• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಲ್ಕತ್ತಾದಲ್ಲಿ ಅಮಿತ್ ಶಾ ರ‍್ಯಾಲಿ : ಮಮತಾ ಬ್ಯಾನರ್ಜಿ ಮಾಡಿಕೊಂಡ ಸಿದ್ದತೆ

|

ಕೊಲ್ಕತ್ತಾ, ಆಗಸ್ಟ್ 10: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿಗೆ ಜಿದ್ದಿನ ಪ್ರಶ್ನೆಯಾಗಿರುವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರ‍್ಯಾಲಿ ವಿಫಲಗೊಳಿಸಲು ಮಮತಾ ಬ್ಯಾನರ್ಜಿ ಸರಕಾರ ಠೊಂಕ ಕಟ್ಟಿನಿಂತಿದೆ.

ಕೊಲ್ಕತ್ತಾ ನಗರದ ಹೃದಯ ಭಾಗದಲ್ಲಿರುವ ಮಿಯಾ ರೋಡ್ ಮೈದಾನದಲ್ಲಿ ಅಮಿತ್ ಶಾ ಅವರ ರ‍್ಯಾಲಿ ಶನಿವಾರ (ಆ 11) ಹನ್ನೆರಡು ಗಂಟೆಗೆ ಆರಂಭವಾಗಲಿದೆ. ರ‍್ಯಾಲಿ ವಿರುದ್ದ 'ಬಿಜೆಪಿ ಗೋಬ್ಯಾಕ್' ಎನ್ನುವ ಪೋಸ್ಟರ್ ವಾರ್ ಅನ್ನು ಟಿಎಂಸಿ ಆರಂಭಿಸಿದೆ.

ರಾಜ್ಯಸಭೆ ಸೋಲು: ಅಮಿತ್ ಶಾ ಮುಂದೆ ರಾಹುಲ್ ಕಲಿಯಬೇಕಾದ್ದು ಬೆಟ್ಟದಷ್ಟು

ಮೈದಾನದ ಸುತ್ತಮುತ್ತ ಮತ್ತು ಮೈದಾನಕ್ಕೆ ಹೋಗುವ ದಾರಿಯುದ್ದಕ್ಕೂ, "ಬಿಜೆಪಿ ಗೋಬ್ಯಾಕ್' , " Anti ಬೆಂಗಾಲ್ ಬಿಜೆಪಿ ಗೋಬ್ಯಾಕ್ " ಎನ್ನುವ ಪೋಸ್ಟರುಗಳು ನಗರದಲ್ಲೆಡೆ ರಾರಾಜಿಸುತ್ತಿದೆ. ಜೊತೆಗೆ, ಟಿಎಂಸಿಯ ಧ್ವಜಗಳೂ ಹಾರಾಡುತ್ತಿವೆ.

ಇತ್ತೀಚಿನ ದಿನಗಳಲ್ಲಿ ಕಮ್ಯೂನಿಸ್ಟರನ್ನು ಹಿಂದಿಕ್ಕಿ, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಶಕ್ತಿಯುತವಾಗಿ ಬೆಳೆಯುತ್ತಿರುವುದು ಮಮತಾ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲೂ ಇದು ಸಾಬೀತಾಗಿ ಹೋಗಿದೆ.

ಲೋಕಸಭೆ ಚುನಾವಣೆ : ದಕ್ಷಿಣದ ರಾಜ್ಯಗಳಿಗೆ ಬೆಂಗಳೂರಲ್ಲಿ ಅಮಿತ್ ಶಾ ಕಚೇರಿ!

ಆಗಸ್ಟ್ ಹದಿನಾಲ್ಕರಂದು ಮಮತಾ ಬ್ಯಾನರ್ಜಿ ಈ ಮೈದಾನದ ಸಮೀಪದ ಇನ್ನೊಂದು ಗ್ರೌಂಡಿನಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ, ಅದಕ್ಕಾಗಿ ಅಮಿತ್ ಶಾ ರ‍್ಯಾಲಿಯ ವೇದಿಕೆಯನ್ನು ಧರ್ಮತಲ ರಸ್ತೆಯತ್ತ ತಿರುಗಿಸಲಾಗಿದೆ.

ಅಮಿತ್ ಶಾ ರ‍್ಯಾಲಿಯ ವಿರುದ್ದ ಟಿಎಂಸಿ ಈ ರೀತಿಯ ಪೋಸ್ಟರ್ ವಾರ್ ನಡೆಸುತ್ತಿರುವುದು ಇದು ಮೂರನೇ ಬಾರಿ. ಮಮತಾ ಸರಕಾರ ನನ್ನನ್ನು ಬಂಧಿಸಿದರೂ, ನಾನು ಕೊಲ್ಕತ್ತಾಗೆ ಹೋಗುವುದು ಶತಸಿದ್ದ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷರು ಈಗಾಗಲೇ ಹೇಳಿಕೆ ನೀಡಿದ್ದಾರೆ.

ಪಶ್ಚಿಮ ಮಿಡ್ನಾಪುರದಲ್ಲಿ ನಡೆದ ಪ್ರಧಾನಿ ಮೋದಿಯ ರ‍್ಯಾಲಿಯ ವೇಳೆಯೂ, ಟಿಎಂಸಿ ಈ ರೀತಿಯ ಪೋಸ್ಟರ್ ವಾರ್ ನಡೆಸಿತ್ತು. ಮಮತಾ ಬ್ಯಾನರ್ಜಿ ಎಂದರೆ ಅಭಿವೃದ್ದಿಯ ಸಂಕೇತ.. ಹೀಗೆ ಬಿಜೆಪಿ ಸಮಾವೇಶದ ಸುತ್ತಮುತ್ತ ಟಿಎಂಸಿ ಪೋಸ್ಟರುಗಳು ರಾರಾಜಿಸುತ್ತಿವೆ.

English summary
Ahead of BJP National President Amit Shah's rally in Kolkata on Saturday, August 11th, the TMC has covered the entire venue with posters that have "Anti-Bengal BJP Go Back" written on them alongwith party flags and Mamata Banerjee's photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X