Get Updates
Get notified of breaking news, exclusive insights, and must-see stories!

Kolar Assembly Constituency : ಪ್ರತಿಷ್ಠೆಯ ಕಣ 'ಕೋಲಾರ'ದಲ್ಲಿ ಸಿದ್ದು ವಿರುದ್ಧ ಬಿಜೆಪಿ-ಜೆಡಿಎಸ್ ತಂತ್ರ, ವಿಶ್ಲೇಷಣೆ

ಈ ಬಾರಿ ಕೋಲಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪ್ರತಿ‍ಷ್ಠೆಯ ಕಣವಾಗಿ ಮಾರ್ಪಡಲಿದೆ. ಜೆಡಿಎಸ್ ಸಹ ಪ್ರಮುಖ ಎದುರಾಳಿ ಅಭ್ಯರ್ಥಿಯಾಗಿ ಹೊರ ಹೊಮ್ಮಲಿದೆ. ಕಾಂಗ್ರೆಸ್‌ ಗೆದ್ದು, ಚಿಕ್ಕಬಳ್ಳಾಪುರದ ಮೇಲೂ ಹಿಡಿಯ ಸಾಧಿಸುವ ಹೆಬ್ಬಯಕೆ ಹೊಂದಿದೆ.

ಬೆಂಗಳೂರು, ಫೆಬ್ರವರಿ 19: ಐತಿಹಾಸಿಕವಾಗಿ ಗಂಗರ ರಾಜಧಾನಿಯಾಗಿದ್ದ ಈಗಿನ ಕೋಲಾರ ಕರ್ನಾಟಕ ರಾಜ್ಯದ 228 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಚಿನ್ನದ ಗಣಿಗೆ ಕೋಲಾರ ಜಿಲ್ಲೆ ಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಗಂಗರ ಕಾಲದ ಕೋಲಾರಮ್ಮ ದೇವಾಲಯ, ಸೋಮೇಶ್ವರ ದೇವಾಲಯಗಳು ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ.

ರಾಜಧಾನಿ ಬೆಂಗಳೂರಿಗೆ ಸುಮಾರು 60 ಕಿ.ಮೀ. ದೂರದಲ್ಲಿರುವ ಈ ಜಿಲ್ಲೆಯಲ್ಲಿ ಹೂವು, ಹಣ್ಣು ತರಕಾರಿ ಬೆಳೆದು ನಗರದ ಮಾರುಕಟ್ಟೆಗಳಿಗೆ ತಂದು ಮಾರಾಟ ಮಾಡಲಾಗುತ್ತದೆ. ಸಿಲ್ಕ್ ಆಂಡ್ ಮಿಲ್ಕ, ಹಣ್ಣು ತರಕಾರಿಗಳ ರಾಜಧಾನಿ ಅಂತಲೂ ಈ ಹಿಂದೆ ಕರೆಯುತ್ತಿದ್ದರು. ದೇಶಕ್ಕೆ ತನ್ನ ಒಡಲಿಂದ ಚಿನ್ನವನ್ನು ಬಾಚಿ ನೀಡಿದ ಬಂಗಾರ (Kolar Gold Factory) ಜಿಲ್ಲಾ ಇದಾಗಿದೆ.

ಚಿನ್ನದ ಜಿಲ್ಲೆ ಕೋಲಾರವು ರಾಜಕೀಯ, ಕೃಷಿ, ವಿಜ್ಞಾನ ಹಾಗೂ ತಂತ್ರಜ್ಞಾನ, ಸಾಹಿತ್ಯಿಕವಾಗಿಯು ಸಾಕಷ್ಟು ಕೊಡುಗೆ ನೀಡಿದೆ. ಮೈಸೂರು ಕರ್ನಾಟಕದ ಮೊದಲ ರಾಜಧಾನಿಯಾಗಿದ್ದ ಕಾಲದಲ್ಲಿ ಚೆಂಗಲರಾಯ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದರು, ಅವರು ಇದೇ ಕೋಲಾರ ನೆಲದವರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರಿಗೆ ಆತ್ಮೀಯರಾಗಿದ್ದ ಕರಡು ಸಮಿತಿ ಸದಸ್ಯ ಟಿ. ಚನ್ನಯ್ಯ, ಖ್ಯಾತ ಎಂಜಿನಿಯರ್ ಸರ್,ಎಂ.ವಿಶ್ವೇಶ್ವರಯ್ಯ ಇದೇ ಭಾಗದವರು. ಸಾಹಿತಿ ಮತ್ತು ಪತ್ರಕರ್ತ ಡಿ.ವಿ ಗುಂಡಪ್ಪ, ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ ಸೇರಿದಂತೆ ಅನೇಕರು ಗಣ್ಯರು ಇಲ್ಲಿ ಹುಟ್ಟಿ ಬೆಳೆದು ನಾಡಿಗೇ ಚಿರಪರಿಚಿತರಾಗಿದ್ದಾರೆ.

