ಕೋಲಾರ; ಶಿಕ್ಷಕಿ, ಆಶಾ ಕಾರ್ಯಕರ್ತೆ ಬೆದರಿಸಿ ದರೋಡೆ

ಕೋಲಾರ, ಫೆಬ್ರವರಿ 5; ಶಾಲಾ ಶಿಕ್ಷಕಿ ಮತ್ತು ಆಶಾ ಕಾರ್ಯಕರ್ತೆಯನ್ನು ಬೆದರಿಸಿ, ಚಾಕುವಿನಿಂದ ಹಲ್ಲೆ ಮಾಡಿ ದರೋಡೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮಾಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.

ಶುಕ್ರವಾರ ಮಾಲೂರು ತಾಲೂಕಿನ ಹನುಮನಾಯಕನಹಳ್ಳಿ ಬಳಿ ಈ ಘಟನೆ ನಡೆದಿದೆ. ಯಶವಂತಪುರ ಸರ್ಕಾರಿ ಶಾಲೆಯ ಶಿಕ್ಷಕಿ ರಾಧಾಬಾಯಿ ಮತ್ತು ಆಶಾ ಕಾರ್ಯಕರ್ತೆ ಧನಲಕ್ಷ್ಮೀಯನ್ನು ನಾಲ್ವರು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ.

ಶಿಕ್ಷಕಿ ಮತ್ತು ಆಶಾ ಕಾರ್ಯಕರ್ತೆ ಬೈಕ್‌ನಲ್ಲಿ ಯಶವಂತಪುರಕ್ಕೆ ಹೋಗುವಾಗ ನಾಲ್ವರು ಅಪರಿಚಿತರು ಹನುಮನಾಯಕನಹಳ್ಳಿ ಬಳಿ ಅಡ್ಡಗಟ್ಟಿದ್ದಾರೆ. ಬೆದರಿಸಿ ಶಿಕ್ಷಕಿ ರಾಧಾಬಾಯಿ ಮಾಂಗಲ್ಯ ಕಸಿದು ಪರಾರಿಯಾಗಿದ್ದಾರೆ.

 Kolar Teacher And ASHA Worker Robbed

ರಾಧಾಬಾಯಿ ದರೋಡೆಗೆ ಅಡ್ಡಿಪಡಿಸಿದ್ದಾರೆ. ಆಗ ಇಬ್ಬರ ಮೇಲೆಯೂ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದಾರೆ. ಚಾಕುವಿನಿಂದ ಧನಲಕ್ಷ್ಮೀ ತಲೆ, ಬೆನ್ನಿನ ಭಾಗಕ್ಕೆ ತಿವಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಾಳುಗಳು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಾಲೂರು ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಶಿಕ್ಷಕಿ, ಆಶಾ ಕಾರ್ಯಕರ್ತೆಯಿಂದ ಮಾಹಿತಿ ಪಡೆದರು. ಬಳಿಕ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ದುಷ್ಕರ್ಮಿಗಳಿಗಾಗಿ ಹುಡುಕಾಟವನ್ನು ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+