ಕರ್ನಾಟಕದಲ್ಲಿ ಬಿಜೆಪಿಗೆ 0 ಸ್ಥಾನ! ಮಮತಾ ಬ್ಯಾನರ್ಜಿ ಎಗ್ಸಿಟ್ ಪೋಲ್!

Recommended Video

      #Exit Poll 2019: ಕರ್ನಾಟಕ ಬಿಜೆಪಿ ಎಷ್ಟು ಸ್ಥಾನ ಗೆಲ್ಲತ್ತೆ ಎಂದ ಮಮತಾ | Oneindia Kannada

      ಕೋಲ್ಕತ್ತಾ, ಮೇ 17: "ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಬಿಜೆಪಿ ಒಂದೂ ಸ್ಥಾನವನ್ನೂ ಗೆಲ್ಲುವುದಿಲ್ಲ" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

      ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

      ಪಶ್ಚಿಮ ಬಂಗಾಳದಲ್ಲಿ ಬಹಿರಂಗ ಪ್ರಚಾರಕ್ಕೆ ಚುನಾವಣಾ ಆಯೋಗದ ಆದೇಶದ ಮೇರೆಗೆ ಒಂದು ದಿನ ಮುಂಚೆಯೇ ತೆರೆಬಿದ್ದಿದ್ದು, ಕೊನೆಯ ಹಂತದ ಪ್ರಚಾರದ ಸಮಯದಲ್ಲಿ ಬ್ಯಾನರ್ಜಿ ಮಾತನಾಡುತ್ತಿದ್ದರು.

      ತಮ್ಮದೇ ಒಂದು ಚುನಾವಣೋತ್ತರ ಸಮೀಕ್ಷೆಯನ್ನು ಹೇಳಿದ ಮಮತಾ ಬ್ಯಾನರ್ಜಿ, ಬಿಜೆಪಿ ಕಳೆದ ಬಾರಿ ಗೆದ್ದಿದ್ದ ಸ್ಥಾನಗಳಲ್ಲಿ 200 ಸ್ಥಾನಗಳಲ್ಲಿ ಈ ಬಾರಿ ಸೋಲು ಕಾಣಲಿದೆ ಎಂದಿದ್ದರು. ಅಷ್ಟೇ ಅಲ್ಲ, ಯಾವ್ಯಾವ ರಾಜ್ಯದಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ ಎಮಬ ಬಗ್ಗೆಯೂ ಪಟ್ಟಿ ನೀಡಿದ್ದರು.

      300 ರಲ್ಲಿ 200 ಕ್ಷೇತ್ರಗಳಲ್ಲಿ ಸೋಲು!

      300 ರಲ್ಲಿ 200 ಕ್ಷೇತ್ರಗಳಲ್ಲಿ ಸೋಲು!

      "ನನ್ನ ಎಗ್ಸಿಟ್ ಪೋಲ್ ಇಲ್ಲಿದೆ ಕೇಳಿ... ಬಿಜೆಪಿ ಸುಮಾರು 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಪಟ್ಟಿಯನ್ನೇ ನೀಡಿದೆ. ಆದರೆ ಅದು ನಿರೀಕ್ಷೆ ಮಾಡಿರುವುದಕ್ಕಿಂತ ಸುಮಾರು 200 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸೋಲು ಕಾಣಲಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

      ಕರ್ನಾಟಕ, ಆಂಧ್ರದಲ್ಲಿ ಸೊನ್ನೆ!

      ಕರ್ನಾಟಕ, ಆಂಧ್ರದಲ್ಲಿ ಸೊನ್ನೆ!

      ಆಂಧ್ರ ಪ್ರದೇಶ-0, ಕರ್ನಾಟಕ -0, ತಮಿಳುನಾಡು-0, ಮಹಾರಾಷ್ಟ್ರ-20... ಹೀಗೇ 200 ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳಲಿದೆ. ಬಿಜೆಪಿಯ ಗೂಂಡಾ ಮನಸ್ಥಿತಿಗೆ ಜನ ಹೀಗೆ ಉತ್ತರ ನೀಡಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.

      ಪಶ್ಚಿಮ ಬಂಗಾಳದ ಗಲಭೆ

      ಪಶ್ಚಿಮ ಬಂಗಾಳದ ಗಲಭೆ

      ಮೇ 14 ರಂದು ಸಂಜೆ ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ರೋಡ್ ಶೋ ನಂತರ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿ, ಹಿಂಸಾರೂಪಕ್ಕೆ ತಿರುಗಿತ್ತು. ಇದರಿಂದಾಗಿ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ಒಂದು ದಿನ ಮುಂಚಿತವಾಗಿಯೇ ಬಹಿರಂಗ ಪ್ರಚಾರ ಮುಗಿಸುವಂತೆ ಆದೇಶ ನೀಡಿತ್ತು. ಈ ಎಲ್ಲಾ ಘಟನೆಗಳೂ ಬಿಜೆಪಿ ಕುರಿತು ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿವೆ ಎಂದು ಬ್ಯಾನರ್ಜಿ ಹೇಳಿದರು.

      ವಿಪಕ್ಷಗಳಿಗೆ ಋಣಿ

      ವಿಪಕ್ಷಗಳಿಗೆ ಋಣಿ

      ಚುನಾವಣಾ ಆಯೋಗದ ಆದೇಶದ ವಿರುದ್ಧ ದನಿ ಎತ್ತಿ ತಮ್ಮೊಂದಿಗೆ ನಿಂತ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ತೆಲುಗು ದೇಶಂ ಪಕ್ಷದ ಮುಖಂಡ ಎನ್ ಚಂದ್ರಬಾಬು ನಾಯ್ಡು ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಾನು ಋಣಿ ಎಂದು ಬ್ಯಾನರ್ಜಿ ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+