ಬಿಜೆಪಿ ಸೇರಿದ ಆ ಕಾಲದ 'ಸ್ಟಾರ್ ನಟಿ' ಮೌಸಮಿ ಚಟರ್ಜಿ

ಕೋಲ್ಕತಾ, ಜನವರಿ 04: ಲೋಕಸಭೆ ಚುನಾವಣೆಗಾಗಿ ಭರ್ಜರಿ ತಯಾರಿ ನಡೆಸಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಸೆಲೆಬ್ರಿಟಿಗಳನ್ನು ಸೆಳೆಯಲು ಆರಂಭಿಸಿದೆ. ಕಲಾವಿದರು, ನಟ, ನಟಿಯರು, ಕ್ರೀಡಾಪಟುಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗುವಂತೆ ಹೈಕಮಾಂಡ್ ಸೂಚಿಸಿದೆ.

ಬಿಜೆಪಿಯ ಸ್ಟಾರ್ ಪರಿವಾರಕ್ಕೆ ಈಗ ಆ ಕಾಲದ ಹಿಂದಿ, ಬೆಂಗಾಲಿ ಸ್ಟಾರ್ ನಟಿ ಮೌಸಮಿ ಚಟರ್ಜಿ ಅವರು ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಪರ ಈಗಾಗಲೇ ಮಾಧುರಿ ದೀಕ್ಷಿತ್, ಕಂಗನಾ ರನೌತ್, ಪ್ರೀತಿ ಜಿಂಟಾ, ಪಲ್ಲವಿ ಜೋಶಿ ಹಾಗೂ ಅಕ್ಷಯ್ ಕುಮಾರ್ ಪ್ರಚಾರಕ್ಕೆ ಸಿದ್ಧರಾಗಿದ್ದಾರೆ.

ಕ್ರಿಕೆಟರ್ ಗಳಾದ ಕಪಿಲ್ ದೇವ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅಲ್ಲದೆ, ಫುಟ್ಬಾಲ್ ತಂಡದ ನಾಯಕ ಬೈಚುಂಗ್ ಭೂತಿಯಾ ಅವರನ್ನು ಬಿಜೆಪಿ ಪರ ಪ್ರಚಾರಕ್ಕೆ ಬಳಸಿಕೊಳ್ಳಲು ಯತ್ನಿಸಲಾಗುತ್ತಿದೆ.

After Moushumi Chatterjee’s entry, BJP looks to further boost star power

2008ರಿಂದ 2013ರ ಅವಧಿಯಲ್ಲಿ ಕುಂಬ್ಳೆ ಅವರು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿದ್ದರು. ಬಿ.ಎಸ್ ಯಡಿಯೂರಪ್ಪ ಅವರ ಆಡಳಿತ ಅವಧಿಯ ಈ ಹುದ್ದೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಹೊಂದಿತ್ತು.

ಪಶ್ಚಿಮ ಬೆಂಗಾಲದಲ್ಲಿ 42 ಲೋಕಸಭಾ ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳನ್ನು ಗೆಲ್ಲಲು ಅಮಿತ್ ಶಾ ಯೋಜನೆ ಹಾಕಿಕೊಂಡಿದ್ದು, ತೃಣಮೂಲ ಕಾಂಗ್ರೆಸ್ ನಿಂದ ಭಾರಿ ಸ್ಪರ್ಧೆ ಎದುರಿಸುತ್ತಿದ್ದಾರೆ.

2015ರಲ್ಲಿ ರೂಪ ಗಂಗೂಲಿ, ಗಾಯಕ ಬಾಬುಲ್ ಸುಪ್ರಿಯೋ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಯಿತು. ಅಸಾನೋಲ್ ನಿಂದ ಬಾಬುಲ್ ಗೆದ್ದು ಸಂಸದರಾದರು. ಮೌಸಮಿ ಚಟರ್ಜಿ ಅವರು ಈ ಮುಂಚೆ ಕಾಂಗ್ರೆಸ್ಸಿನಲ್ಲಿದ್ದರು. ಈಗ ಮೋದಿ ಅವರ ಆಡಳಿತ ಮೆಚ್ಚಿ ಬಿಜೆಪಿ ಸೇರುತ್ತಿರುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+