Get Updates
Get notified of breaking news, exclusive insights, and must-see stories!

ಟಿಎಂಸಿ ಟೀ ಶರ್ಟ್‌ನಲ್ಲಿ ಭಾರತದ ದೊಡ್ಡ ಪಪ್ಪು ಅಮಿತ್‌ ಶಾ ಎಂಬ ಕಾರ್ಟೂನ್‌

ಪಶ್ಚಿಮ ಬಂಗಾಳ, ಸೆಪ್ಟೆಂಬರ್‌ 09: ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತನ್ನ ರಾಜಕೀಯ ಎದುರಾಳಿ ಬಿಜೆಪಿ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಹಾಸ್ಯ ಮಾಡುವಂತೆ ಭಾರತದ ದೊಡ್ಡ ಪಪ್ಪು ಎಂಬ ಟೀ-ಶರ್ಟ್ ಅನ್ನು ವಿನ್ಯಾಸಗೊಳಿಸಿದೆ.

ಭಾರತದ ಅತಿದೊಡ್ಡ ಪಪ್ಪು ಎಂಬ ಶೀರ್ಷಿಕೆಯೊಂದಿಗೆ ಅಮಿತ್‌ ಶಾ ಅವರ ಮುಖದ ಕಾರ್ಟೂನ್ ಹೊಂದಿರುವ ಬಿಳಿ, ಕಪ್ಪು ಮತ್ತು ಹಳದಿ ಬಣ್ಣಗಳ ಟೀ-ಶರ್ಟ್ ಹಂಚಿಕೆ ಮಾಡಲು ಮುಂದಾಗಿದೆ. ಬಿಜೆಪಿಯು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು "ಪಪ್ಪು" ಎಂಬ ಶೀರ್ಷಿಕೆಯೊಂದಿಗೆ ವ್ಯಂಗ್ಯ ಮಾಡಲಾಗುತ್ತಿದ್ದು, ಇದನ್ನು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಈಗ ಅಮಿತ್‌ ಶಾ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದೆ.

ತೃಣಮೂಲ ಕಾಂಗ್ರೆಸ್ ಅಕ್ಟೋಬರ್ ಮೊದಲ ವಾರದಲ್ಲಿ ದುರ್ಗಾ ಪೂಜೆಯ ಸಮಯದಲ್ಲಿ ಪಶ್ಚಿಮ ಬಂಗಾಳದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ಪಾಂಡಲ್‌ಗಳಿಗೆ ಭೇಟಿ ನೀಡಿದಾಗ ಈ ಟೀ-ಶರ್ಟ್ ಪ್ರಚಾರವನ್ನು ಹೆಚ್ಚು ಮಾಡಲು ಉತ್ಸುಕವಾಗಿದೆ. ಇದು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮಾಡಿದ ಕಾಮೆಂಟ್‌ನಿಂದ ಪ್ರಾರಂಭವಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ. ನಂತರ ಅದು ಟೀ-ಶರ್ಟ್‌ಗಳಲ್ಲಿ ಪ್ರಿಂಟ್‌ ಆಗಿ ಬರಲಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್ ಪಿಟಿಐಗೆ ತಿಳಿಸಿದ್ದಾರೆ.

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಏಳು ಗಂಟೆಗಳ ಕಾಲ ಅಭಿಷೇಕ್ ಬ್ಯಾನರ್ಜಿ ಅವರನ್ನು ಪ್ರಶ್ನಿಸಿದ ನಂತರ ಸೆಪ್ಟೆಂಬರ್ 2 ರಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ, ಅಭಿಷೇಕ್ ಬ್ಯಾನರ್ಜಿ ಅವರು ಶಾ ಅವರನ್ನು ಭಾರತದ ದೊಡ್ಡ ಪಪ್ಪು ಎಂದು ಬಣ್ಣಿಸಿದ್ದರು. ಅದೇ ದಿನ ಅಭಿಷೇಕ್‌ ಬ್ಯಾನರ್ಜಿಯವರ ಸೋದರ ಸಂಬಂಧಿಗಳಾದ ಆಕಾಶ್ ಬ್ಯಾನರ್ಜಿ ಮತ್ತು ಅದಿತಿ ಗಯೆನ್ ಅವರು ಗೃಹ ಸಚಿವ ಅಮಿತ್‌ ಶಾ ಅವರ ಕಾರ್ಟೂನ್ ಮತ್ತು ಪಪ್ಪು ಸ್ಲೋಗನ್ ಇರುವ ಟೀ-ಶರ್ಟ್‌ಗಳನ್ನು ಧರಿಸಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರತಿಯೊಂದಕ್ಕೆ 300 ರೂಪಾಯಿ

