ಮತ್ತೆ ಕುಡಿತ ಆರಂಭಿಸಿದ ಗಂಡ; ಕೋಲಾರದಲ್ಲಿ ತಾಯಿ ಮಗಳು ಆತ್ಮಹತ್ಯೆ

ಕೋಲಾರ, ಮೇ 05: ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಿದ್ದು, ನಿನ್ನೆಯಿಂದ ಸರ್ಕಾರ ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ ಮದ್ಯದಂಗಡಿ ತೆರೆದ ಮೊದಲ ದಿನವೇ ಕೋಲಾರದಲ್ಲಿ ಅನಾಹುತವೊಂದು ನಡೆದಿದೆ.

ಮದ್ಯದಂಗಡಿ ತೆರೆಯುತ್ತಿದ್ದಂತೆ ವ್ಯಕ್ತಿಯೊಬ್ಬ ಚೆನ್ನಾಗಿ ಕುಡಿದು ಹೆಂಡತಿ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಮನನೊಂದ ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರದ ಆಂಧ್ರ ಗಡಿ ಪಲಮನೇರು ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಲಾಕ್ ಡೌನ್ ಆದಾಗಿನಿಂದ ಚೊಕ್ಕಲಿಂಗ ಮದ್ಯ ಕುಡಿಯುವುದನ್ನು ಬಿಟ್ಟಿದ್ದ. ಮದ್ಯ ಸೇವನೆ ಮಾಡುವುದಿಲ್ಲ ಎಂದು ಪತ್ನಿಗೆ ಮಾತು ಕೊಟ್ಟಿದ್ದ. ಆದರೆ ನಿನ್ನೆ ಮದ್ಯದಂಗಡಿಗಳು ತೆರೆದಿದ್ದು, ಮತ್ತೆ ಮದ್ಯ ಸೇವಿಸಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಜಗದಾ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಗತಿಯಿಂದ ಮನನೊಂದು ತಾಯಿ, ಮಗಳು ನಂದಿನಿ ಇಬ್ಬರೂ ನಿನ್ನೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Mother And Daughter Committed Suicide In Kolar

ಕುಡಿದು ಹಲ್ಲೆ ಮಾಡಿದ್ದಾಗಿ ಚೊಲ್ಲಲಿಂಗ ತಪ್ಪೊಪ್ಪಿಕೊಂಡಿದ್ದಾನೆ. ಪಲಮನೇರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+