ಕೋಲಾರದಲ್ಲಿ ರೈಲ್ವೆ ಹಳಿಗಳ ನಡುವೆ ಸಿಲುಕಿಕೊಂಡಿದ್ದ ನವಜಾತ ಜಿಂಕೆಮರಿ ರಕ್ಷಣೆ
ಕೋಲಾರ, ಜುಲೈ 13: ನವಜಾತ ಜಿಂಕೆ ಮರಿಯೊಂದು ಅನಾಥವಾಗಿ ಪತ್ತೆಯಾಗಿದ್ದು, ಇದನ್ನು ಸಾರ್ವಜನಿಕರು ರಕ್ಷಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ನಗರದ ಆರ್ ಟಿಒ ಕಚೇರಿ ಹಿಂಭಾಗದಲ್ಲಿರುವ ನಿನ್ನೆ ರೈಲ್ವೆ ಹಳಿಗಳ ಮೇಲೆ ಈ ಪುಟಾಣಿ ಜಿಂಕೆ ಮರಿ ಪತ್ತೆಯಾಗಿದೆ.
ಸಮೀಪದ ಟೊಮಾಟೋ ತೋಟದಲ್ಲಿ ಮೊನ್ನೆ ರಾತ್ರಿ ಈ ಮರಿ ಜನಿಸಿದ್ದು, ರೈಲ್ವೆ ಹಳಿಯನ್ನು ದಾಟಲಾಗದ ಮರಿ ಹಳಿಗಳ ಮಧ್ಯೆ ಸಿಲುಕಿಕೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತವಾಗಿರುವ ಕಾರಣ ಅದೃಷ್ಟವಶಾತ್ ನವ ಜಾತ ಜಿಂಕೆ ಮರಿ ಪ್ರಾಣಾಪಾಯದಿಂದ ಪಾರಾಗಿದೆ.

ಈ ಭಾಗದ ನಿವಾಸಿಗಳು ರೈಲ್ವೆ ಹಳಿಯ ಬದಿಯಲ್ಲಿ ವಾಯುವಿಹಾರ ಮಾಡುವಾಗ ಈ ಮರಿ ಕಣ್ಣಿಗೆ ಬಿದ್ದಿದೆ. ತಕ್ಷಣ ವನ ಪಾಲಕ ಲೋಕೇಶ್ ಅವರಿಗೆ ಈ ಬಗ್ಗೆ ಮಾಹಿತಿಯನ್ನು ರವಾನಿಸಿದ್ದಾರೆ. ಸ್ಥಳಕ್ಕೆ ತೆರಳಿ ಜನರಿಂದ ರಕ್ಷಿಸಲಾದ ಜಿಂಕೆ ಮರಿಯನ್ನು ವಶಕ್ಕೆ ಪಡೆದು ಅವರು ಸೂಕ್ತ ಚಿಕಿತ್ಸೆ ಮತ್ತು ಆರೈಕೆಗೆ ಒಳಪಡಿಸಿದ್ದಾರೆ.












Click it and Unblock the Notifications