ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಗಾರಪೇಟೆಯಲ್ಲಿ ಮೋದಿ : ಕಾಂಗ್ರೆಸ್ 6 ರೋಗದಿಂದ ಬಳಲುತ್ತಿದೆ!

|
Google Oneindia Kannada News

ಕೋಲಾರ, ಮೇ 09 : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಮೋದಿ ಅವರು ಬುಧವಾರ 4 ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬುಧವಾರ ಬಂಗಾರಪೇಟೆ, ಚಿಕ್ಕಮಗಳೂರು, ಬೆಳಗಾವಿ ಮತ್ತು ಬೀದರ್‌ನಲ್ಲಿ ಚುನಾವಣಾ ಪ್ರಚಾರವನ್ನು ನರೇಂದ್ರ ಮೋದಿ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಅವರು ಬಂಗಾರಪೇಟೆಗೆ ಆಗಮಿಸಿದ್ದು, ಚುನಾವಣಾ ಪ್ರಚಾರ ಭಾಷಣವನ್ನು ಆರಂಭಿಸಿದ್ದಾರೆ.

'ಜನರು ಕಾಂಗ್ರೆಸ್ ಪಕ್ಷಕ್ಕೆ 5 ವರ್ಷಗಳ ಕಠಿಣ ಶಿಕ್ಷೆ ನೀಡಲಿದ್ದಾರೆ''ಜನರು ಕಾಂಗ್ರೆಸ್ ಪಕ್ಷಕ್ಕೆ 5 ವರ್ಷಗಳ ಕಠಿಣ ಶಿಕ್ಷೆ ನೀಡಲಿದ್ದಾರೆ'

Karnataka elections : Narendra Modi election campaign rally Bangarapet

ಮೋದಿ ಭಾಷಣದ ಮುಖ್ಯಾಂಶಗಳು

ಕುದಿಯುವ ಕೊಪ್ಪಳದಲ್ಲಿ ಕಾಂಗ್ರೆಸ್ ನಾಯಕರ ಬೆವರಿಳಿಸಿದ ಮೋದಿಕುದಿಯುವ ಕೊಪ್ಪಳದಲ್ಲಿ ಕಾಂಗ್ರೆಸ್ ನಾಯಕರ ಬೆವರಿಳಿಸಿದ ಮೋದಿ

* ಈ ಬಾರಿಯ ಕರ್ನಾಟಕದ ಚುನಾವಣೆ ರಾಜ್ಯದ ಯುವ ಜನಾಂಗದ ಭವಿಷ್ಯವನ್ನು ನಿರ್ಧರಿಸಲಿದೆ. ಕಾಂಗ್ರೆಸ್ ಪಕ್ಷದ ಹಣೆ ಬರಹ ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ಆದ್ದರಿಂದ, ಜನರು ಪಕ್ಷವನ್ನು ತಿರಸ್ಕರಿಸಲಿದ್ದಾರೆ.

* ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ತ್ರಿಪುರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಏನಾಯಿತು?. ಮೇ 15ರಂದು ಕರ್ನಾಟಕದಲ್ಲಿ ಅದೇ ಆಗಲಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

* ಕಾಂಗ್ರೆಸ್ ಪಕ್ಷ 6 ರೋಗಗಳಿಂದ ಬಳಲುತ್ತಿದೆ, ಇದರಿಂದಾಗಿ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ
1. ಕಾಂಗ್ರೆಸ್ ಸಂಸ್ಕೃತಿ
2. ಕೋಮುವಾದ
3. ಜಾತೀಯತೆ
4. ಕ್ರೈಂ
5.ಭ್ರಷ್ಟಾಚಾರ
6. ಗುತ್ತಿಗೆದಾರಿಕೆ

* ದೆಹಲಿಯಲ್ಲಿ 10 ವರ್ಷ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆದರೆ, ಅವರ ರಿಮೋಟ್ ಕಂಟ್ರೋಲ್ 10 ಜನಪಥದಲ್ಲಿತ್ತು.

