ಸಿದ್ದರಾಮಯ್ಯ-ಡಿಕೆ.ಶಿವಕುಮಾರ್ ಸೇರಿ ಮೈತ್ರಿ ಸರ್ಕಾರ ಬೀಳಿಸುತ್ತಾರೆ: ಆರ್.ಅಶೋಕ್
ಬಾಗೇಪಲ್ಲಿ, ಡಿಸೆಂಬರ್ 07: ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಅವರೇ ಸೇರಿಕೊಂಡು ಮೈತ್ರಿ ಸರ್ಕಾರವನ್ನು ಬೀಳಿಸುತ್ತಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.
ಬಾಗೇಪಲ್ಲಿಯಲ್ಲಿ ಬರಗಾಲ ಅಧ್ಯಯನಕ್ಕೆಂದು ಆಗಮಿಸಿದ್ದ ಅವರು, ಈಗಾಗಲೇ ಬೀಳುವ ಹಂತದಲ್ಲಿರುವ ಸರ್ಕಾರಕ್ಕೆ ನಾವು ಕಲ್ಲು ಹೊಡೆಯುವುದಿಲ್ಲ ಎಂದು ಅವರು ಹೇಳಿದರು.
ಸರ್ಕಾರವನ್ನು ಬಿಜೆಪಿ ಬೀಳಿಸುವ ಪ್ರಮೇಯವೇ ಹುಟ್ಟುವುದಿಲ್ಲ, ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಸರ್ಕಾರ ಪಥನವಾಗುತ್ತದೆ. ಸರ್ಕಾರ ಬೀಳುವುದು ಎಲ್ಲರಿಗೂ ಗೊತ್ತಿದೆ, ಅದರ ಸಮಯ ಸಹ ಸನಿಹ ಬಂದಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಮೊದಲು ಡಿ.5 ಕ್ಕೆ ಸಂಪುಣ ವಿಸ್ತರಣೆಎಂದಿದ್ದರು, ಈಗ ಬೆಳಗಾವಿ ಅಧಿವೇಶನ ಮುಗಿದ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಆ ನಂತರ ಧನುರ್ಮಾಸ ಎಂದು ನೆಪ ಹೇಳುತ್ತಾರೆ. ಆ ಸಮಯಕ್ಕೆ ಸರಿಯಾಗಿ ಲೋಕಸಭೆ ಚುನಾವಣೆ ಬರುತ್ತದೆ. ಹೀಗೆ ಹೇಳಿಕೊಂಡು ಸಂಪುಟವನ್ನು ವಿಸ್ತರಣೆ ಮಾಡದೆ ಮುಂದೂಡಿಕೊಂಡು ಬರುತ್ತಿರುವುದರಿಂದಲೇ ಸರ್ಕಾರ ಸುಭದ್ರವಾಗಿರಲಿ ಎಂದು ಮುಖ್ಯಮಂತ್ರಿಗಳು ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದರು.












Click it and Unblock the Notifications