ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ ಜಿಲ್ಲಾಧಿಕಾರಿಗೆ 'ಸ್ಕಾಚ್ ಆರ್ಡರ್ ಆಫ್ ದಿ ಮೆರಿಟ್' ಪ್ರಶಸ್ತಿ

|
Google Oneindia Kannada News

ಕೋಲಾರ, ಜುಲೈ 20 : ಕೋಲಾರ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ ಚಂದ್ರ ಅವರನ್ನು ಅತ್ಯುತ್ತಮ ನಾಗರೀಕ ಸೇವೆಗಾಗಿ ನೀಡುವ 'ಸ್ಕಾಚ್ ಆರ್ಡರ್ ಆಫ್ ದಿ ಮೆರಿಟ್' ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

ಸ್ಕಾಚ್ ಗುಂಪು (Skoch Group) ಗುರ್‌ಗಾಂವ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ವಿಚಾರ ವೇದಿಕೆ ಸಂಸ್ಥೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿರುವ 45ನೇ ಸ್ಕಾಚ್ ಸಮಿಟ್‌ನಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.[1 ವರ್ಷದಲ್ಲಿ ಕೋಲಾರದ ಕೆರೆ ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆ ಪೂರ್ಣ]

Kolar DC KV Thrilokchandra chosen for award

ದೇಶದೆಲ್ಲಡೆಯಿಂದ ಬಂದ 'ಮುನಿಸಿಪಲ್ ಆಸ್ತಿ ಪತ್ರಗಳ ಗಣಕೀಕರಿಸುವ' ಹಾಗೂ 'ಪ್ರತಿ ಮನೆಗೂ ಶೌಚಾಲಯ ನಿರ್ಮಿಸುವ' ಸುಮಾರು 100 ಉತ್ತಮ ಪ್ರಸ್ತಾವನೆಗಳನ್ನು ಪರಾಮರ್ಶಿಸಿ ತಜ್ಞರು ಪ್ರಶಸ್ತಿಗೆ ಡಾ.ಕೆ.ವಿ.ತ್ರಿಲೋಕ ಚಂದ್ರ ಅವರನ್ನು ಆಯ್ಕೆ ಮಾಡಿದ್ದಾರೆ.[ರಾಜ್ಯದ ಮೊದಲ ಡಿಜಿಟಲ್ ಹಳ್ಳಿ ಕೋಲಾರದ ಯಶವಂತಪುರ]

ಜೂನ್ 7ರಂದು ಮುಂಬೈನಲ್ಲಿ ನಡೆದ ಷ್ಟ್ರೀಯ ಸಮಾವೇಶದಲ್ಲಿ ಈ ಯೋಜನೆಗಳ ಕುರಿತು ಡಾ. ಕೆ. ವಿ.ತ್ರಿಲೋಕಚಂದ್ರ ಹಾಗೂ ಅವರ ತಂಡವು ನೀಡಿದ ಅತ್ಯುತ್ತಮ ಪ್ರಾತ್ಯಕ್ಷಿಕೆ ಹಾಗೂ ಎದುರಾದ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿದನ್ನು ನೆನಪು ಮಾಡಿಕೊಳ್ಳಬಹುದು.[ಬಯಲುಸೀಮೆ ಗೌರಿಬಿದನೂರಲ್ಲಿ ಹಸಿರು ಕ್ರಾಂತಿ]

ಪ್ರಶಸ್ತಿ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ.ಕೆ.ವಿ.ತ್ರಿಲೋಕ ಚಂದ್ರ ಅವರು, 'ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ತಮ್ಮ ತಂಡದ ಎಲ್ಲ ಅಧಿಕಾರಿಗಳ ಶ್ರಮದ ಫಲವಾಗಿ ಪ್ರಶಸ್ತಿ ದೊರೆತಿದೆ' ಎಂದು ಹೇಳಿದ್ದಾರೆ.

English summary
Kolar Deputy Commissioner K.V. Thrilokchandra has been chosen for the SKOCH Order-of-Merit Award for meritorious civil service. The award instituted by the Gurgaon-based organisation, award will be presented in September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X