ಸುವೇಂದು ಅಧಿಕಾರಿ ತಂದೆ, ಸಹೋದರನಿಗೆ ವಿಐಪಿ ಭದ್ರತೆ

ನವದೆಹಲಿ, ಮೇ 22: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ತಂದೆ ಹಾಗೂ ಸಹೋದರನಿಗೆ ಕೇಂದ್ರ ಸರ್ಕಾರ ವಿಐಪಿ ಭದ್ರತೆ ನೀಡಿದೆ.

ಕೇಂದ್ರ ಗೃಹ ಸಚಿವಾಲಯ ಅವರಿಗೆ ಕೇಂದ್ರ ರಕ್ಷಣಾ ಪಡೆಗಳಿಂದ 'ವೈ +' ಭದ್ರತೆ ನೀಡಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ಶಿಶಿರ್ ಕುಮಾರ್ ಅಧಿಕಾರಿ ಅವರು ಕಾಂತಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ದಿಬ್ಯೆಂದು ಅಧಿಕಾರಿ ರಾಜ್ಯದ ತಮ್ಲುಕ್‌ ಕ್ಷೇತ್ರದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದರಾಗಿದ್ದಾರೆ.

ಈ ಇಬ್ಬರು ಸಂಸದರು ಎದುರಿಸುತ್ತಿರುವ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಉಭಯ ನಾಯಕರಿಗೆ 'ವೈ +' ಭದ್ರತೆ ನೀಡುವಂತೆ ಶಿಫಾರಸು ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Centre Accords VIP Security Cover To Suvendu Adhikaris Father, Brother

ಸುವೇಂದು ಅಧಿಕಾರಿಯ ತಂದೆ ಸಿಸಿರ್ ಕುಮಾರ್ ಅಧಿಕಾರಿ ಮತ್ತು ಸಹೋದರ ದಿಬ್ಯೆಂದು ಅಧಿಕಾರಿಗೆ ಜೀವ ಬೆದರಿಕೆ ಇರುವ ವರದಿ ಆಧರಿಸಿ ಕೇಂದ್ರ ಗೃಹ ಸಚಿವಾಲಯವು ಹೆಚ್ಚಿನ ಭದ್ರತೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ ನಡೆದು ಮೇ 2 ರಂದು ಫಲಿತಾಂಶ ಹೊರಬಿದ್ದಿತ್ತು, ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಗದ್ದುಗೆ ಏರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+