ಬಿಜೆಪಿ ಶಾಸಕನ ಕೊಲೆ, ಮನೆ ಮುಂದೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ!
ಕೊಲ್ಕತ್ತಾ, ಜುಲೈ 13: ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ದೇಬೇಂದ್ರ ನಾಥ್ ರೇ ತಮ್ಮ ಮನೆ ಮುಂದೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವಂತೆ ಶವ ಪತ್ತೆಯಾಗಿದೆ.
Recommended Video
ಉತ್ತರ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಹೇಮತಾಬಾದ್‌ನ ಬೊಂಡೋಲ್‌ನಲ್ಲಿರುವ ಮನೆಯ ಬಳಿ ಸೋಮವಾರ ಬೆಳಗ್ಗೆ ಬಿಜೆಪಿ ಶಾಸಕ ಶವವಾಗಿ ಪತ್ತೆಯಾಗಿದ್ದಾರೆ.
ನೇಣು ಬಿಗಿದುಕೊಂಡಿರುವುದರಿಂದ ಇದು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಕುಟುಂಬಸ್ಥರು ಮತ್ತು ಸ್ಥಳಿಯರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಯಾರೂ ಕೊಲೆ ಮಾಡಿ, ನೇಣು ಹಾಕಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯದವರೆಗೂ ಯಾರನ್ನು ಬಂಧಿಸಿಲ್ಲ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ''ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡ ದೇಬೇಂದ್ರ ನಾಥ್ ರೇ ಅವರನ್ನು ಹತ್ಯೆಗೈದಿರುವುದು ಅತ್ಯಂತ ಆಘಾತಕಾರಿ, ಶೋಚನೀಯ'' ಎಂದಿದ್ದಾರೆ.
ಬಿಜೆಪಿ ಶಾಸಕನ ಈ ಸಾವಿನ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಪ್ರತಿಕ್ರಿಯಿಸಿದ್ದು, ''ಮಮತಾ ಬ್ಯಾನರ್ಜಿಯ ಗೂಂಡಾರಾಜ್ಯದಲ್ಲಿ ಮತ್ತೊಂದು ಕ್ರೂರ ಕೊಲೆ'' ಎಂದು ಟೀಕಿಸಿದ್ದಾರೆ.
ಅಂದ್ಹಾಗೆ, ದೇಬೇಂದ್ರ ನಾಥ್ ರೇ ಅವರು 2016 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಪಕ್ಷದಿಂದ ಟಿಕೆಟ್ ಪಡೆದು ಹೆಮ್ತಾಬಾದ್ ವಿಧಾನಸಭಾ ಕ್ಷೇತ್ರದಲ್ಲಿಸ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ 2019ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಿ ಗೆದ್ದಿದ್ದರು.












Click it and Unblock the Notifications