ಪ್ರತಿಯೊಂದಕ್ಕೆ 300 ರೂಪಾಯಿ

ತೃಣಮೂಲ ಕಾಂಗ್ರೆಸ್ ಮೂಲಗಳು ಅಭಿಷೇಕ್‌ ಬ್ಯಾನರ್ಜಿ ಅವರು ಪಕ್ಷದ ಯುವ ಕಾರ್ಯಕರ್ತರಿಗೆ ಹೊಸ ವಿನ್ಯಾಸದ ಉಡುಪುಗಳ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇದನ್ನು ಪ್ರತಿಯೊಂದಕ್ಕೆ 300 ರೂಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದರು. ಆರಂಭದಲ್ಲಿ, ಟಿ-ಶರ್ಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದವು. ಈಗ ಅವುಗಳನ್ನು ಸಗಟು ಮಾರುಕಟ್ಟೆಗಳಲ್ಲಿ ಪಡೆಯಬಹುದು ಎಂದು ಡೆರೆಕ್ ಒಬ್ರಿಯಾನ್ ಹೇಳಿದರು.

ಡೆರೆಕ್ ಒಬ್ರಿಯಾನ್ ಟೀ ಶರ್ಟ್ ಟ್ವೀಟ್‌

ಡೆರೆಕ್ ಒಬ್ರಿಯಾನ್ ಟೀ ಶರ್ಟ್ ಟ್ವೀಟ್‌

ಟೀ ಶರ್ಟ್‌ನಲ್ಲಿ ಮೂರ್ನಾಲ್ಕು ವಿನ್ಯಾಸಗಳು ಲಭ್ಯವಿದ್ದು, ದುರ್ಗಾಪೂಜೆಗೂ ಮುನ್ನವೇ ಮಾರುಕಟ್ಟೆಗೆ ಬರಲಿವೆ ಎಂದು ಸ್ವತಃ ಸಂಸದರೇ ಟ್ವೀಟ್ ಮಾಡಿದ್ದು, ಸಂಸತ್ ಭವನದ ಬಳಿ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿರುವ ಫೋಟೊ ಹಾಗೂ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಮತ್ತು 25 ವರ್ಷಕ್ಕಿಂತ ಹೆಚ್ಚಿಲ್ಲದ ಪಕ್ಷದ ಯುವ ಉತ್ಸಾಹಿಗಳು ಆ ಟೀ-ಶರ್ಟ್‌ಗಳನ್ನು ರಚಿಸುತ್ತಿದ್ದಾರೆ. ಈ ವಿನ್ಯಾಸಗಳು ಮನಸೆಳೆಯುವಂತೆ ಇವೆ ಎಂದು ಡೆರೆಕ್ ಒಬ್ರಿಯಾನ್ ಹೇಳಿದರು.

ಅಪಹಾಸ್ಯ ಮಾಡುವ ಟೀ ಶರ್ಟ್

ಅಪಹಾಸ್ಯ ಮಾಡುವ ಟೀ ಶರ್ಟ್

ಅವರು ಕೋಲ್ಕತ್ತಾದಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲೂ ಟೀ ಶರ್ಟ್ ಧರಿಸಿದ್ದರು. ಹಲವಾರು ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಕೂಡ ಅಮಿತ್‌ ಶಾ ಅವರನ್ನು ಅಪಹಾಸ್ಯ ಮಾಡುವ ಟೀ ಶರ್ಟ್ ಧರಿಸಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಈ ಪ್ರಚಾರವನ್ನು ಇಷ್ಟಪಡಬೇಕು. ಬಿಜೆಪಿಯು ತಮ್ಮ ನಾಯಕನನ್ನು ಅಪಹಾಸ್ಯ ಮಾಡಲು ಈ ಪದವನ್ನು ಬಳಸಿತು. ಈಗ ಬಿಜೆಪಿ ತಮ್ಮದೇ ಏಟನ್ನು ಮರಳಿ ಪಡೆಯುತ್ತಿದೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ಹೋರಾಡಲು ಸಮಸ್ಯೆ ಇಲ್ಲ

ಬಿಜೆಪಿ ವಿರುದ್ಧ ಹೋರಾಡಲು ಸಮಸ್ಯೆ ಇಲ್ಲ

ಆದರೆ ಈ ಟೀ ಶರ್ಟ್‌ ವ್ಯಂಗ್ಯವನ್ನು ಈ ವೈಯಕ್ತಿಕ ದಾಳಿ ಒಂದು ಫ್ಲಾಪ್ ಶೋ ಎಂದು ಹೇಳಿದ್ದಾರೆ. ಟಿಎಂಸಿ (ತೃಣಮೂಲ ಕಾಂಗ್ರೆಸ್) ಗೆ ಬಿಜೆಪಿ ವಿರುದ್ಧ ಹೋರಾಡಲು ಯಾವುದೇ ಸಮಸ್ಯೆ ಇಲ್ಲ. ಅದಕ್ಕಾಗಿಯೇ ಅವರು ವೈಯಕ್ತಿಕವಾಗಿ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ಪಕ್ಷವು ಅಂತ್ಯದತ್ತ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ನಾಯಕ ರಾಹುಲ್ ಸಿನ್ಹಾ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+