ಕೋಲಾರ: ದುಷ್ಕರ್ಮಿಗಳಿಂದ ಆಂಜನೇಯ ದೇಗುಲಕ್ಕೆ ಬೆಂಕಿ!
ಕೋಲಾರ, ಮಾರ್ಚ್. 26 : ದುಷ್ಕರ್ಮಿಗಳು ಆಂಜನೇಯ ದೇವಸ್ಥಾನವನ್ನು ದ್ವಂಸಗೊಳಿಸಿ ಬಳಿಕ ಬೆಂಕಿ ಹಚ್ಚಿರುವ ಘಟನೆ ಶನಿವಾರ ತಡ ರಾತ್ರಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತೆರ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತೆರ್ನಹಳ್ಳಿ ಗ್ರಾಮದ ನಿವಾಸಿ ಚಂದ್ರಪ್ಪ ಎನ್ನುವರು ತಮ್ಮ ಹೊಲದಲ್ಲಿ ಕಟ್ಟಿಸಿದ್ದ ಆಂಜನೇಯ ದೇವಸ್ಥಾನವನ್ನು ದ್ವಂಸಗೊಳಿಸಿ ಬಳಿಕ ಬೆಂಕಿ ಹಚ್ಚಿದ್ದಾರೆ. ಹಳೆ ವೈಷಮ್ಯದ ಹಿನ್ನಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.[ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಜೆಡಿಎಸ್ ಪ್ರತಿಭಟನೆ]

ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳನ್ನು ಬಂಧಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಠಾಣೆಯ ಪೊಲೀಸರು ಭೇಟಿ ನಿಡಿ ಪರಿಶೀಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.












Click it and Unblock the Notifications