ದೀದಿ ರಾಜ್ಯದಲ್ಲಿ ಮತ್ತೋರ್ವ ಬಿಜೆಪಿ ಕಾರ್ಯಕರ್ತನ ಹತ್ಯೆ
ಕೋಲ್ಕತ್ತ, ಮೇ 27: ಲೋಕಸಭೆ ಚುನಾವಣೆಯಲ್ಲಿ ಟಿಎಂಸಿಗೆ ಬಿಜೆಪಿ ಭರ್ಜರಿ ಶಾಕ್ ನೀಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ಮುಂದುವರೆದಿದೆ.
ಅಮೇಥಿ: ಸ್ಮೃತಿ ಇರಾನಿ ಬೆಂಬಲಿಗ ಸುರೇಂದ್ರ ಸಿಂಗ್ ಹತ್ಯೆ
ಪಶ್ಚಿಮ ಬಂಗಾಳ ರಾಜ್ಯದ 24 ಉತ್ತರ ಪರಗಣ ಜಿಲ್ಲೆಯ ಭಟಾಪರ ಪ್ರದೇಶದಲ್ಲಿ 36 ವರ್ಷದ ಬಿಜೆಪಿ ಕಾರ್ಯಕರ್ತ ಚಂದನ್ ಸಾಹು ಕೊಲೆಯಾಗಿದ್ದಾರೆ. ಭಾನುವಾರ ತಡರಾತ್ರಿ ಮೋಟಾರ್ ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಚಂದನ್ ಸಾಹುವನ್ನು ಕೊಲೆ ಮಾಡಿದ್ದಾರೆ.
ಕೆಲಸ ಮುಗಿಸಿ ಮನೆಗೆ ಬರುವಾಗ ಈ ದುಷ್ಕೃತ್ಯ ನಡೆದಿದೆ. ಲೋಕಸಭಾ ಚುನಾವಣಾ ಫಲಿತಾಂಶ ಬಳಿಕ ರಾಜ್ಯದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ರಾಜಕೀಯ ಕಿತ್ತಾಟ ತಾರಕಕ್ಕೇರಿದೆ. ಈಗಾಗಲೇ ಹಿಂಸಾಚಾರಕ್ಕೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ರಾಜ್ಯಕೀಯ ಹಿಂಸಾಚಾರಕ್ಕೆ ಬಲಿಯಾದವರಲ್ಲಿ ಚಂದನ್ ಸಾಹು ಎರಡನೆಯವರಾಗಿದ್ದಾರೆ.
ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಮೃತಿ ಇರಾನಿ ಆಪ್ತನ ಕೊಲೆ ಬಳಿಕ ಈ ರಾಜಕೀಯ ಹಿಂಸಾಚಾರ ಬಿಜೆಪಿಯ ಧೃತಿಗೆಡಿಸಿದೆ.