• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲಾರದ 'ಸೀತಿ ಬೆಟ್ಟ'ಕ್ಕೆ ಹಸಿರು ಹೊದಿಕೆ

|

ಕೋಲಾರ, ಆಗಸ್ಟ್ 30: ವೇಮಗಲ್‍ನ 'ಸೀತಿ ಬೆಟ್ಟಕ್ಕೆ ಹಸಿರು ಹೊದಿಕೆ' ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಕೋಲಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಜನರಿಗೆ ಗಿಡಗಳನ್ನು ಹಸ್ತಾಂತರ ಮಾಡು ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ 'ಬೋಳು ಬೆಟ್ಟಕ್ಕೆ ಬನದ ಮೆರಗು' ಎಂಬ ಪರಿಕಲ್ಪನೆಯಲ್ಲಿ ಸೀತಿ ಬೆಟ್ಟದಲ್ಲಿ ವಿವಿಧ ಜಾತಿಯ ಸುಮಾರು 1 ಸಾವಿರ ಗಿಡಗಳನ್ನು ನೆಡುವ ಕಾರ್ಯವನ್ನು ಕೈಗೊಂಡಿದ್ದಾರೆ.

ಕೋಲಾರ ಐಫೋನ್ ಘಟಕ ಆರಂಭ; 10 ಸಾವಿರ ಜನರಿಗೆ ಉದ್ಯೋಗ

ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಮಳೆ ಬೆಳೆ ಉತ್ತಮವಾಗಿ ಆಗಬೇಕಾದರೆ ಹಸಿರು ಮುಖ್ಯ. ಹಾಗಾಗಿ ಜಿಲ್ಲೆಯಲ್ಲಿ ಬೋಳು ಬೆಟ್ಟಗಳನ್ನು ಆಯ್ಕೆ ಮಾಡಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ" ಎಂದರು.

ಅರಣ್ಯ ಸಿಬ್ಬಂದಿಯಿಂದಲೇ ಅಕ್ರಮ ಮರ ಸಾಗಾಟ, ಆದರೂ ಪ್ರಕರಣ ದಾಖಲಿಸಿಲ್ಲ

"ಇದರಿಂದ ಕಾಡು ಪ್ರಾಣಿಗಳಿಗೆ ಆಹಾರದ ಜೊತೆಗೆ ವಾತಾವರಣ ತಂಪಾಗಿರಲು ಪ್ರಕೃತಿಗೆ ನಮ್ಮ ಕಿರು ಕಾಣಿಕೆಯಾಗುವ ಭರವಸೆ ಇದೆ. ಪ್ರಾಯೋಗಿಕವಾಗಿ ಸೀತಿ ಬೆಟ್ಟವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಬೆಟ್ಟದಲ್ಲಿ ಆಲ, ಬೇವು, ಕಿರುನೆಲ್ಲಿ, ಹೊಂಗೆ ಪನ್ನೇರಳೆ ಮತ್ತು ಹೊಂಗೆಯ ಗಿಡಗಳನ್ನು ನೆಡಲಾಗುತ್ತಿದೆ" ಎಂದು ಮಾಹಿತಿ ನೀಡಿದರು.

ಕೋಲಾರ: ಆವನಿ ಶೃಂಗೇರಿ ಶಾಖಾ ‌ಮಠದ ಸ್ವಾಮೀಜಿ ನಿಧನ

ಸೆಪ್ಟೆಂಬರ್ ತಿಂಗಳಲ್ಲಿ ಪಕ್ಕದ ಭಸ್ಮಾಸುರ ಬೆಟ್ಟದಲ್ಲಿ ಗಿಡ ನೆಡುವ ಗುರಿಯ ಸಹಿತ ಜಿಲ್ಲೆಯಾದ್ಯಂತ ಬೋಳು ಬೆಟ್ಟಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ. ಇನ್ನೂ ಬೆಟ್ಟದ ತಪ್ಪಲಿನಿಂದ ಬೆಟ್ಟದ ತುದಿಗೆ ಗಿಡ ಸಾಗಿಸಲು, ಕೋಲಾರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ, ಪಿಡಿಒ ಸಹಿತ ಎರಡು ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಹಲವು ಸ್ವಯಂ ಸೇವಕರು ಕೈ ಜೋಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಜಿಲ್ಲಾ ಪಂಚಾಯತಿ ಸಹಾಯಕ ಯೋಜನಾ ಅಧಿಕಾರಿಗಳಾದ ವಸಂತ್ ಕುಮಾರ್ ಗೋವಿಂದಗೌಡ, ದೇವರಾಜ್ ಹಾಗೂ ಮುರಳಿ, ಕೋಲಾರ ತಾಲೂಕು ಪಂಚಾಯತಿ ನಿರ್ವಹಣಾಧಿಕಾರಿ ಎನ್.ವಿ ಬಾಬು ಮತ್ತಿತರು ಉಪಸ್ಥಿತರಿದ್ದರು.

English summary
Deputy commissioner of Kolar Satyabhama launched the tree plantation project at Seethi bettta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X