ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ: 2ನೇ ಹಂತದಲ್ಲೂ ಎಲ್ಲಾ 30 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದ ವಿಜಯವರ್ಗೀಯ

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 2: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯವಾಗಿದೆ. ಎರಡನೇ ಹಂತದಲ್ಲೂ ಎಲ್ಲಾ 30 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಕೈಲಾಶ್ ವಿಜಯವರ್ಗೀಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಮತಾ ಬ್ಯಾನರ್ಜಿ ಜಾಣೆ ಆದರೆ ಅಜ್ಞಾನದಿಂದ ವರ್ತಿಸುತ್ತಿದ್ದಾರೆ, ಎಲ್ಲೆಲ್ಲಿ ಮತದಾನ ನಡೆಯುತ್ತಿದೆಯೋ ಅಲ್ಲಿ ನಾಯಕರು ಪ್ರಚಾರಕ್ಕೆ ಹೋಗಲು ಸಾಧ್ಯವಿಲ್ಲ. ಬೇಕಿದ್ದರೆ ಬೇರೆ ಸ್ಥಳಗಳಿಗೆ ಹೋಗಬಹುದು ಎಂದು ದೂರಿದರು.

ಚುನಾವಣಾ ಆಯೋಗಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆಚುನಾವಣಾ ಆಯೋಗಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಎರಡನೇ ಹಂತದಲ್ಲಿ 30 ಸ್ಥಾನಗಳಿಗೆ ಏಪ್ರಿಲ್ 1 ರಂದು ಮತದಾನ ನಡೆದಿತ್ತು. ಕೇಂದ್ರ ಪಡೆಗಳು ಅಮಿತ್ ಶಾ ಸೂಚನೆಯಂತೆ ಕೆಲಸ ನಿರ್ವಹಿಸುತ್ತಿವೆ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬ್ಯಾನರ್ಜಿ ಆರೋಪಗಳಿಗೆ ಪ್ರತಿಕ್ರಿಯಿಸಿರುವ ವಿಜಯವರ್ಗೀಯ ಇದು ಸೋಲಿನ ಸಂಕೇತ ಎಂದು ನಾನು ಭಾವಿಸುತ್ತೇನೆ.

Kailash

ಜನರು ಅವರೊಂದಿಗಿಲ್ಲ ಎಂಬ ಸತ್ಯವನ್ನು ಮಮತಾ ಅರಿತಿದ್ದಾರೆ, ಈ ಮತದಾನವು ಮಮತಾ ಹಾಗೂ ಜನರ ನಡುವೆ ಆಗಿದೆ. ಜನರು ಅವರೊಂದಿಗಿಲ್ಲ, ಅವರು ಎಲ್ಲಿ ಹೋದರೂ ಜನರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದರು.

ಕಳೆದ ಐವತ್ತು ವರ್ಷಗಳ ಪಶ್ಚಿಮ ಬಂಗಾಳ ಇತಿಹಾಸದಲ್ಲೇ ಇಷ್ಟೊಂದು ಶಾಂತಿಯುತವಾಗಿ ಮತದಾನ ನಡೆದಿಲ್ಲ, 90 ಪ್ರತಿಶತದಷ್ಟು ಮತಗಟ್ಟೆಗಳಲ್ಲಿ ಜನರು ಯಾವುದೇ ಭಯವಿಲ್ಲದೆ ಮತ ಚಲಾಯಿಸಿದ್ದಾರೆ. ಕೆಲವೊಂದು ಸಣ್ಣಪುಟ್ಟ ಘಟನೆಗಳು ನಡೆದಿವೆ.

ಆದರೆ ಪ್ರಮುಖ ವಿಷಯ ಏನೆಂದರೆ ಹಿಂದೆಲ್ಲಾ ಗೂಂಡಾಗಳು ಬೂತ್ ಅನ್ನು ವಶಪಡಿಸಿಕೊಳ್ಳುತ್ತಿದ್ದರು. ಅಲ್ಲದೆ ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡುತ್ತಿರಲಿಲ್ಲ, ಆದರೆ ಅದು ಈಗ ಕೊನೆಗೊಂಡಿದೆ ಎಂದು ಹೇಳಿದರು.

English summary
west bengal assembly election 2021, west bengal election, BJP Will Win All 30 Seats In Phase 2 of WB Polls As Well: Kailash Vijayvargiya,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X