ ವಿರಾಟರೂಪ ದರ್ಶನಕ್ಕೆ ದೀದಿ ರೆಡಿ! ಯಾರೆಲ್ಲ ಹಾಜರು?

ದೇವೇಗೌಡ ಅವರು ಸಹ ಕೊಲ್ಕತ್ತಕ್ಕೆ ಇಂದು ಮಧ್ಯಾಹ್ನವೇ ತೆರಳಿದ್ದು, ನಾಳೆ ಸಮಾವೇಶದಲ್ಲಿ ಅವರೂ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.

English summary
Karnataka CM Kumaraswamy today reached Kolkatta to participate in Unity of India mega rally organized by West Bengal cm Mamata Banerjee. Rally will going on tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X