* ಕೇಂದ್ರದಲ್ಲಿ 4 ವರ್ಷದಿಂದ ಬಿಜೆಪಿ ಸರಕಾರವಿದೆ. ನಮ್ಮದೂ ರಿಮೋಟ್ ಇದೆ. ನಮ್ಮ ರಿಮೋಟ್ ದೇಶದ 125 ಕೋಟಿ ಜನರು. ಜನತಾ ಜನಾರ್ದನ ನಮ್ಮ ಹೈಕಮಾಂಡ್.

* ಕೆಲವರು ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದ್ದಾರೆ. ಆದರೆ, ಅದು ಕೋಲಾರದ ಮಣ್ಣಿನಿಂದ ಮಾಡಿದ ಚಿನ್ನದ್ದಲ್ಲ, ಭ್ರಷ್ಟಾಚಾರದ ಹಣದಿಂದ ಮಾಡಿದ್ದು.

* ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಜನರಿಗೆ ಬಡಜನರ ಕಷ್ಟ ತಿಳಿದಿಲ್ಲ. 60 ವರ್ಷ ಅಧಿಕಾರ ನಡೆಸಿದರೂ ಗ್ರಾಮದ ಜನರಿಗೆ ಶೌಚಾಲಯವನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಸರ್ಕಾರ ನಾಲ್ಕು ವರ್ಷದಲ್ಲಿ ಗ್ರಾಮದಲ್ಲಿ ಶೌಚಾಲಯದ ಕ್ರಾಂತಿ ಮಾಡಿದರೆ ಇವರು ಮೋದಿ ಶ್ರೀಮಂತರಿಗಾಗಿ ಕೆಲಸ ಮಾಡುತ್ತಾರೆ ಎಂದು ಆರೋಪ ಮಾಡುತ್ತಾರೆ.

* ತನ್ನನ್ನು ತಾನು ಪ್ರಧಾನಿ ಎಂದು ಘೋಷಣೆ ಮಾಡಿಕೊಳ್ಳುವುದು ಅಹಂಕಾರ. ಈ ನಾಮಧಾರಿಗಳ ಅಹಂಕಾರ ಎಷ್ಟಿದೆ ಎಂದರೆ ಆಕಾಶದಷ್ಟು ಎತ್ತರಕ್ಕೆ ಏರಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನವಾಗಿದೆ.

* 2019ರಲ್ಲಿ ಮೋದಿಯನ್ನು ತೊಲಗಿಸಲು ದೊಡ್ಡ ಮೈತ್ರಿ ನಡೆಯುತ್ತಿದೆ. ಈ ಮೈತ್ರಿಯಲ್ಲಿ ಹಲವು ದೊಡ್ಡ ದೊಡ್ಡ ನಾಯಕರು ಇದ್ದಾರೆ. ಆದರೆ, ಮೈತ್ರಿಕೂಟದ ಎಲ್ಲಾ ನಾಯಕರನ್ನು ಕತ್ತಲಲ್ಲಿ ನಿಲ್ಲಿಸಿ ತನ್ನನ್ನು ತಾನು ಪ್ರಧಾನಿ ಎಂದು ಘೋಷಣೆ ಮಾಡಿಕೊಳ್ಳಲಾಗುತ್ತಿದೆ.

* ಮೊದಲು ಗ್ರಾಮ ಪಂಚಾಯಿತಿಯಿಂದ ಸಂಸತ್‌ ತನಕ ಕಾಂಗ್ರೆಸ್ ಪಕ್ಷದ ಧ್ವಜ ಹಾರಾಡುತ್ತಿತ್ತು. ಆದರೆ, ಪ್ರಜಾಪ್ರಭುತ್ವಕ್ಕೆ ಅವರು ಗೌರವ ನೀಡಲಿಲ್ಲ. ಆದ್ದರಿಂದ, ಈಗ 40 ಸೀಟಿಗೆ ಬಂದು ಕುಳಿತಿದ್ದಾರೆ. ಇದು ಜನರು ಮಾಡಿದ ಆಶೀರ್ವಾದ.

