ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಮತಾ ಬ್ಯಾನರ್ಜಿ 66 ವರ್ಷದ 'ಆಂಟಿ' ಎಂದ ಸುವೇಂದು ಅಧಿಕಾರಿ!

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 1: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಒಂದು ಕಾಲದ ವಿಶ್ವಾಸಾರ್ಹ ಸಹಾಯಕ ಸುವೇಂದು ಅಧಿಕಾರಿ ಇಂದು ಅದೇ ಮಮತಾ ಬ್ಯಾನರ್ಜಿ ವಿರುದ್ಧ ಅಪಹಾಸ್ಯ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ಅವರನ್ನು ಆಂಟಿ ಎಂದು ಸಂಬೋಧಿಸಿದ ಸುವೇಂಧು ಅಧಿಕಾರಿ, ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ದೀದಿ ಸೋಲಿನ ಬಗ್ಗೆ ಎಚ್ಚರಿಕೆ ನೀಡಿದರು. ಮಮತಾ ವಿರುದ್ಧ ಕೆಲಸ ಮಾಡಿದವರನ್ನು ರಕ್ಷಿಸುವುದಕ್ಕಾಗಿ ಮೇ 2ರ ಚುನಾವಣಾ ಫಲಿತಾಂಶದ ಬಳಿಕವೂ ಕೇಂದ್ರದ ರಕ್ಷಣಾ ಪಡೆಗಳು ರಾಜ್ಯದಲ್ಲಿ ಉಳಿಯಬೇಕಿದೆ ಎಂದು ಸುವೇಂದು ಅಧಿಕಾರಿ ತಿಳಿಸಿದರು.

ಬಂಗಾಳ ಚುನಾವಣೆ: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ, ಅಹಿತಕರ ವಾತಾವರಣಬಂಗಾಳ ಚುನಾವಣೆ: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ, ಅಹಿತಕರ ವಾತಾವರಣ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಈ ಹಂತದಲ್ಲಿ ಗೂಂಡಾಗಿರಿ ಮಾಡದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸುವೇಂದು ಅಧಿಕಾರಿ ಸಲಹೆ ನೀಡಿದರು ಎಂದು ಎಎನ್ಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

BJPs Suvendu Adhikari Called Mamata Banerjee As 66-Year-Old Aunty

"ಅವಳು 66 ವರ್ಷದ ಆಂಟಿ":

"ರಾಜ್ಯದ ಮುಖ್ಯಮಂತ್ರಿ ಆಗಿರುವ ಅವಳು ಸ್ವಲ್ಪ ಸಂಯಮವನ್ನು ತೋರಿಸಬೇಕು. ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಹೊಲಸು ಭಾಷೆಯನ್ನು ಬಳಸುತ್ತಾರೆ. ಅವಳು 66 ವರ್ಷದ ಆಂಟಿ" ಎಂದು ನಂದಿಗ್ರಾಮ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂಧು ಅಧಿಕಾರಿ ಹೇಳಿದ್ದಾರೆ.

ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ರೀತಿಯಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿ ಮರು ಮತದಾನ ನಡೆಸುವ ಪ್ರಶ್ನೆಯೇ ಇಲ್ಲ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ 14 ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ಕೇಂದ್ರ ಭದ್ರತಾ ಪಡೆ, 76 ಬೂತ್ ಮಟ್ಟದಲ್ಲಿ ಕ್ಷಿಪ್ರಕಾರ್ಯ ಪಡೆ ಸೇರಿದಂತೆ ಹಲವು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲವೂ ಶಾಂತಿ ರೀತಿಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಸುವೇಂದು ಅಧಿಕಾರಿ ತಿಳಿಸಿದ್ದಾರೆ.

ಎರಡನೇ ಹಂತದ ಮತದಾನ ಪ್ರಕ್ರಿಯೆ:

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 1ರಂದು ಎರಡನೇ ಹಂತದಲ್ಲಿ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ದಕ್ಷಿಣ ಪರಗಣ, ಬಂಕುರಾ, ಪಶ್ಚಿಮ ಮೇದಿನಿಪುರ್, ಪೂರ್ಬಾ ಮೇದಿನಿಪುರ್ ಜಿಲ್ಲೆಗಳಲ್ಲಿ ಮತದಾನ ನಡೆಸಲಾಗುತ್ತಿದೆ. ಉಳಿದಂತೆ ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.

Recommended Video

ಕುಲದೀಪ್‌, ಚಾಹಲ್‌ ವಿಶ್ವಕಪ್‌ ಎಂಟ್ರಿಗೆ ಐಪಿಎಲ್‌ ಮ್ಯಾಚ್‌ ನಿರ್ಣಾಯಕವಾಗುತ್ತಾ? | Oneindia

ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

English summary
BJP's Suvendu Adhikari Called Mamata Banerjee As 66-Year-Old Aunty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X