ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ ಎಪಿಎಂಸಿ ತ್ಯಾಜ್ಯ ಸಂಗ್ರಹಕ್ಕೆ ಜಾಗದ ಕೊರತೆ; ಹೀಗಾಗಿದೆ ಕಥೆ...

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜುಲೈ 27: ಏಷ್ಯಾದಲ್ಲೇ ಅತಿದೊಡ್ಡ ಟೊಮಾಟೊ ಮಾರುಕಟ್ಟೆ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗವೇ ಸಿಗದಂತಾಗಿದೆ.

Recommended Video

EMISAT ಪ್ರಕಾರ India China Border ನಲ್ಲಿ ಇನ್ನು ಬೆಂಕಿ ಆರಿಲ್ಲ | Oneindia Kannada

ಹೀಗಾಗಿ ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಟೊಮಾಟೊ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಗುತ್ತಿಗೆದಾರರಿಗೆ ವಹಿಸಲಾಗಿದೆ. ತ್ಯಾಜ್ಯವನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡಬೇಕಾಗಿರುವುದು ಗುತ್ತಿಗೆ ಪಡೆದಿರುವವರ ಜವಾಬ್ದಾರಿ. ಗುತ್ತಿಗೆ ಪಡೆದವರು ತ್ಯಾಜ್ಯವನ್ನು ತಮ್ಮ ಸ್ವಂತ ಜಮೀನಿನಲ್ಲಿ ಗುಂಡಿ ತೋಡಿ ಮುಚ್ಚಬೇಕು, ಕೃಷಿ ಭೂಮಿ, ಕೆರೆ, ರಸ್ತೆಗಳ ಪಕ್ಕದಲ್ಲಿ ಸುರಿಯಬಾರದು ಎಂಬ ನಿಯಮದಲ್ಲಿ ಎಪಿಎಂಸಿ ತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲಾಗುತ್ತದೆ.

ಆಸ್ಪತ್ರೆ ತಾಜ್ಯದಿಂದ ಆದಾಯ; ಮಾದರಿಯಾದ ಉಡುಪಿ ಆಸ್ಪತ್ರೆಆಸ್ಪತ್ರೆ ತಾಜ್ಯದಿಂದ ಆದಾಯ; ಮಾದರಿಯಾದ ಉಡುಪಿ ಆಸ್ಪತ್ರೆ

ಆದರೆ ಗುತ್ತಿಗೆ ಪಡೆದವರು ನಿಯಮಗಳನ್ನು ಉಲ್ಲಂಘಿಸಿ ಹೈವೇ ರಸ್ತೆಗಳ ಇಕ್ಕೆಲಗಳಲ್ಲಿ ಕೆರೆ ಸಮೀಪ ಹಾಗೂ ನಗರದ ರಸ್ತೆಗಳಲ್ಲಿ ತ್ಯಾಜ್ಯವನ್ನು ಸುರಿದು ಹೋಗುತ್ತಿದ್ದಾರೆ.

Tomatoes Dumped On Streets Due To Kolar APMC Market Garbage Problem

ನಗರಸಭೆ ಆಧಿಕಾರಿಗಳು ಈ ಬಗ್ಗೆ ಎಪಿಎಂಸಿ ಆಡಳಿತ ಮಂಡಳಿಗೆ ಪ್ರಶ್ನಿಸಿದರೆ, ತ್ಯಾಜ್ಯ ಸಂಗ್ರಹಕ್ಕೆ ಸರಿಯಾದ ಜಾಗ ಇಲ್ಲ ಎಂದು ಸಬೂಬು ನೀಡಿ ಗುತ್ತಿಗೆ ಪಡೆದವರ ಕಡೆ ಕೈ ತೋರಿಸುತ್ತಾರೆ. ಇತ್ತೀಚೆಗೆ ಟೊಮಾಟೊಗೆ ಬೆಲೆ ಕಡಿಮೆಯಾಗಿದೆ, ಮಾರುಕಟ್ಟೆಗೆ ಬರುವ ಟೊಮಾಟೊ ಸೇಲ್ ಆಗದೇ ಇರುವ ಹಿನ್ನೆಲೆ ಮಾರುಕಟ್ಟೆಯಲ್ಲಿ ಉಳಿಯುವ ಟೊಮಾಟೊವನ್ನು ಗುತ್ತಿಗೆದಾರರು ರಸ್ತೆಗಳ ಪಕ್ಕ, ಕೆರೆಗಳ ಸಮೀಪ ಸುರಿದು ಹೋಗುತ್ತಿದ್ದಾರೆ. ಇದರಿಂದ ಕೆರೆಗಳು ಕಲುಷಿತಗೊಳ್ಳುವುದರ ಜೊತೆಗೆ ರಸ್ತೆಗಳೂ ಹಾಳಾಗುತ್ತಿವೆ.

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಕ್ಕೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದ ವೇಳೆ, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಭರವಸೆ ಮಾತ್ರ ನೀಡುತ್ತಿದ್ದಾರೆ.

Tomatoes Dumped On Streets Due To Kolar APMC Market Garbage Problem

ಈ ಬಗ್ಗೆ ಸೂಕ್ತ ಪರಿಹಾರ ನೀಡದ ಎಪಿಎಂಸಿ ಆಡಳಿತ ಮಂಡಳಿ ಹಾಗೂ ತ್ಯಾಜ್ಯ ವಿಲೇವಾರಿ ಮಾಡಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರ ಈ ನಡೆಯಿಂದ ಸಾರ್ವಜನಿಕರು ಕಂಗೆಟ್ಟಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

English summary
The largest tomato market in asia, apmc of kolar is facing garbage problem. Thus, tomato waste is being dumped into the streets of the city
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X