* ಕಾಂಗ್ರೆಸ್ ಬಡವರ ಪಕ್ಷವಲ್ಲ, ಶ್ರಮಿಕರ ಪಕ್ಷವಲ್ಲ, ದಿಲ್‌ ವಾಲಾ (ಹೃದಯವಂತರ) ಪಕ್ಷವಲ್ಲಿ. ಅದು ಡೀಲ್ ಮಾಡುವವರು ಪಕ್ಷ. ಎಲ್ಲರದರಲ್ಲೂ ಅದು ಡೀಲ್ ಮಾಡುತ್ತದೆ.

* ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಟಿಕೆಟ್ ಅನ್ನು ಹಂಚುವುದಿಲ್ಲ, ಮಾರುತ್ತಾರೆ. ಈ ಮಾತನ್ನು ನಾನು ಹೇಳುತ್ತಿಲ್ಲ. ಚಿಕ್ಕಬಳ್ಳಾಪುರದಿಂದ ಸಂಸತ್ತಿಗೆ ಆಯ್ಕೆಯಾಗಿ ಬಂದ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.

* ಸಾಮಾಜಿಕ ಜಾಲತಾಣದಲ್ಲಿ ವೀರಪ್ಪ ಮೊಯ್ಲಿ ಅವರು ಈ ಮಾತನ್ನು ಹೇಳಿದ್ದರು. ಕಾಂಗ್ರೆಸ್ ಟಿಕೆಟ್‌ ಮಾರಾಟವಾಗುತ್ತಿದೆ. ವೀರಪ್ಪ ಮೊಯ್ಲಿ ಅವರು ಸಾಮಾನ್ಯರಲ್ಲ. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು. ಅವರೇ ಇದನ್ನು ಹೇಳಿದ್ದಾರೆ.

* ಕಾಂಗ್ರೆಸ್ ಪಕ್ಷ ನಿಜಲಿಂಗಪ್ಪ, ದೇವರಾಜ್ ಅರಸ್ ಅವರನ್ನು ಹೇಗೆ ನಡೆಸಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿಸಿದೆ. ಈಗ ವೀರಪ್ಪ ಮೊಯ್ಲಿ ಅವರ ಸರದಿ, ಮೋದಿ ಅವರ ಬಾಯಿಗೆ ಈಗ ಟೇಪ್ ಹಾಕಲಾಗಿದೆ. ಅವರಿಗೆ ಮಹಾಕಾವ್ಯ ಬರೆಯುವ ಕಾರ್ಯವನ್ನು ನೀಡಲಾಗಿದೆ.

* ಕಾಂಗ್ರೆಸ್ ಪಕ್ಷದ ಸಚಿವರ ಮನೆ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಸಿಕ್ಕ ಸಂಪತ್ತು ಈ ರಾಜ್ಯದ ರೈತರದ್ದು, ಸಾಮಾನ್ಯ ಜನರದ್ದು. ಇದು ರಾಜ್ಯದ ಪ್ರತಿಯೊಬ್ಬ ಜನರಿಗೂ ತಿಳಿದಿದೆ.

