ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ: ಹೊಟ್ಟೆಯಲ್ಲಿ ಮಗು ಸತ್ತು ಎರಡು ದಿನವಾದರೂ ಗರ್ಭಿಣಿಯ ಶಸ್ತ್ರಚಿಕಿತ್ಸೆ ಇಲ್ಲ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜುಲೈ 5: ಕಳೆದೆರಡು ದಿನಗಳಿಂದ ಹೊಟ್ಟೆಯಲ್ಲಿರುವ ಮಗು ಬದುಕಿರದಿದ್ದರೂ 6 ತಿಂಗಳ ಗರ್ಭಿಣಿ ನರಳಾಡುತ್ತಿರುವ ಘಟನೆ ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕಿರುವಾರ ಗ್ರಾಮದ ನಿವಾಸಿ ಸೋಮಶೇಖರ್ ಪತ್ನಿ ಸೌಮ್ಯ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಆದರೆ ಮಗುವಿನ ಚಲನವಲನ ತಿಳಿಯದಿದಕ್ಕೆ ಅನುಮಾನಗೊಂಡು ನಾಲ್ಕು ದಿನಗಳ ಹಿಂದೆ ಶ್ರೀನಿವಾಸಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು.

ಸಂಪೂರ್ಣ ಲಾಕ್ ಡೌನ್; ಕೋಲಾರ ಟೊಮೋಟೊ ಮಾರುಕಟ್ಟೆ ಓಪನ್ಸಂಪೂರ್ಣ ಲಾಕ್ ಡೌನ್; ಕೋಲಾರ ಟೊಮೋಟೊ ಮಾರುಕಟ್ಟೆ ಓಪನ್

ಆದರೆ ವೈದ್ಯರು ನೀವು ಕೂಡಲೇ ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳುವಂತೆ ಸೂಚಿಸಿದ್ದರು. ಕೂಡಲೇ ಜಿಲ್ಲಾಸ್ಪತ್ರೆಗೆ ಬಂದ ಸೌಮ್ಯಳನ್ನು ವೈದ್ಯರು ಪರೀಕ್ಷೆ ಮಾಡಿ ಮಗು ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದರು.

Kolar District Hospital Fear Covid-19 Negligence Toward Pregnant

ವಿಪರ್ಯಾಸವೆಂದರೆ ಹೊಟ್ಟೆಯಲ್ಲಿ ಮಗು ಇನ್ನು ಹಾಗೆ ಇದೆ ಅನ್ನುವುದು. ಆಶ್ಚರ್ಯ ಆದರೂ ಸತ್ಯ, ಏಕೆಂದರೆ ಸ್ವತಃ ಸೌಮ್ಯಳೇ ವೈದ್ಯರ ವಿರುದ್ಧ ಆರೋಪ ಮಾಡುತ್ತಿದ್ದಾಳೆ.

ಸದ್ಯ ಮಗುವನ್ನು ಹೊರ ತೆಗೆಯಲು ಇಂಜೆಕ್ಷನ್ ನೀಡಿದ್ದಾರಂತೆ. ಈಗಾಗಲೇ ಕೊರೊನಾ ವೈರಸ್ ಪರೀಕ್ಷೆಗಾಗಿ ವೈದ್ಯರು ಗರ್ಭಿಣಿಯ ಗಂಟಲು ದ್ರವ ಸೇರಿ ರಕ್ತ ಮಾದರಿ ಸಹ ಕಲೆ ಹಾಕಲಾಗಿದೆ. ಫಲಿತಾಂಶ ಬಂದ ನಂತರ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ವೈದ್ಯರು ಎಂದು ಸೌಮ್ಯ ಕುಟುಂಬಸ್ಥರಿಗೆ ತಿಳಿಸಿದ್ದಾರೆ..

ಕೋಲಾರದಲ್ಲಿ ಕೊರೊನಾ ನಡುವೆಯೂ ಜಮಾಯಿಸಿದ ನೂರಾರು ವರ್ತಕರುಕೋಲಾರದಲ್ಲಿ ಕೊರೊನಾ ನಡುವೆಯೂ ಜಮಾಯಿಸಿದ ನೂರಾರು ವರ್ತಕರು

ಮಗು ಸಾವನ್ನಪ್ಪಿದ ಬಳಿಕ ಹೀಗೆ ತಡ ಮಾಡುವ ಮೂಲಕ ವೈದ್ಯರು ನಿರ್ಲಕ್ಷ್ಯ ಮಾಡುತ್ತಿರುವುದು ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದೆರಡು ದಿನಗಳಿಂದ ಆಸ್ಪತ್ರೆಯಲ್ಲೆ ಗರ್ಭಿಣಿ ಹಾಗೂ ಕುಟುಂಬಸ್ಥರು ಪರದಾಡುತ್ತಿದ್ದಾರೆ.

English summary
Doctors checked Soumya who came to the district Hospital to confirm that the baby was dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X