• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವವರೆಗೂ ಬಿಜೆಪಿಗೆ ವಿಶ್ರಾಂತಿ ಇಲ್ಲ: ಅಮಿತ್ ಶಾ

|

ಕೋಲ್ಕತ್ತಾ,ಫೆಬ್ರವರಿ 12: ಪಶ್ಚಿಮ ಬಂಗಾಳದಲ್ಲಿ ನಮ್ಮ ಸರ್ಕಾರವನ್ನು ರಚಿಸುವವರೆಗೂ ಬಿಜೆಪಿಗೆ ವಿಶ್ರಾಂತಿ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬಿಜೆಪಿ ಪಶ್ಚಿಮ ಬಂಗಾಳದಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.ಮಮತಾ ಬ್ಯಾನರ್ಜಿ ಸರ್ಕಾರವನ್ನು ಅಧಿಕಾರ ತೊರೆಯುವಂತೆ ಮಾಡುವುದು ಹಾಗೂ ಬಿಜೆಪಿಯನ್ನು ಗಟ್ಟಿಕೊಳಿಸುವುದಷ್ಟೇ ನಮ್ಮ ಹೋರಾಟವಲ್ಲ, ಪಶ್ಚಿಮ ಬಂಗಾಳವನ್ನು ಬಂಗಾರದ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಚುನಾವಣೆ ನಡೆಯುವ ರಾಜ್ಯಗಳಲ್ಲಿ ಕೇಂದ್ರ ಪೊಲೀಸ್‌ ಪಡೆಯದ್ದು ಪ್ರಮುಖ ಪಾತ್ರ

ಕೇಂದ್ರ ಸರ್ಕಾರದ ಸಾಧನೆಗಳು,ಪಕ್ಷದ ಸಂದೇಶಗಳನ್ನು ಪಶ್ಚಿಮ ಬಂಗಾಳದ 10 ಕೋಟಿ ಜನತೆಯ ಪೈಕಿ 2 ಕೋಟಿ ಮಂದಿಗೆ ತಲುಪಿಸುವ ಗುರಿಯನ್ನು ಅವರು ಬಿಜೆಪಿ ಸಾಮಾಜಿಕ ಮಾಧ್ಯಮ ಕಾರ್ಯಕರ್ತರಿಗೆ ನಿಗದಿಪಡಿಸಿದ್ದಾರೆ.

ಹೀಗೆ ಮಾಡುವುದರಿಂದ ಕೇಂದ್ರ ಸರ್ಕಾರದ ಸಾಧನೆಗಳು,ಪಕ್ಷದ ಸಂದೇಶಗಳು ಸಾಮಾಜಿಕ ಮಾಧ್ಯಮಗಳ ಮೂಲಕ ರಾಜ್ಯದ ಬಹುತೇಕ ಕುಟುಂಬಗಳನ್ನು ತಲುಪಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪೂರ್ವ ಭಾರತದ ವೈಭವವನ್ನು ಮರಳಿ ತರುವುದು,ಅಕ್ರಮ ವಲಸೆ ಸಮಸ್ಯೆ ನಿರ್ಮೂಲನೆ ಮಾಡುವ ಮೂಲಕ ದೇಶದ ಗಡಿಗಳನ್ನು ಭದ್ರಪಡಿಸುವುದು,ಪೌರತ್ವ ತಿದ್ದುಪಡಿ ಮೂಲಕ ನಿರಾಶ್ರಿತರಿಗೆ ಪೌರತ್ವ ನೀಡುವುದೂ ನಮ್ಮ ಹೋರಾಟವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸವಿದೆ. ಏಪ್ರಿಲ್-ಮೇನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಮತದಾರನೂ ಮುಕ್ತವಾಗಿ ಮತ ಚಲಾಯಿಸಬಹುದು.ಇದನ್ನು ಖಾತರಿಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

English summary
Union Home Minister Amit Shah on Thursday said that the BJP will not rest before forming the government in West Bengal with a two-thirds majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X