ಕೋಲಾರ ಕ್ಷೇತ್ರದ ರಾಜಕೀಯ ಇತಿಹಾಸ

ಕೋಲಾರ ಕ್ಷೇತ್ರದ ರಾಜಕೀಯ ಇತಿಹಾಸ

ಈ ಕೋಲಾರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಕೆ.ಎಚ್‌ ಮುನಿಯಪ್ಪ ಅವರು ಏಳು ಭಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವರೂ ಆಗಿದ್ದು ದಲಿತ ಸಮುದಾಯದವರಾದ ಅವರು ಕೋಲಾರದಾದ್ಯಂತ ತಮ್ಮದೇ ಆದ ಹಿಡಿತ ಹೊಂದಿದವರು. ವಿಧಾನಸಭೆಯಲ್ಲಿ ಈ ಭಾಗದಿಂದ ಮೂರು ಮಂದಿ ಮುಸ್ಲಿಂ ಅಭ್ಯರ್ಥಿಗಳು ಆರಿಸಿ ಬಂದದ್ದು ಬಿಟ್ಟರೆ 90ರ ದಶಕದ ನಂತರ ಮತ್ತಾರು ಆರಿಸಿ ಬರಲಿಲ್ಲ. ಕಾಂಗ್ರೆಸ್‌ ಹಿಡಿತವನ್ನು ಆಗಾಗ ಪಕ್ಷೇತರ ಅಭ್ಯರ್ಥಿಗಳು ತಪ್ಪಿಸಿದ್ದನ್ನು ಬಿಟ್ಟರೆ ಕಳೆದ 2018 ರಲ್ಲಿ ಜೆಡಿಎಸ್‌ನ ಕೆ.ಶ್ರೀನಿವಾಸ್ ಗೌಡ ಅವರು ಗೆಲುವು ಸಾಧಿಸಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್‌ ಸೈಯ್ಯದ ಜಮೀರ್ ಅವರು 44,000ಕ್ಕೂ ಅಧಿಕ ಮತಗಳಿಂದ ಸೋಲು ಕಂಡಿದ್ದರು. ಈ ಭಾರಿ 2023ರಲ್ಲಿ ಕೋಲಾರ ರಣಕಣವಾಗಿ ಬದಲಾಗಲಿದೆ.

ಕೋಲಾರದಿಂದ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಸ್ಪರ್ಧೆ

ಕೋಲಾರದಿಂದ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಸ್ಪರ್ಧೆ

ಹಲವು ಚುನಾವಣೆಗಳನ್ನು ನೋಡಿದರೆ ಇಲ್ಲಿ ಕಾಂಗ್ರೆಸ್ ಹಿಡಿತ ಇರುವುದು ಸ್ಪಷ್ಟವಾಗುತ್ತದೆ. ಅದರಲ್ಲೂ ದಲಿತ ನಾಯಕರ ಪ್ರಭಾವ ಹೆಚ್ಚಿರುವ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ತಾವು ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ವಿಪಕ್ಷ ನಾಯಕ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ. ಈ ಘೋಷಣೆ ಬೆನ್ನಲ್ಲೆ ಸಾಕಷ್ಟು ಟೀಕೆಗಳು, ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ. ಆದರೆ ನೂರಕ್ಕೆ ನೂರು ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುತ್ತಾರೆ ಎಂಬುದು ಖಾತ್ರಿ ಇಲ್ಲ.

