ಚಿಕ್ಕಮಗಳೂರಿನಿಂದ ಕೋಲಾರ ಡಿಸಿಯಾಗಿ ಸತ್ಯವತಿಗೆ ವರ್ಗ
ಬೆಂಗಳೂರು, ಅಕ್ಟೋಬರ್ 08: ಕರ್ನಾಟಕ ಸರ್ಕಾರ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ(ಅಕ್ಟೋಬರ್ 08) ಸಂಜೆ ಆದೇಶ ಹೊರಡಿಸಿದೆ.
ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಇನ್ಸ್ ಪೆಕ್ಟರ್ ಜನರಲ್ ಆಗಿದ್ದ ಮನೋಜ್ ಕುಮಾರ್ ಮೀನಾ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ಸತ್ಯವತಿ ಜಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೋಲಾರ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಡಾ. ಕೆವಿ ತ್ರಿಲೋಕ್ ಚಂದ್ರ ಸ್ಥಾನಕ್ಕೆ ಸತ್ಯವತಿ ಅವರು ನೇಮಕವಾಗಿದ್ದಾರೆ.

ವರ್ಗಾವಣೆಯಾದ ಅಧಿಕಾರಿಗಳು:
* ಮನೋಜ್ ಕುಮಾರ್ ಮೀನಾ- ಆರೋಗ್ಯ ಮತ್ತು ಕುಟುಂಬ ಇಲಾಖೆ, ಬೆಂಗಳೂರು
* ಸತ್ಯವತಿ ಜಿ-ಕೋಲಾರ ಜಿಲ್ಲಾಧಿಕಾರಿ
* ಡಾ. ಕೆ.ವಿ ತ್ರಿಲೋಕ ಚಂದ್ರ-ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಇನ್ಸ್ ಪೆಕ್ಟರ್ ಜನರಲ್
* ಶ್ರೀರಂಗಯ್ಯ ಎಂ.ಕೆ- ಚಿಕ್ಕಮಗಳೂರು ಜಿಲ್ಲಾಧಿಕಾರಿ












Click it and Unblock the Notifications