ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಕತ್ತಾದಲ್ಲಿ ಕೊರೊನಾ ರೋಗಿಗಳ ಸಂಬಂಧಿಕರಿಗೆ ಖುಷಿಯ ವಿಚಾರ

|
Google Oneindia Kannada News

ಕೊಲ್ಕತ್ತಾ, ಏಪ್ರಿಲ್ 29: ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟರೆ ಕೂಡಲೇ ಅವರನ್ನು ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ಗೆ ಸ್ಥಳಾಂತರಿಸಲಾಗುತ್ತೆ. ಅಲ್ಲಿಂದ ಅವರ ಸಂಬಂಧಿಕರ ಜೊತೆ ಯಾವುದೇ ರೀತಿ ಸಂಪರ್ಕವಿರುವುದಿಲ್ಲ.

ಸೋಂಕಿತರು ಹೇಗಿದ್ದಾರೆ, ಅವರ ಆರೋಗ್ಯ ಹೇಗಿದೆ ಎಂದು ತಿಳಿಯಲು ಅವಕಾಶ ಕಡಿಮೆ. ಈ ಮಧ್ಯೆ ಐಸೋಲೇಶನ್ ವಾರ್ಡ್‌ಗಳಿಗೆ ವೈದ್ಯಕೀಯ ಸಿಬ್ಬಂದಿ ಕೂಡ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಆದಾದ ಬಳಿಕ, ಮೊಬೈಲ್ ಸೌಲಭ್ಯವೂ ಇಲ್ಲ.

ಈ 6 ಮಹಾನಗರಗಳಲ್ಲಿ ಕೊರೊನಾ ನಿಯಂತ್ರಿಸಿದರೆ ಭಾರತ ಗೆದ್ದಂತೆ!ಈ 6 ಮಹಾನಗರಗಳಲ್ಲಿ ಕೊರೊನಾ ನಿಯಂತ್ರಿಸಿದರೆ ಭಾರತ ಗೆದ್ದಂತೆ!

ಇದೀಗ, ಕೊಲ್ಕತ್ತಾದ ಎಎಂಆರ್ಐ ಆಸ್ಪತ್ರೆಯಲ್ಲಿ 'ವರ್ಚುವಲ್ ವಿಸಿಟಿಂಗ್ ಅವರ್ಸ್' ಎಂಬ ಹೊಸ ಪರಿಕಲ್ಪನೆ ಆರಂಭಿಸಲಾಗಿದೆ. ವರ್ಚುವಲ್ ವಿಸಿಟಿಂಗ್ ಅವರ್ಸ್ ಅಡಿಯಲ್ಲಿ ಐಪ್ಯಾಡ್ ಮೂಲಕ ಕೊರೊನಾ ಸೋಂಕಿತ ರೋಗಿ ತಮ್ಮ ಕುಟುಂಬದ ಜೊತೆ ವಿಡಿಯೋ ಕಾಲ್ ಮಾಡಬಹುದು.

AMRI Hospital Introduces Visiting Hours For COVID-19 Patients

''ಕೊವಿಡ್ ವಾರ್ಡ್‌ಗಳ ಒಳಗೆ ಫೋನ್‌ಗಳನ್ನು ತೆಗೆದುಕೊಂಡು ಹೋಗದಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಆದ್ದರಿಂದ ನಾವು ಇದನ್ನು ಪ್ರಾರಂಭಿಸಿದ್ದೇವೆ. ರೋಗಿಗಳು ತಮ್ಮ ಕುಟುಂಬದೊಂದಿಗೆ ಐಪ್ಯಾಡ್ ಮೂಲಕ ಸಂಪರ್ಕದಲ್ಲಿರಬಹುದು'' ಎಂದು ಆಸ್ಪತ್ರೆಯ ಸಿಇಒ ತಿಳಿಸಿದ್ದಾರೆ.

ಕೊಲ್ಕತ್ತಾದ ಖ್ಯಾತ ಆಸ್ಪತ್ರೆಗಳಲ್ಲಿ ಒಂದಾಗಿರುವ ಎಎಂಆರ್ಐ ಆಸ್ಪತ್ರೆ ಮಾರ್ಚ್ 23 ರಂದು ಕೊವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ಅಂದ್ಹಾಗೆ, ಪಶ್ಚಿಮ ಬಂಗಾಳದಲ್ಲಿ ಈವರೆಗೂ 725 ಜನರಿಗೆ ಕೊರೊನಾ ಸೋಂಕು ತಗುಲಿದೆ. 22 ಜನರು ಸಾವನ್ನಪ್ಪಿದ್ದಾರೆ. ಕೊಲ್ಕತ್ತಾ ನಗರದಲ್ಲಿ 184 ಕೊವಿಡ್ ಪ್ರಕರಣಗಳು ವರದಿಯಾಗಿದೆ.

English summary
AMRI hospital, Salt Lake-a dedicated COVID19 hospital, has introduced 'Virtual Visiting Hours' for patients there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X