* ಕೋಲಾರದ ಹೆಸರು K ಯಿಂದ ಆರಂಭವಾಗುತ್ತದೆ. ಹೌದು 'ಕೆ' ಎಂದರೆ ಕಿಂಗ್. ಕೋಲಾರ ಎಂದರೆ ರಾಜ

* ಕೋಲಾರ ಎಂದರೆ...
ಕಿಂಗ್ ಆಫ್ ಮ್ಯಾಂಗೋ (ಮಾವಿನ ಹಣ್ಣಿನ ರಾಜ)
ಕಿಂಗ್ ಆಫ್ ಮೆಟಲ್ (ಚಿನ್ನದ ರಾಜ)
ಕಿಂಗ್ ಆಫ್ ಸಿಲ್ಕ್ ( ರೇಷ್ಮೆಯ ರಾಜ)
ಕಿಂಗ್ ಆಫ್ ಮಿಲ್ಕ್ (ಹಾಲಿನ ರಾಜ)

* ಕೋಲಾರದ ಜನರು ಕುಡಿಯುವ ನೀರು ಕೇಳಲು ಮುಖ್ಯಮಂತ್ರಿಗಳ ಬಳಿ ಹೋದರು. ಅವರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು, ಈ ಮೂಲಕ ಸರ್ಕಾರ ರೈತರಿಗೆ ಅವಮಾನ ಮಾಡಿತು.

* ಕಾಂಗ್ರೆಸ್ ವಂಶಪಾರಂಪರ್ಯ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಹೊಸ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಅದು ಸುಳ್ಳು ಹೇಳುವುದು, ಪದೇ ಪದೇ ಸುಳ್ಳು ಹೇಳುವುದು, ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಸುಳ್ಳು ಹೇಳುವುದು.

* ಕಾಂಗ್ರೆಸ್ ಪಕ್ಷ ಮೂರು 'ಪಿ'ಗಳಿಗೆ ಸೀಮಿತವಾಗಿದೆ. ಅವರ ಪ್ರಕಾರ ಪಿಪಿಪಿ ಎಂದರೆ (ಪಂಜಾಬ್, ಪಾಂಡಿಚೇರಿ, ಪರಿವಾರ).

* ಹೊಸ ನಾಯಕರು ಬೆಳೆದರೆ ಇವರು ಕುಟುಂಬ ಬೆಳೆಯುವುದಿಲ್ಲ ಎಂಬ ಆತಂಕ ಕಾಂಗ್ರೆಸ್ ಪಕ್ಷದ ನಾಯಕರಲ್ಲಿದೆ. ಆದ್ದರಿಂದ, ಇಲ್ಲಿನ ನಾಯಕರು ತಮ್ಮ ಕುಟುಂಬದವರಿಗೆ ಟಿಕೆಟ್ ಕೊಡಿಸಿದ್ದಾರೆ.

* ಕಾಂಗ್ರೆಸ್ ಪಕ್ಷ ಮೀಸಲಾತಿ ವಿಚಾರದಲ್ಲಿ ದಲಿತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷವು ಹೇಳುವ ಸುಳ್ಳುಗಳನ್ನು ನಂಬಬೇಡಿ. ದಲಿತಪರ ಕಾರ್ಯಗಳಿಗೆ ಬಿಜೆಪಿ ನೀಡಿದಷ್ಟು ಕೊಡುಗೆಯನ್ನು ಬೇರೆ ಯಾವ ಪಕ್ಷವೂ ನೀಡಿಲ್ಲ.

* ದಲಿತರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಹೇಳಿತ್ತು. ಆದರೆ, ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಅವರನ್ನು ಬದಿಗೆ ಸರಿಸಲಾಯಿತು.

* ನಾನು ಯಡಿಯೂರಪ್ಪ ಮತ್ತು ಇತರ ಬಿಜೆಪಿ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಡವರಿಗೆ, ದಲಿತರಿಗೆ, ರೈತರಿಗೆ ಉತ್ತಮ ಭರವಸೆಯನ್ನು ನೀಡಿದ್ದೇವೆ. ಇದನ್ನು ಮತದಾರರ ಮನೆ-ಮನೆಗೆ ತಲುಪಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ರಚಿಸಲು ಸಹಕರಿಸಿ.

English summary
As campaigning is underway in poll-bound Karnataka. PM Narendra Modi address rally in Bangarapet on May 09, 2018. Here are the Live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X