ಕೋಲಾರ ಐಫೋನ್ ಘಟಕ ಆರಂಭ; 10 ಸಾವಿರ ಜನರಿಗೆ ಉದ್ಯೋಗ

ಕೋಲಾರ, ಆಗಸ್ಟ್ 17 : ಕೆಲವೇ ದಿನಗಳಲ್ಲಿ ಕೋಲಾರದ ನರಸಾಪುರದಲ್ಲಿ ವಿಸ್ಟ್ರಾನ್ ತನ್ನ ಘಟಕವನ್ನು ಕಾರ್ಯಾರಂಭ ಮಾಡಲಿದೆ. ಈಗಾಗಲೇ ಕಂಪನಿ ಈ ಘಟಕಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭ ಮಾಡಿದೆ.

Recommended Video

      Lakshmi Hebbalkar ಪುತ್ರನ ನಿಶ್ಚಿತಾರ್ಥಕ್ಕೆ ಎಲ್ಲಾ ಪಕ್ಷದವರಿಗೂ ಆಮಂತ್ರಣ | Oneindia Kannada

      2017ರಲ್ಲಿ ತೈವಾನ್ ಮೂಲದ ವಿಸ್ಟ್ರಾನ್ ಕಂಪನಿ ಕೋಲಾರದಲ್ಲಿ ಘಟಕ ಆರಂಭಿಸುವುದಾಗಿ ಘೋಷಣೆ ಮಾಡಿತ್ತು. ಕೆಐಎಡಿಬಿ 43 ಎಕರೆ ಜಾಗವನ್ನು ಕಂಪನಿಗೆ ನೀಡಿತ್ತು. ಕರ್ನಾಟಕ ಕೈಗಾರಿಕಾ ನೀತಿಯ ಪ್ರಕಾರ ಶೇ 70ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕಿದೆ.

      ಕೋಲಾರದ ಈ ಘಟಕದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರು ಮಾಡಲಾಗುತ್ತದೆ. ಪ್ರತಿಷ್ಠಿತ ಆಪಲ್ ಸಂಸ್ಥೆಗೆ ಬಿಡಿ ಭಾಗಗಳನ್ನು ಪೂರೈಕೆ ಮಾಡುವ ಟೆಂಡರ್ ವಿಸ್ಟ್ರಾನ್ ಕಂಪನಿಯ ಕೈಯಲ್ಲಿ ಇದೆ. ಪೀಣ್ಯದಲ್ಲಿ ಐಪೋನ್ ಜೋಡಣೆ ಮಾಡುವ ಘಟಕವನ್ನು ಕಂಪನಿ ಹೊಂದಿದೆ.

      Taiwan Company Unit Started Hiring Activities For Kolar plant

      ನರಸಾಸಪುರದ ಈ ಘಟಕದಲ್ಲಿ 10 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ಅಂದಾಜಿಸಲಾಗಿದೆ. ನಿಯಮಗಳ ಅನ್ವಯ ಸುಮಾರು 7000 ಕರ್ನಾಟಕದ ಜನರಿಗೇ ಉದ್ಯೋಗವನ್ನು ನೀಡಬೇಕಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನು ಕಂಪನಿ ಆರಂಭಿಸಿದೆ.

      ಹಂತ-ಹಂತವಾಗಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಪ್ರಸ್ತುತ ಐಟಿಐ ಮತ್ತು ಡಿಪ್ಲೊಮಾ ಪದವಿ ಪಡೆದವರನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಈ ಘಟಕ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+