ಕೋಲಾರದಲ್ಲಿ ಎರಡನೇ ಬಾರಿ ಪ್ರತ್ಯಕ್ಷವಾದ ಮಿಡತೆ ದಂಡು
ಕೋಲಾರ, ಜೂನ್ 01: ಐದು ದಿನಗಳ ಹಿಂದೆ ಕಾಣಿಸಿಕೊಂಡು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಮಿಡತೆ ಹಿಂಡು ಇಂದು ಮತ್ತೆ ಪ್ರತ್ಯಕ್ಷವಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮುತ್ತುಗದಹಳ್ಳಿ ಗ್ರಾಮದ ಬಳಿ ಈ ಮಿಡತೆಗಳು ಕಂಡುಬಂದಿವೆ. ಮೊದಲ ಬಾರಿ ದಿಂಬ, ದೊಡ್ಡಹಸಾಳ ಗ್ರಾಮಗಳ ಬಳಿ ಇವು ಕಾಣಿಸಿಕೊಂಡಿದ್ದವು. ಇದೀಗ ಮುತ್ತುಗದಹಳ್ಳಿಯಲ್ಲೂ ಕಾಣಸಿಕ್ಕಿವೆ.
ಕೋಲಾರಕ್ಕೂ ಬಂದ ಮಿಡತೆ ಸೈನ್ಯ: ರೈತರಲ್ಲಿ ಆತಂಕ
ತಿಳಿ ಹಸಿರು ಬಣ್ಣದಿಂದ ಕೂಡಿರುವ ಈ ಮಿಡತೆಗಳು, ಗಿಡಗಳಲ್ಲಿನ ಎಲೆಗಳನ್ನು ತಿಂದುಹಾಕಿವೆ. ಹೀಗಾಗಿ ರೈತರೂ ಆತಂಕದಲ್ಲಿದ್ದಾರೆ. ಈ ಹಿಂದೆ ಕೋಲಾರ ತಾಲೂಕಿನ ದಿಂಬ ಬಳಿ ಮಿಡತೆಗಳು ಕಾಣಿಸಿಕೊಂಡಾಗ ತೋಟಗಾರಿಕಾ ಇಲಾಖೆ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಮಿಡತೆಗಳು ಹಾನಿಕಾರಕವಲ್ಲ. ಇವು ಮಳೆಯಾದಾಗ ಸಹಜವಾಗಿ ಕಾಣಿಸಿಕೊಳ್ಳುವ ಮಿಡತೆಗಳು ಎಂದು ಸ್ಪಷ್ಟನೆ ನೀಡಿದ್ದರು.

ಇದೀಗ ಮತ್ತೆ ಮಿಡತೆಗಳು ಕಾಣಿಸಿಕೊಂಡಿದ್ದು, ಜಿಲ್ಲೆಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮುತ್ತುಕದಹಳ್ಳಿ ಗ್ರಾಮಕ್ಕೆ ದೌಡಾಯಿಸಿದ್ದಾರೆ.












Click it and Unblock the Notifications