• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Video: ಬಿಜೆಪಿ ಸಂಸದ ಅರ್ಜುನ್ ಸಿಂಗ್ ಮನೆ ಹಿಂಭಾಗದಲ್ಲಿ ಬಾಂಬ್ ಸ್ಫೋಟ

|
Google Oneindia Kannada News

ಕೋಲ್ಕತ್ತಾ, ಸೆಪ್ಟೆಂಬರ್ 14: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಭಾರತೀಯ ಜನತಾ ಪಕ್ಷದ ಸಂಸದ ಅರ್ಜುನ್ ಸಿಂಗ್ ನಿವಾಸದ ಮೊದಲ ಸ್ಫೋಟ ಸಂಭವಿಸಿದ ಒಂದೇ ವಾರದಲ್ಲಿ ಎರಡನೇ ಬಾರಿ ಬಾಂಬ್ ದಾಳಿ ನಡೆದಿದೆ. ಬೆಳಗ್ಗೆ 8: 30 ರ ಸುಮಾರಿಗೆ ಅವರ ಮನೆಯ ಹಿಂಭಾಗದಲ್ಲಿ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಂಸದ ಅರ್ಜುನ್ ಸಿಂಗ್, "ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಮತ್ತು ಪೊಲೀಸರು ತೃಣಮೂಲ ಕಾಂಗ್ರೆಸ್ ಪಕ್ಷದ ದಲ್ಲಾಳಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅಂತಹ ದಾಳಿಗಳಿಗೆ ನಾನು ಎಂದಿಗೂ ಹೆದರುವುದಿಲ್ಲ," ಎಂದಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಜಗತ್ತಾಲ್‌ನಲ್ಲಿರುವ ಸಿಂಗ್ ನಿವಾಸದಲ್ಲಿ ಬಾಂಬ್ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ವಹಿಸಿಕೊಂಡಿದೆ. ಈ ಬಾಂಬ್ ದಾಳಿಯಲ್ಲಿ ಯಾರಿಗೂ ಗಾಯವಾಗದಿದ್ದರೂ, ಸ್ಫೋಟದಿಂದ ಮನೆಯ ಕಬ್ಬಿಣದ ಗೇಟ್‌ನಲ್ಲಿ ಗುರುತುಗಳನ್ನು ಬಿಟ್ಟಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ಶಾಸಕರು ಅವರ ಮನೆಯಲ್ಲಿ ಇರಲಿಲ್ಲ. ಆದಾಗ್ಯೂ, ಅವರ ಕುಟುಂಬ ಸದಸ್ಯರು ಮನೆಯಲ್ಲೇ ಇದ್ದರು ಎಂದು ಗೊತ್ತಾಗಿದೆ.


ರಾಜ್ಯ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಮೊದಲ ದಾಳಿಗೆ ತೃಣಮೂಲ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದರೆ, ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಖರ್ ಬಂಗಾಳದಲ್ಲಿ "ಹಿಂಸಾತ್ಮಕ ಹಿಂಸಾಚಾರ" "ಕಡಿಮೆಯಾಗುವ ಲಕ್ಷಣವಿಲ್ಲ" ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರ ರಾಜ್ಯಪಾಲರು ಕಾಳಜಿ ತೋರಿದ್ದಾರೆ.

ದೀದಿ ಕ್ಷೇತ್ರದಲ್ಲಿ ಬೆಂಗಾಳಿಯೇತರರ ಬೆಂಬಲಕ್ಕಾಗಿ ಟಿಎಂಸಿ ಮಾಸ್ಟರ್‌ ಪ್ಲ್ಯಾನ್‌ದೀದಿ ಕ್ಷೇತ್ರದಲ್ಲಿ ಬೆಂಗಾಳಿಯೇತರರ ಬೆಂಬಲಕ್ಕಾಗಿ ಟಿಎಂಸಿ ಮಾಸ್ಟರ್‌ ಪ್ಲ್ಯಾನ್‌

"ಸಂಸದರು ಮತ್ತು ಶಾಸಕರ ಮನೆಗಳನ್ನು ಭದ್ರಪಡಿಸದಿದ್ದರೆ, ಬಂಗಾಳದಲ್ಲಿ ಸಾಮಾನ್ಯ ಜನರ ಸ್ಥಿತಿಯನ್ನು ಯಾರು ಬೇಕಾದರೂ ಅರ್ಥಮಾಡಿಕೊಳ್ಳಬಹುದು. ಈ ಘಟನೆಯು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದಲ್ಲಿ ಗೂಂಡರಾಜ್ ಮುಂದುವರಿದಿದೆ ಎಂದು ತೋರಿಸುತ್ತದೆ, "ಎಂದು ಬಿಜೆಪಿ ಬಂಗಾಳ ಘಟಕದ ಉಪಾಧ್ಯಕ್ಷ ರಿತೇಶ್ ತಿವಾರಿ ಹೇಳಿದರು.

ಒಂದು ಕಾಲದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ ಟ್ವೀಟ್ ಮಾಡಿದ್ದಾರೆ. "ಪಶ್ಚಿಮ ಬಂಗಾಳದ ಸಂಸದ ಅರ್ಜುನ್ ಸಿಂಗ್ ನಿವಾಸದ ಬಳಿ ಬಾಂಬ್‌ಗಳನ್ನು ಎಸೆದಿರುವುದು ರಾಜ್ಯ ಸರ್ಕಾರದಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಿಲ್ಲ ಎಂಬ ನಮ್ಮ ಆರೋಪವನ್ನು ಮಾನ್ಯ ಮಾಡುತ್ತದೆ," ಎಂದು ಬರೆದುಕೊಂಡಿದ್ದಾರೆ.

English summary
Bomb attack on BJP MP Arjun Singh's Residence in kolkata again after a week, bomb thrown at backside.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X