ಕೋಲಾರ ಕ್ಷೇತ್ರದ 2023ರ ಟಿಕೆಟ್ ಆಕಾಂಕ್ಷಿಗಳು

ಕೋಲಾರ ಕ್ಷೇತ್ರದ 2023ರ ಟಿಕೆಟ್ ಆಕಾಂಕ್ಷಿಗಳು

ಸಿದ್ದರಾಮಯ್ಯನವರು ಕೋಲಾರ ಜಿಲ್ಲೆಯಿಂದ ಸ್ಪರ್ಧಿಸಿದರೆ ಚಿಕ್ಕಬಳ್ಳಾಪುರ ಸೇರಿ ಎರಡು ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಿಡಿತ ಸಾಧಿಸಬಹುದು ಈ ಭಾಗದ ಕೈ ನಾಯಕರು ಅಂದಾಜಿಸಿದ್ದಾರೆ. ಸಿದ್ದರಾಮಯ್ಯ ಸ್ಪರ್ಧೆ ಸದ್ಯಕ್ಕೆ ಖರ್ಚಿತವಾಗಿದೆ. ಇಲ್ಲಿ ಟಿಕೆಟ್‌ ಆಕಾಂಕ್ಷಿಗಳು ಎನ್ನಲಾಗುತ್ತಿರುವ ಕೊತ್ತೂರು ಮಂಜುನಾಥ್, ಜೆಡಿಎಸ್‌ನ ಶ್ರೀನಿವಾಸ್ ಗೌಡ, ಗೋವಿಂದ ಗೌಡ ಅವರು ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗಕ್ಕೆ ಸಜ್ಜಾಗಿದ್ದಾರೆ.

ಜೆಡಿಎಸ್‌ನಿಂದ ಸಿಎಂಆರ್‌ ಶ್ರೀನಾಥ್ ಅಭ್ಯರ್ಥಿಯಾಗಿ ಘೋಷಣೆಗೊಂಡಿದ್ದಾರೆ. ಬಿಜೆಪಿ ಯಿಂದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ ಎನ್ನಲಾಗುತ್ತಿದೆ. ಆದರೆ ಸಿದ್ದರಾಮಯ್ಯರನ್ನು ಇಲ್ಲಿ ಸೋಲಿಸಲು ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದಿದೆ.

ಕೋಲಾರದಲ್ಲಿ ಈ ಬಾರಿ ರಾಜಕೀಯ ಜಿದ್ದಾಜಿದ್ದಿ

ಕೋಲಾರದಲ್ಲಿ ಈ ಬಾರಿ ರಾಜಕೀಯ ಜಿದ್ದಾಜಿದ್ದಿ

ಕೋಲಾರದಲ್ಲಿ ಸಿದ್ದರಾಮಯ್ಯನವರ ಅಖಾಡ/ ಸ್ಪರ್ಧೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿರುವ ಬಿಜೆಪಿಯ ವರ್ತೂರು ಪ್ರಕಾಶ್ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯನವರು ಚುನಾವಣೆ ನಡೆ ಪ್ರಸ್ತಾಪಿಸಿದ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸೋಲಿಸಿದ್ದು, ಡಾ.ಜಿ.ಪರಮೇಶ್ವರ ವಿರುದ್ಧ ಹುನ್ನಾರ ಮಾಡಿದನ್ನು ಕುಟುಕಿದ್ದರು. ಅವರ ಸ್ಪರ್ಧೆಯಿಂದ ಕೋಲಾರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂದು ಭವಿಷ್ಯ ನುಡಿದ್ದಾರೆ.
ಇತ್ತ ಸಚಿವ ಡಾ.ಕೆ.ಸುಧಾಕರ್ ಕೋಲಾರದಾದ್ಯಂತ ಸಂಚರಿಸಿದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಗುಡಗಿದ್ದಾರೆ.

ಇನ್ನೂ ಸಿದ್ದು ವಿರುದ್ಧ ಕಿಡಿ ಕಾರುತ್ತಿದ್ದ ಎಚ್‌ಡಿ ಕುಮಾರಸ್ವಾಮಿ ಅವರು ತಂತ್ರ ರೂಪಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ ಕೋಲಾರದಿಂದ ಆಯ್ಕೆಯಾದವರಿಗೆ ಡಿಸಿಎಂ ಸ್ಥಾನ ಘೋಷಿಸಿದ್ದಾರೆ. ಇವೆಲ್ಲ ನೋಡಿದರೆ ಈ ಬಾರಿ ಇಲ್ಲಿ ಬಿರುಸಿನ ಜಿದ್ದಾಜಿದ್ದಿ ನಡೆಯುವುದು ಪಕ್ಕಾ ಎನ್ನಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+